ರಾಮನಗರ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಜಿಲ್ಲಾಡಳಿತವೇ ಒಪ್ಪಿಕೊಳ್ಳದ ಮನಸ್ಥಿತಿಯಲ್ಲಿ ಇದ್ದಂತಿದೆ.
ಜಿಲ್ಲಾಡಳಿತ ಕಚೇರಿ ಮಾತ್ರವಲ್ಲದೆ ಜಿಲ್ಲಾ ಪಂಚಾಯಿತಿ, ಪೊಲೀಸ್ ಭವನ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಯಿರುವ ತಾಲೂಕು ಆಡಳಿತ ಸೌಧದ ವಿಳಾಸ ರಾಮನಗರ ಜಿಲ್ಲೆ ಅಂತಲೇ ಮುಂದುವರೆದಿದೆ.
ಕಳೆದ ಮೇ 22ರಂದು ರಾಜ್ಯ ಸಚಿವ ಸಂಪುಟದಲ್ಲಿ ರಾಮನಗರ ಜಿಲ್ಲೆ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ನಿರ್ಣಯ ಕೈಗೊಳ್ಳುತ್ತಿದ್ದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ವಿಳಾಸದಲ್ಲಿ ರಾತ್ರೋರಾತ್ರಿ ಬದಲಾವಣೆಗೊಂಡಿತು.ಆನಂತರ ರಾಜ್ಯ ಸರ್ಕಾರ ಮೇ 23ರಂದು ಅಧಿಸೂಚನೆ ಹೊರಡಿಸಿದ ತರುವಾಯ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ವಿಳಾಸದಲ್ಲಿ ಜಿಲ್ಲೆ ಹೆಸರು ಬದಲಾವಣೆಗೊಂಡಿದೆ. ಉಳಿದ ಯಾವ ಇಲಾಖೆಗಳ ವಿಳಾಸದಲ್ಲಿಯೂ ಜಿಲ್ಲೆಯ ಹೆಸರು ಬದಲಾವಣೆ ಕಂಡಿಲ್ಲ.
ರಾಜ್ಯ ಸರ್ಕಾರ ಮೇ 23ರಂದು ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ ರಾಮನಗರ ಜಿಲ್ಲೆ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಆದೇಶಿಸಿತ್ತು.
ಡಿಸಿಎಂ ತವರು ಜಿಲ್ಲೇಲೆ ಅಧಿಕಾರಿಗಳ ಅಸಡ್ಡೆ :
ಸರ್ಕಾರಿ ಇಲಾಖೆ ಅಧಿಕಾರಿಗಳು ಸಾಮಾನ್ಯವಾಗಿ ಜನಸಾಮಾನ್ಯರ ಕೆಲಸ ಮಾಡಬೇಕಾದರೆ ಸರ್ಕಾರದ ಆದೇಶಗಳನ್ನು ಮುಖಕ್ಕೆ ಹಿಡಿಯುತ್ತಾರೆ. ಆದರೆ, ಅದೇ ಸರ್ಕಾರ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ರಾಜ್ಯಸರ್ಕಾರದ ಅಧಿಸೂಚನೆಯಲ್ಲಿ ಏನಿದೆ ?
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾರವರು ಸಹಿ ಹಾಕಿ ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯ ಪ್ರತಿಗಳನ್ನು ಭಾರತ ಗೃಹ ಮಂತ್ರಾಲಯ (ಸಿಎಸ್ ವಿಭಾಗ, ಎಂ ಮತ್ತು ಜಿ ವಿಭಾಗ)ದ ಸರ್ಕಾರದ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಮಂತ್ರಾಲಯದ ಸರ್ಕಾರದ ಕಾರ್ಯದರ್ಶಿ, ಡೆಹರಾಡೂನ್ ನ ಸರ್ವೆಯರ್ ಜನರಲ್ ಆಫ್ ಇಂಡಿಯಾ, ಕರ್ನಾಟಕದ ಜಿಯೋ ಸ್ಟಾಷಿಯಲ್ ಡಾಟಾ ಸೆಂಟರ್ ನ ನಿರ್ದೇಶಕರು ಸೇರಿದಂತೆ 14 ಇಲಾಖೆಗಳಿಗೆ ರವಾನಿಸಲಾಗಿದೆ.
(30ಕೆಆರ್ ಎಂಎನ್ -8,9.ಜೆಪಿಜಿ)ರಾಜ್ಯ ಸರ್ಕಾರದ ಅಧಿಸೂಚನೆ ಹಾಗೂ ಕರ್ನಾಟಕ ರಾಜ್ಯಪತ್ರ
-----------------------ಕೋಟ್ ..................
ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ಇಲಾಖೆಗಳ ವಿಳಾಸ ಹಾಗೂ ಪತ್ರ ವ್ಯವಹಾರಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರನ್ನು ಬಳಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.- ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ
--------------------------------ಕೋಟ್ ................
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಒಪ್ಪಿಕೊಳ್ಳಲು ಸರ್ಕಾರಿ ಅಧಿಕಾರಿಗಳಿಗೆಯೇ ಮನಸ್ಸಿಲ್ಲ. ಸರ್ಕಾರಕ್ಕೆ ಬಲವಂತದಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರಿ ಇಲಾಖೆ ಬೋರ್ಡುಗಳಲ್ಲಿ ಬರೆಸುವ ಪರಿಸ್ಥಿತಿ ಉಂಟಾಗಿದೆ. ಈಗ ಜನರು ತಮ್ಮ ಆಧಾರ್ , ವೋಟರ್ ಐಡಿ ಸೇರಿದಂತೆ ಎಲ್ಲ ದಾಖಲೆಗಳಲ್ಲು ಜಿಲ್ಲೆ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಪರಿತಪಿಸಬೇಕಾಗಿದೆ. ಜನಸಾಮಾನ್ಯರು ಅನುಭವಿಸುವ ಯಾತನೆಗೆ ಯಾರು ಹೊಣೆ ?-ಎ.ಮಂಜುನಾಥ್ ,ಜಿಲ್ಲಾಧ್ಯಕ್ಷರು, ಜೆಡಿಎಸ್ ,ರಾಮನಗರ.
----------------------------30ಕೆಆರ್ ಎಂಎನ್ 2,3,4,5,6,7,8,9.ಜೆಪಿಜಿ
2.ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ3.ಜಿಲ್ಲಾಧಿಕಾರಿಗಳ ಕಚೇರಿ ವಿಳಾಸ ರಾಮನಗರ ಜಿಲ್ಲೆ ಎಂದಿರುವುದು.
4.ರಾಮನಗರ ಜಿಪಂ ಕಚೇರಿ5.ರಾಮನಗರ ಪೊಲೀಸ್ ಭವನ
6.ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ.7.ಎ.ಮಂಜುನಾಥ್ ,ಜಿಲ್ಲಾಧ್ಯಕ್ಷರು, ಜೆಡಿಎಸ್ ,ರಾಮನಗರ.
8,9.ರಾಜ್ಯ ಸರ್ಕಾರದ ಅಧಿಸೂಚನೆ ಹಾಗೂ ಕರ್ನಾಟಕ ರಾಜ್ಯಪತ್ರ