ಕನ್ನಡಪ್ರಭ ವಾರ್ತೆ ರಾಮದುರ್ಗ ನರೇಂದ್ರ ಮೋದಿ ಪ್ರಧಾನಿಯಾದರೇ ಬೆಳಗಾವಿಯಿಂದ ಗೆಲ್ಲುವ ಜಗದೀಶ ಶೆಟ್ಟರ ಕೇಂದ್ರ ಮಂತ್ರಿಯಾಗುತ್ತಾರೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಭವಿಷ್ಯ ನುಡಿದರು.
ಚುನಾವಣೆ ವೇಳೆ ಕೆಲವರು ಜಾತಿಯ ವೀಷಬೀಜ ಬಿತ್ತಲು ಹೊರಟಿದ್ದಾರೆ. ಅಲ್ಲದೆ, ಜಗದೀಶ ಶೆಟ್ಟರ ಹೊರಗಿನವರು ಎಂಬಂತಹ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು. ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿ, ಬೆಳಗಾವಿ ಜಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಭಾಗದ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ವಿಷಯಗಳನ್ನು ಪ್ರಸ್ತಾಪಿಸಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ಪಾಟೀಲ ಮಾತನಾಡಿ, ಪಕ್ಷ ಬಲಪಡಿಸುವ ಬಗ್ಗೆ ಮಾಹಿತಿ ನೀಡಿದರು.ಬಿಜೆಪಿ ಮುಖಂಡ ಬಿ.ಎಸ್.ಬೆಳವಣಕಿ ಮಾತನಾಡಿ, ಪ್ರಾಮಾಣಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಚುನಾವಣೆ ಮಾಡಬೇಕು, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದರು.
ತಾಲೂಕಿನ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಬಿಜೆಪಿಯ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿದರು. ಕಾರ್ಯಕ್ರಮದಲ್ಲಿ ಐ.ಎಸ್.ಹರನಟ್ಟಿ, ದ್ಯಾವಪ್ಪ ಬೆಳವಡಿ, ಸಂಜು ಶೆಟ್ಟಿಸದಾವರ್ತಿ, ಸಿದ್ದಪ್ಪ ವಾದಿ, ಸಿದ್ದು ಮೇತ್ರಿ, ರಮೇಶ್ ಅಣ್ಣಿಗೇರಿ, ಮೈಲಾರಪ್ಪ, ದುಂಡಪ್ಪ ದೇವರಡ್ಡಿ, ಲಕ್ಷ್ಮಣ ಕನಸಗೇರಿ, ಶ್ರೀಶೈಲ ಮೆಳ್ಳಿಕೇರಿ, ಈರನಗೌಡ ಹೊಸಗೌಡರ, ರಮೇಶ್ ಅರಕೇರಿ, ರಾಜು ಮರಲಿಂಗನವರ, ಚಂದ್ರಕಾಂತ ಹೊಸಮನಿ, ಸುರೇಶ ಕುಲಗೋಡ ಮುಂತಾದವರು ಹಾಜರಿದ್ದರು.