ಕನ್ನಡಪ್ರಭ ವಾರ್ತೆ ಮಧುಗಿರಿ
ನಾಕು ತಂತಿಯ ನಾದ ಲೀಲೆಯನ್ನು ಕನ್ನಡ ನುಡಿಯಲ್ಲಿ ಉಣ ಬಡಿಸಿದ ಕವಿ ಬೇಂದ್ರೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟು ಒಲವೇ ನಮ್ಮ ಬದುಕು ಎಂದು ಸಖಿ ಗೀತವನ್ನು ಹಾಡುವ ಮೂಲಕ ನಾಡಿನ ಜನರ ಮನ ಗೆದ್ದರು. ಜನರ ಆಡು ಭಾಷೆಯನ್ನೇ ಕಾವ್ಯ ಮಟ್ಟಕ್ಕೆ ಏರಿಸಿ ಈ ನೆಲದ ಸಂಸ್ಕೃತಿ, ಸಭ್ಯತೆಯನ್ನು ಸಾರಿದ ಬೇಂದ್ರೆ ಮುಂದಿನ ಕವಿಗಳ ಮೇಲೆ ಪ್ರಭಾವ ಬೀರಿರುವುದನ್ನು ಸಾರಸ್ವತ ಲೋಕದಲ್ಲಿ ಕಾಣಬಹುದು ಎಂದರು.
ಮನೆ ಮಾತು ಮರಾಠಿ ಆದರೂ ಕನ್ನಡಮ್ಮನ ಸೇವೆಗೆ ಸದಾ ಚೊಂಕ ಕಟ್ಟಿ ನಿಂತ ಬೇಂದ್ರೆ ಅಮರ ಕವಿ, ಸಮಾಜದಲ್ಲಿ ಜನರು ತಿಳಿದು ಬದುಕಿ ,ತುಳಿದು ಬದುಕದಿರಿ ಎಂದ ಬೇಂದ್ರೆಯವರು ಕನ್ನಡದ ಬೆಳಗು ಎಂದರು.ಉಪನ್ಯಾಸಕ ಮಂಜು ಪ್ರಸಾದ್ ಬೇಂದ್ರೆ ಅವರ ನಾಟಕಗಳನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ.ಎಚ್.ಹನುಮಂತರಾಯಪ್ಪ ಮಾತನಾಡಿ, ಹದ ಬೇರೆತ ಬೇಂದ್ರೆ ಕಾವ್ಯ ಸದಾ ಹಸಿರಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸತೀಶ್,ಪವಿತ್ರಾ,ಕಲಾವತಿ ಹಾಗೂ ವಿದ್ಯಾರ್ಥಿಗಳು ಇದ್ದರು.