;Resize=(412,232))
ಹೊಸಪೇಟೆ : ಕಲ್ಟ್ ಸಿನಿಮಾ ರಿಲೀಸ್ ಒಳಗಡೆ ನಟ ದರ್ಶನ್ ಜೈಲಿಂದ ಹೊರಗೆ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ನಟ ಜೈದ್ ಖಾನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಟ ದರ್ಶನ್ ಅಣ್ಣ ಆದಷ್ಟು ಬೇಗ ಜೈಲಿಂದ ಹೊರಗೆ ಬರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತಿರುವೆ. ದರ್ಶನ್‌ರನ್ನು ನಾನು ಕೇವಲ ಬಾಯಿ ಮಾತಿನಿಂದ ಅಣ್ಣ ಎಂದು ಕರೆಯುವುದಿಲ್ಲ, ನಿಜ ಜೀವನದಲ್ಲಿ ನನಗೆ ಅಣ್ಣ ಯಾರೂ ಇಲ್ಲ. ಆ ಜಾಗ ದರ್ಶನ್ ಅವರು ತುಂಬಿ ಕರ್ತವ್ಯ ನಿರ್ವಹಿಸಿದರು.
ಅವರು ಈಗ ಜೈಲಲ್ಲಿ ಇರುವುದು ಬೇಜಾರಾಗುತ್ತೆ. ನನ್ನ ಮೊದಲ ಸಿನಿಮಾಕ್ಕೆ ನನಗೆ ಅಣ್ಣನ ಹಾಗೇ ದರ್ಶನ್ ಬೆನ್ನೆಲುಬಾಗಿದ್ದರು. ಈಗ ಎರಡನೇ ಸಿನಿಮಾ ವೇಳೆ ಅವರು ಇದ್ದಿದ್ದರೆ ನನಗೆ ಶಕ್ತಿ ಜಾಸ್ತಿ ಆಗಿರುತ್ತಿತ್ತು. ಇಲ್ಲಿಯವರೆಗೂ ನಾನು ದರ್ಶನ್ ಅವರನ್ನು ಜೈಲಿಗೆ ಹೋಗಿ ಭೇಟಿ ಆಗಿಲ್ಲ.
ಸಿನಿಮಾ ರಿಲೀಸ್ ಒಳಗೆ ದರ್ಶನ್ ಅವರು ಹೊರಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಜೈಲಿನಿಂದ ಬರಲಿಲ್ಲ ಎಂದರೆ, ನಾನು ಅನುಮತಿ ಪಡೆದುಕೊಂಡು ಜೈಲಿಗೆ ಹೋಗುವೆ. ದರ್ಶನ್ ಅವರನ್ನು ಭೇಟಿ ಆಗಿ ಆಶೀರ್ವಾದ ತೆಗೆದುಕೊಂಡು ಕಲ್ಟ್ ಸಿನಿಮಾ ರಿಲೀಸ್ ಮಾಡುವೆ ಎಂದರು.