ದೊಡ್ಡಬಳ್ಳಾಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಾತ್ಮಕ ಸೇವೆ ಹಾಗೂ ಸಾಮಾಜಿಕ ಕಾಳಜಿಯ ಸಂಕೇತವಾಗಿರುವ ಲಯನ್ಸ್ ಸಂಸ್ಥೆ ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಬಿ.ಎಸ್.ನಾಗರಾಜ್ ಹೇಳಿದರು.
ಸಮಯ, ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಸಮಾಜಕ್ಕೆ ನೀಡುವ ಸಂಕಲ್ಪ ಈ ಸಂಸ್ಥೆಯದ್ದಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಕಳೆದ 4 ವರ್ಷಗಳ ಹಿಂದೆ ಆರಂಭವಾದ ಆರ್.ಎಲ್.ಜಾಲಪ್ಪ ಲಯನ್ಸ್ ಸಂಸ್ಥೆ ತನ್ನ ಸ್ಪೂರ್ತಿದಾಯಕ ಸೇವೆಯಿಂದ ಜಿಲ್ಲೆ 317ಎಫ್‌ನಲ್ಲಿ ಸತತವಾಗಿ ಮೊದಲ ಸ್ಥಾನ ಪಡೆಯುತ್ತಿರುವುದು ಗಣನೀಯ. ಹೊಸ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಯೋಜನಾಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗುಣಾತ್ಮಕ ಆಶಯ ಅಗತ್ಯ:ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಸ್ಥಾಪನೆಯಾದ ದಿನದಿಂದಲೂ ಅನೇಕ ರಚನಾತ್ಮಕ ಕಾರ್ಯಗಳಿಂದ ಗಮನ ಸೆಳೆಯುತ್ತಿರುವ ಲಯನ್ಸ್ ಸಂಸ್ಥೆಯಲ್ಲಿ ಸೇವೆಯೇ ಪ್ರಧಾನ ಆಶಯವಾಗಿದೆ. ನಿರ್ದಿಷ್ಟ ಫಲಾನುಭವಿಗಳಿಗೆ ಸೇವೆ ತಲುಪಿದಾಗ ಸಾರ್ಥಕತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಗುಣಾತ್ಮಕ ಆಶಯಗಳನ್ನು ಅನುಷ್ಠಾನಕ್ಕೆ ತರುವುದು ಅಗತ್ಯ ಎಂದರು.
800ಕ್ಕೂ ಹೆಚ್ಚು ಸೇವಾ ಕಾರ್ಯ:ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಸಕ್ತ ವರ್ಷದಲ್ಲಿ 800ಕ್ಕೂ ಹೆಚ್ಚು ಸೇವಾ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ಆಯೋಜಿಸಲಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 8 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಮುಟ್ಟಿದೆ. ಈ ಹಂತದಲ್ಲಿ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.
ವಿನೂತನ ಕಾರ್ಯಕ್ರಮಗಳಿಗೆ ಒತ್ತು:ಪದಗ್ರಹಣ ಸ್ವೀಕಾರ ಭಾಷಣ ಮಾಡಿದ ನಿಯೋಜಿತ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಉತ್ತಮ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸದಾ ಮುಂದಿರುವ ಲಯನ್ಸ್ ಸಂಸ್ಥೆಯ ಮೂಲಕ ವಿನೂತನ ಚಿಂತನೆಗಳ ಸಾಕಾರಕ್ಕೆ ಯೋಜಿಸಲಾಗಿದೆ. ಯುವಜನರಿಗೆ ಕೌಶಲ್ಯಾಭಿವೃದ್ದಿ ತರಬೇತಿ, ವಲಸಿಗ ಕನ್ನಡೇತರರಿಗೆ ಸರಳ ಕನ್ನಡ ಕಲಿಕೆಗೆ ಮಾರ್ಗದರ್ಶನ, ಜಾಲಪ್ಪ ಜನ್ಮಶತಮಾನೋತ್ಸವ ವರ್ಷದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ತಮ್ಮ ಅವಧಿಯಲ್ಲಿ ನಿರ್ವಹಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಜಿಲ್ಲಾ ಮಧುಮೇಹ ವಿಭಾಗ ಸಂಯೋಜಕ ಎಲ್.ಎನ್.ಪ್ರದೀಪ್ ಕುಮಾರ್, ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ಸಹಕಾರ್ಯದರ್ಶಿ ವರದರಾಜು, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ನೂತನ ಪದಾಧಿಕಾರಿಗಳು:
ಪ್ರೊ.ರವಿಕಿರಣ್ ಕೆ.ಆರ್(ಅಧ್ಯಕ್ಷ), ಸುಮಾ ಎ.ಎಸ್(ಕಾರ್ಯದರ್ಶಿ), ಕೆ.ಸಿ.ನಾಗರಾಜ್(ಖಜಾಂಚಿ),ಮುಕೇಶ್ ಎನ್.ಆರ್(ಸಹ ಕಾರ್ಯದರ್ಶಿ), ಕೆ.ಎಂ.ಮುನಿರಾಮೇಗೌಡ, ಕೆ.ಜಿ.ಶ್ರೀನಿವಾಸಮೂರ್ತಿ, ಬಾಬುಸಾಬಿ.ಎಚ್.ಕೆ(ಉಪಾಧ್ಯಕ್ಷರು), ಜೆ.ಆರ್.ರಾಕೇಶ್(ಎಲ್‌ಸಿಐಎಂ ಸಂಯೋಜಕ), ಎಂ.ಆರ್.ಶ್ರೀನಿವಾಸ್(ಸದಸ್ಯತ್ವ ಸಮಿತಿ ಮುಖ್ಯಸ್ಥ), ಎಸ್.ರವಿಕುಮಾರ್(ಸೇವಾ ಘಟಕದ ಮುಖ್ಯಸ್ಥ), ಬಿ.ಎಸ್.ಅರುಂಧತಿ(ಮಾರ್ಕೆಟಿಂಗ್ ಸಮಿತಿ ಮುಖ್ಯಸ್ಥೆ), ಡಾ.ಎಂ.ಶ್ರೀನಿವಾಸರೆಡ್ಡಿ(ಆಡಳಿತಾಧಿಕಾರಿ), ಹರ್ಷ ವೈ.ಎಂ(ಕಾರ್ಯಕ್ರಮ ಸಮಿತಿ ಮುಖ್ಯಸ್ಥ), ಎನ್.ಎಸ್.ರಶ್ಮಿ(ಪಿಆರ್‌ಒ), ಟಿ.ಮಹಂತೇಶಪ್ಪ(ಟೇಲ್‌ಟ್ವಿಸ್ಟರ್), ಎನ್.ವೆಂಕಟೇಶ್(ಟೇಮರ್), ವಿವಿಧ ಉಪ ಸಮಿತಿಗಳ ಮುಖ್ಯಸ್ಥರಾಗಿ ಎಲ್.ಎನ್.ಪ್ರದೀಪ್‌ಕುಮಾರ್(ವಿಜನ್), ಕೆ.ವಿ.ಪ್ರಸನ್ನಕುಮಾರ್(ಮಧುಮೇಹ), ಲಕ್ಷ್ಮೀಶ್ರೀನಿವಾಸ್(ಮಹಿಳಾ ಕ್ಷೇಮಾಭಿವೃದ್ದಿ), ಜಿಯಾವುಲ್ಲಾಖಾನ್(ಕ್ವೆಸ್ಟ್), ಅಜ್ಮತ್ ಉನ್ನೀಸಾ(ಮಾನಸಿಕ ಆರೋಗ್ಯ), ಕೆ.ಎಂ.ಅರಸೇಗೌಡ(ದಂತ), ಡಾ.ರವಿಕಿರಣ್(ಪಶುಆರೋಗ್ಯ), ಕೆ.ಮಂಜುನಾಥ್(ಹಸಿವು ನಿವಾರಣೆ), ಎನ್.ಎಸ್.ಬಾಬುರೆಡ್ಡಿ(ಪರಿಸರ), ಆರ್.ಎಂ.ಸುನಿಲ್‌ಕುಮಾರ್(ಯುವಜನ), ಕೆ.ಆರ್.ಮಂಜುಳಾ(ಸ್ಕ್ರಾಬ್ ಬುಕ್), ಕೆ.ವೀಣಾ(ಕನ್ನಡ ಮತ್ತು ಸಂಸ್ಕೃತಿ), ಬಿ.ಜ್ಯೋತಿ(ಪೀಸ್ ಪೋಸ್ಟರ್) ಮತ್ತು ಡಾ.ಚಿಕ್ಕಣ್ಣ(ಸಂಪಾದಕ), ನಿರ್ದೇಶಕರಾಗಿ ಬಿ.ಕೃಷ್ಣಪ್ಪ, ಐ.ಎಂ.ರಮೇಶ್‌ಕುಮಾರ್, ಎಲ್.ಎನ್.ನಾಗರಾಜ್, ಬಿ.ಆರ್.ವೇಣುಗೋಪಾಲ್, ಅತಿಕ್ ಅಹ್ಮದ್, ಸೈಯದ್ ನಿಜಾಮ್, ಡಾ.ವಿನಯಬಾಬು, ಡಾ.ಸಂದೀಪ್‌ರೆಡ್ಡಿ, ಡಾ.ವಿಜಯಕಾರ್ತಿಕ್, ಡಾ.ಕೆ.ಎಂ.ಶಿವಪ್ರಸಾದ್, ಡಾ.ಬಿ.ಎನ್.ಮಂಜುನಾಥ್, ಡಾ.ಮೃತ್ಯುಂಜಯ, ಎಂ.ಎಂ.ವಿಜಯಕುಮಾರ್, ಬಿ.ವಿಜಯ್‌ಕುಮಾರ್, ಮೇಘನಾ ವರ್ಣಿ, ಎನ್.ಎನ್.ಕಾವ್ಯ, ಸರಿತಾ ನಾಗರಾಜ್ ಮತ್ತು ರೋಜಾ ಮುಕೇಶ್ ಪದಗ್ರಹಣ ಕೈಗೊಂಡರು.4ಕೆಡಿಬಿಪಿ2-
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.