ಸ್ತನ್ಯಪಾನ ಸ್ನೇಹಿ ಆಸ್ಪತ್ರೆಯಾಗಿ ಜನರಿಗೆ ಅನುಕೂಲ

KannadaprabhaNewsNetwork |  
Published : Sep 13, 2024, 01:34 AM IST
(ಪೊಟೋ 12ಬಿಕೆಟಿ5,ಸುರಕ್ಷಿತ ಸ್ತನಪಾನದ ಕುರಿತು ವಿಶೇಷ ಕಾರ್ಯಾಗಾರದ ಉದ್ಘಾಟನೆ) | Kannada Prabha

ಸಾರಾಂಶ

ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ಸ್ತನ್ಯಪಾನ ಸ್ನೇಹಿ ಆಸ್ಪತ್ರೆಯಾಗಿರುವುದರಿಂದ ಈ ಭಾಗದ ಜನರಿಗೆ ಅನಕೂಲವಾಗಿದೆ ಎಂದು ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ಭುವನೇಶ್ವರಿ ಸಿ. ಯಳಮಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ಸ್ತನ್ಯಪಾನ ಸ್ನೇಹಿ ಆಸ್ಪತ್ರೆಯಾಗಿರುವುದರಿಂದ ಈ ಭಾಗದ ಜನರಿಗೆ ಅನಕೂಲವಾಗಿದೆ ಎಂದು ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ಭುವನೇಶ್ವರಿ ಸಿ. ಯಳಮಲಿ ಹೇಳಿದರು.

ಅವರು ಬಿ.ವ್ಹಿ.ವ್ಹಿ ಸಂಘದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಹಾಗೂ ಬ್ರೆಸ್ಟ್ ಫೀಡಿಂಗ್ ಪ್ರಮೋಷನ್ ನೆಟ್‌ವರ್ಕ್‌ ಆಫ್ ಇಂಡಿಯಾ (ಬಿಪಿಎನ್ಐ) ಸಂಸ್ಥೆಯ ಸಹಯೋಗದಲ್ಲಿ ಏಳು ದಿನಗಳ ಕಾಲ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಪಿಎನ್ಐ ಸಂಸ್ಥೆ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಕಳೆದ 32 ವರ್ಷಗಳಿಂದ ಸತತವಾಗಿ ಭಾರತದಲ್ಲಿ ಸ್ತನ್ಯಪಾನದ ಮಹತ್ವ ಮತ್ತು ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಬಿ.ವ್ಹಿ.ವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಹಾಗೂ ವೈದ್ಯಕೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ರವರು ಸ್ತನ್ಯಪಾನ ಸ್ನೇಹಿ ಆಸ್ಪತ್ರೆಯ ಮಾನ್ಯತೆಯನ್ನು ದೊರಕಿಸಿಕೊಟ್ಟು ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ಬಡಕಲಿ ಮಾತನಾಡಿದರು. ಐ.ವಾಯ್.ಸಿ.ಎಫ್. ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ವಿ.ರಘುನಾಥ, ಐ.ವೈ.ಸಿ.ಎಫ್. ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಿ.ಎಸ್.ಲತಾ, ಬಿಪಿಎನ್ಐ ಕೋರ್ಸ್‌ ನಿರ್ದೇಶಕರಾದ ಡಾ.ಸಿ.ಆರ್.ಬಾನಾಪುರಮಠ, ಜೆ.ಜೆ.ಎಮ್.ಸಿ ದಾವಣಗೆರೆ, ಡಾ.ಕೆ.ಕೇಸವಲು, ಲಿನ್ಸಿ ಪ್ರಾರ್ಥನಾ ರಾಚಲ್, ಇವರು ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡಾ.ಭುವನೇಶ್ವರಿ ಯಳಮಲಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ