ದೇಶದ ಕಡೇ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭ: ಶಾಸಕ ಬಿ.ಪಿ.ಹರೀಶ್

KannadaprabhaNewsNetwork | Published : Jan 22, 2024 2:21 AM

ಸಾರಾಂಶ

ಭಾರತ ಇಂದು ಜಗತ್ತಿನಲ್ಲೇ ಅತಿ ಶಕ್ತಿಯುತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲದೆ ಕೋವಿಡ್‌ನ ಸಂಕಷ್ಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಉಚಿತವಾಗಿ ಲಸಿಕೆಗಳ ನೀಡಿ ಮಾದರಿ ದೇಶವಾಗಿ ಹೊರಹೊಮ್ಮಿದೆ. ಆರೋಗ್ಯ, ರಸ್ತೆ, ಶಿಕ್ಷಣ, ಕೃಷಿ, ಮಹಿಳೆ, ಭದ್ರತೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ತರುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟು ಅಭಿವೃದ್ಧಿಯ ಶಖೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ವಿಕಸಿತ ಭಾರತ್ ಅಭಿಯಾನದ ಮೂಲ ಉದ್ದೇಶವೂ ಆಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ್ ಯಾತ್ರೆ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳ ಜಾರಿಯ ಪರಿಣಾಮ ಇಂದು ದೇಶದ ಕಟ್ಟ ಕಡೆಯ ವ್ಯಕ್ತಿಯೂ ಯೋಜನೆಗಳ ಲಾಭ ಪಡೆದು ನೆಮ್ಮದಿ ಜೀವನ ಸಾಗಿಸುವಂತಾಗಿದೆ ಎಂದರು.

ಭಾರತ ಇಂದು ಜಗತ್ತಿನಲ್ಲೇ ಅತಿ ಶಕ್ತಿಯುತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲದೆ ಕೋವಿಡ್‌ನ ಸಂಕಷ್ಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಉಚಿತವಾಗಿ ಲಸಿಕೆಗಳ ನೀಡಿ ಮಾದರಿ ದೇಶವಾಗಿ ಹೊರಹೊಮ್ಮಿದೆ. ಆರೋಗ್ಯ, ರಸ್ತೆ, ಶಿಕ್ಷಣ, ಕೃಷಿ, ಮಹಿಳೆ, ಭದ್ರತೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ತರುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟು ಅಭಿವೃದ್ಧಿಯ ಶಖೆ ಆರಂಭಿಸಿದ್ದಾರೆ ಎಂದರು.೫೦೦ ವರ್ಷದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದು ದೇಶದಲ್ಲೇ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ನಾವೇಲ್ಲರೂ ಈ ಸಂತೋಷದಲ್ಲಿ ಭಾಗಿಯಾಗೋಣವೆಂದರು.

ಜಿ.ಎಸ್. ಅನಿತ್ ಕುಮಾರ್ ಮಾತನಾಡಿ, ಒಂದು ಕಾಲದಲ್ಲಿ ಸರ್ಕಾರ ನೀಡಿದ ಸಹಾಯಧನ ಫಲಾನುಭವಿಗಳ ಕೈ ಸೇರುವಷ್ಟರಲ್ಲಿ ಶೇ.೭೫ ರಷ್ಟು ಸೋರಿಕೆಯಾಗುತ್ತಿತ್ತು, ಆದರೆ ಮೋದಿಯವರ ಕೇಂದ್ರ ಸರ್ಕಾರವು ಡಿಬಿಟಿ ಯೋಜನೆ ಜಾರಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಿ ಸೋರಿಕೆಯಾಗುವುದು ತಡೆದಿದ್ದಾರೆ ಎಂದರು. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಜಾರಿಯ ಪರಿಣಾಮ ದೇಶದ ಮಹಿಳೆಯರ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಡಿ ಈಗಾಗಲೇ ನಗರ ವ್ಯಾಪ್ತಿಯಲ್ಲಿ ೩೦೬೮ ಅರ್ಜಿ ಸ್ವೀಕರಿಸಲಾಗಿದೆ ಹಾಗೂ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ೪೪೮ ಫಲಾನುಭವಿಗಳಿಗೆ ಸೌಲಭ್ಯ ನೀಡಿಲಾಗಿದೆ ಎಂದರು.

ಈ ವೇಳೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಹಾಗೂ ಸ್ವನಿಧಿ ಫಲಾನುಭವಿಗಳಿಗೆ ಆದೇಶ ಪ್ರತಿಗಳ ವಿತರಣೆ ಮಾಡಲಾಯಿತು. ಸಭೆಯಲ್ಲಿ ಯೂನಿಯನ್ ಬ್ಯಾಂಕ್‌ನ ಶರ್ಮ, ಅಂಚೆ ಇಲಾಖೆಯ ಲತಾ, ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ಸದಸ್ಯರಾದ ಆಟೋ ಹನುಮಂತಪ್ಪ, ಅಶ್ವಿನಿ ಕೃಷ್ಣ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್, ನಗರಾಧ್ಯಕ್ಷ ಅಜಿತ್ ಸಾವಂತ್, ರಾಜು ರೋಖಡೆ, ಆರಾಧ್ಯ, ಶಿವಶಂಕರ್ ಹಾಗೂ ಇತರರಿದ್ದರು.

Share this article