ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದೇ ದಿನ 69 ಲಕ್ಷ ಲೀಟರ್‌ ಮದ್ಯ ಮಾರಾಟ!

Published : Jan 02, 2025, 10:00 AM IST
Delhi Liquor Dry Days

ಸಾರಾಂಶ

ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.31 ರಂದು ಭರ್ಜರಿ ಮದ್ಯ ಮಾರಾಟವಾಗಿದೆ. ಒಂದೇ ದಿನದಲ್ಲಿ 69 ಲಕ್ಷ ಲೀಟರ್‌ ಮದ್ಯ ಬಿಕರಿಯಾಗಿದೆ.

ಬೆಂಗಳೂರು: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.31 ರಂದು ಭರ್ಜರಿ ಮದ್ಯ ಮಾರಾಟವಾಗಿದೆ. ಒಂದೇ ದಿನದಲ್ಲಿ 69 ಲಕ್ಷ ಲೀಟರ್‌ ಮದ್ಯ ಬಿಕರಿಯಾಗಿದೆ.

ಮಂಗಳವಾರ ಒಂದೇ ದಿನದಲ್ಲಿ ವಿಸ್ಕಿ, ಬ್ರಾಂಡಿ, ರಮ್‌ ಸೇರಿದಂತೆ ಬರೋಬ್ಬರಿ 5.27 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದೆ. ಒಂದು ಬಾಕ್ಸ್‌ಗೆ 8.64 ಲೀಟರ್‌ನಂತೆ ಒಟ್ಟು 45.53 ಲಕ್ಷ ಲೀಟರ್‌ ಮದ್ಯ ಮಾರಾಟವಾಗಿದೆ. ಸುಮಾರು 3 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದ್ದು, ಒಂದು ಬಾಕ್ಸ್‌ಗೆ 7.8 ಲೀಟರ್‌ನಂತೆ 23.4 ಲಕ್ಷ ಲೀಟರ್‌ ಬಿಯರ್‌ ಸೇರಿದಂತೆ ಒಟ್ಟಾರೆ 68.93 ಲಕ್ಷ ಲೀಟರ್‌ ಮದ್ಯ ಮಾರಾಟವಾಗಿದೆ.

2023ರ ವರ್ಷಾಂತ್ಯಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಅಧಿಕ ಪ್ರಮಾಣ ಮದ್ಯ ಮಾರಾಟವಾಗಿದೆ. 2023 ಡಿ.31 ರಂದು ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ 193 ಕೋಟಿ ರು. ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮಂಗಳವಾರ ಒಂದೇ ದಿನ ಸುಮಾರು 250 ಕೋಟಿ ರು. ರಾಜಸ್ವ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ವೈನ್ಸ್‌ ಸ್ಟೋರ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಪಬ್‌, ಎಂಎಸ್‌ಐಎಲ್‌ ಮಳಿಗೆ, ಸಗಟು ಮಾರಾಟ ಮಳಿಗೆಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಜೋರಾಗಿದ್ದರಿಂದ ಅಧಿಕ ಪ್ರಮಾಣದ ವ್ಯಾಪಾರವಾಗಿದೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ