ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Mar 01, 2026, 03:30 AM IST
ಮಲ್ಲಮ್ಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ- 2026ರ ಜಾನಪದ ಕಲಾವಾಹಿನಿಗೆ ಶನಿವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಶಾಸಕ ಮಹಾಂತೇಶ ಕೌಜಲಗಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ- 2026ರ ಜಾನಪದ ಕಲಾವಾಹಿನಿಗೆ ಶನಿವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಶಾಸಕ ಮಹಾಂತೇಶ ಕೌಜಲಗಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಎಸಿ ಪ್ರವೀಣ ಜೈನ್‌, ತಹಸೀಲ್ದಾರ್‌ ಹನುಮಂತ ಶಿರಹಟ್ಟಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳಕ್ಕೆ ಚಾಲನೆ ನೀಡಿದರು. ಕಲಾ ತಂಡಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಮಲ್ಲಮ್ಮ ವೃತ್ತ ತಲುಪಿತು.

ಜಾನಪದ ಕಲಾವಾಹಿನಿ ಆಕರ್ಷಣೆ

ಜಾನಪದ ಕಲಾ ವಾಹಿನಿಯಲ್ಲಿ ಕಲಾ ತಂಡಗಳು ನೋಡುಗರಿಗೆ ಕಲಾ ರಸದೌತಣ ಉಣಬಡಿಸಿತು. ಗೂಳಪ್ಪ ವಿಜಯನಗರದ ಪುರವಂತಿಕೆ, ಶಿವನಪ್ಪ ಚಂದರಗಿ ಡೊಳ್ಳು ಕುಣಿತ, ಶಂಕರವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ, ರಾಮಚಂದ್ರ ಕಾಂಬಳೆ ನಾಸಿಕ ಡೋಲು, ಭರತ ಕಲಾಚಂದ್ರ ಜಾಂಜ್‌ ಪದಕ, ಮಹಾಂತೇಶ ಹೂಗಾರ ಸಂಬಳವಾದನ, ಶಿವಪ್ಪ ಕುಂಬಾರ ಕರಡಿ ಮಜಲು, ಮಿಲಿಂದ ಸಂಗಣ್ಣವರ ಹಲಗೆ ವಾದನ, ಬಾಲಪ್ಪ ಭಜಂತ್ರಿ ತಾಸೇ ವಾದನ, ಬೆಳಗಾವಿಯ ಶಾಂತಿಸಾಗರ ಜಾಂಜ್‌ ಪದಕ, ಮಲ್ಲಿಕಾರ್ಜುನ ನಿಚ್ಚಣಿ ಕರಡಿ ಮಜಲು, ರುದ್ರಪ್ಪ ಹಳೇಮನಿ ವೀರಗಾಸೆ, ಮಂಜು ಮತ್ತು ತಂಡ ವೀರಗಾಸೆ, ಕುಮಾರನಾಯಕ ಮತ್ತು ತಂಡ ಡೊಳ್ಳು ಕುಣಿತ ಸೇರಿದಂತೆ ರಂಗಸ್ವಾಮಿ ಮತ್ತು ತಂಡ ವೇಷಧಾರಿಗಳು, ಬೆಳವಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರೂಪಕ ವಾಹನ ನೋಡುಗರ ಗಮನ ಸೆಳೆಯಿತು. ಕಲಾವಿದರು ತಮ್ಮ ಕಲಾ ಪ್ರತಿಭೆ ತೋರಿ ಸಾರ್ವಜನಿಕರನ್ನು ರಂಜಿಸಿದರು. ಮೆರವಣಿಗೆಯಲ್ಲಿ ವಿವಿಧ ಭಂಗಿಗಳಲ್ಲಿ ಕಲೆ ಪ್ರದರ್ಶನ ಮಾಡಿದರು. 23 ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗ್ರಾಮಸ್ಥರು ಹಣೆಗೆ ತಿಲಕ, ಪೇಠ ತೊಟ್ಟು ಮೆರವಣಿಗೆಗೆ ಸಾಥ್‌ ನೀಡಿದರು. ಸುಮಂಗಲೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಪ್ರೊಬೆಷನರಿ ಎಸ್ಪಿ ಡಾ.ಬಾನು ಪ್ರಕಾಶ, ಸಿಪಿಐ ಶಿವಾನಂದ ಗುಡಗನಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಿಎಸ್‌ಐಗಳಾದ ಎಚ್‌.ಕೆ.ಪಾಟೀಲ, ಗಂಗಾಧರ ಹಂಪಣ್ಣವರ, ಪಿಡಿಓ ಮುತ್ತು ಬರಗಿ, ಚಂದ್ರಶೇಖರಯ್ಯ ಕಾರಿಮನಿ, ಶ್ರೀಶೈಲ ಬೋಳನ್ನವರ, ಸವಿತಾ ಪಾಟೀಲ, ಪ್ರಕಾಶ ಹುಂಬಿ, ಈರಣ್ಣಾ ಕರೀಕಟ್ಟಿ, ಸುನೀಲ ವರ್ಣೇಕರ ಹಾಗೂ ಸದಸ್ಯರು, ಯುವಕ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಸ್ತ್ರೀಶಕ್ತಿ ಸಂಘಟನೆ ಸದಸ್ಯರುಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.

-------

ಕೋಟ್‌ :

ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಸುಮಾರು 2 ಸಾವಿರ ಮಹಿಳಾ ಸೈನ್ಯ ಕಟ್ಟಿ ಬಲಿಷ್ಠ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದೊಂದಿಗೆ ಹೋರಾಡಿ ವಿಜಯಶಾಲಿಯಾಗಿ ಶಿವಾಜಿ ಮಹಾರಾಜರಿಂದ ಸಹೋದರತ್ವ ಬಾಂಧವ್ಯ ಹೊಂದಿ, ಕನ್ನಡ ಮತ್ತು ಮರಾಠಿ ಭಾಷಿಕರೊಂದಿಗೆ ಬಾಂಧವ್ಯ ಬೆಸೆದ ಬೆಳವಡಿ ಮಲ್ಲಮ್ಮಳ ಸಾಹಸ-ಶೌರ್ಯ, ನಾಡ ಪ್ರೇಮ ಇಂದಿನ ಯುವ ಪೀಳಿಗೆ ಪ್ರೇರಣೆಯಾಗಲು ಆಚರಿಸುತ್ತಿರುವ ಬೆಳವಡಿ ಮಲ್ಲಮ್ಮ ಉತ್ಸವ ಯಶಸ್ವಿಯಾಗಲಿ ಜರುಗಲೆಂದು ಹಾರೈಸಿದರು.

ಮಹಾಂತೇಶ ಕೌಜಲಗಿ ಶಾಸಕರು, ಬೈಲಹೊಂಗಲ

--------

ಕೋಟ್‌ :

ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ, ಪರಾಕ್ರಮದ ಇತಿಹಾಸ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿದ್ದು, ನಾಡು-ನುಡಿ ರಕ್ಷಣೆಗಾಗಿ ಹೋರಾಡಿ ವೀರ ಮರಣವಪ್ಪಿದ್ದ ರಾಣಿ ಮಲ್ಲಮ್ಮಳ ನಾಡ ಪ್ರೇಮ ಎಲ್ಲರಿಗೂ ಸ್ಪೂರ್ತಿಯಾಗಿದೆ. ಯುವ ಪೀಳಿಗೆಗೆ ಅವಳ ಸಾಹಸಗಾಥೆ, ಜೀವನ ಚರಿತ್ರೆ ಕುರಿತು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಸರಕಾರ ಪ್ರತಿವರ್ಷ ಉತ್ಸವ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಪ್ರತಿಯೊಬ್ಬರು ಅವಳ ಶೌರ್ಯ, ಸಾಹಸ, ನಾಡ ಪ್ರೇಮವನ್ನು ತಮ್ಮ ಜೀವನದಲ್ಲಿ ಅವಳಡಿಸಿಕೊಳ್ಳಬೇಕು.

ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್