ನಿಜವಾಯ್ತು ದುರಂತದ ಬಗ್ಗೆ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯ!

Published : Jun 14, 2025, 07:12 AM IST
kodi mutt shree swamiji predictions

ಸಾರಾಂಶ

ದೇಶದಲ್ಲಿ ಸಂಭವಿಸಿದ ದುರಂತಗಳ ಕುರಿತು ಈ ಮೊದಲೇ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದ್ದು, ಅವರು ಹೇಳಿದಂತೆ ರಾಜ್ಯದಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಹಾಗೂ ಅಹಮದಾಬಾದ್‌ನಲ್ಲಿ ವಿಮಾನ ದುರ್ಘಟನೆ ಆಗಿ ಅಪಾರ ಸಾವುನೋವು ಆಗಿವೆ.

  ಬೆಳಗಾವಿ : ದೇಶದಲ್ಲಿ ಸಂಭವಿಸಿದ ದುರಂತಗಳ ಕುರಿತು ಈ ಮೊದಲೇ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದ್ದು, ಅವರು ಹೇಳಿದಂತೆ ರಾಜ್ಯದಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಹಾಗೂ ಅಹಮದಾಬಾದ್‌ನಲ್ಲಿ ವಿಮಾನ ದುರ್ಘಟನೆ ಆಗಿ ಅಪಾರ ಸಾವುನೋವು ಆಗಿವೆ.

ಕೆಳದ 10 ದಿನದ ಹಿಂದಷ್ಟೇ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದ ಕೋಡಿಮಠ ಶ್ರೀಗಳು, ''ವಾಯುಗಂಡ'' ಇದ್ದು, ವಾಯುನಿಂದ ದೇಶದಲ್ಲಿ ದೊಡ್ಡ ಅನಾಹುತ ಸಂಭವಿಸಿ ಅತಿಹೆಚ್ಚು ಸಾವು ನೋವು ಆಗಲಿದೆ ಎಂದು ಎಚ್ಚರಿಸಿದ್ದರು. ಈ ಬೆನ್ನಲ್ಲೇ ಕಾಲ್ತುಳಿತದಲ್ಲಿ ಉಸಿರಾಟದ ಸಮಸ್ಯೆಯಿಂದ 11 ಆರ್‌ಸಿಬಿ ಅಭಿಮಾನಿಗಳು ಸಾವಿಗಿಡಾಗಿದ್ದರು.

ಇನ್ನು ಏ.20ರಂದು ಬೆಂಕಿ ಕೆಂಡದ ಮೇಲೆ ನಡೆದು ಕಾಲಜ್ಞಾನ ನುಡಿದಿದ್ದ ಬೈಲಹೊಂಗಲ ತಾಲೂಕಿನ ನಯಾನಗರ ಸುಖದೇವಾನಂದ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ‘ಉಕ್ಕಿನ ಹಕ್ಕಿಗೆ ಪೆಟ್ಟು ಬೀಳ್ತೈತಪ್ಪ‘ ಎಂದಿದ್ದರು. ವಿಮಾನಕ್ಕೆ ಉಕ್ಕಿನ ಹಕ್ಕಿ ಎಂದು ಸಹ ಕರೆಯಲಾಗುತ್ತದೆ. ಇವರ ಭವಿಷ್ಯವಾಣಿ ನಿಜವಾಗಿದ್ದು, ಜೂ.12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪೆಟ್ಟು ಬಿದ್ದು, 241ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

PREV
Read more Articles on

Recommended Stories

ಮುಖ್ಯ ಶಿಕ್ಷಕನ ಎತ್ತಂಗಡಿ ಮಾಡಿಸಲು ಶಾಲೆ ಕುಡಿವ ನೀರಿನ ಟ್ಯಾಂಕಿಗೆ ವಿಷ!
ರೋಗಿಯನ್ನು ಆಸ್ಪತ್ರೆಗೆ ಸೇರಿಸಲು 8 ಕಿ.ಮೀ. ಚಟ್ಟದ ಮೇಲೆ ಹೊತೊಯ್ದರು