ಶಂಕರಘಟ್ಟದಲ್ಲಿ ಅಮೃತ್‌ ನೋನಿ ಚಿಂತನ-ಮಂಥನ : -ಅಮೃತ್‌ ನೋನಿ, ಕುವೆಂಪು ವಿವಿ, ಕೃಷಿ ವಿವಿ ಸಹಯೋಗದಲ್ಲಿ ಸಮ್ಮೇಳನ

Published : Apr 15, 2025, 11:19 AM IST
Amruth noni

ಸಾರಾಂಶ

ಇಲ್ಲಿನ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯಲ್ಲಿ ಏ.10ರಿಂದ ಅಮೃತ್‌ ನೋನಿ, ಕೃಷಿ ವಿವಿ ಸಹಯೋಗದಲ್ಲಿ ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ'''' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಶನಿವಾರ ತೆರೆ ಕಂಡಿದೆ.

 ಶಿವಮೊಗ್ಗ : ಇಲ್ಲಿನ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯಲ್ಲಿ ಏ.10ರಿಂದ ಅಮೃತ್‌ ನೋನಿ, ಕೃಷಿ ವಿವಿ ಸಹಯೋಗದಲ್ಲಿ ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ'''' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಶನಿವಾರ ತೆರೆ ಕಂಡಿದೆ.

ಈ ಸಮ್ಮೇಳನಕ್ಕೆ ಕರ್ನಾಟಕ ಮಾತ್ರವಲ್ಲದೆ ಸುಮಾರು 4ಕ್ಕೂ ಹೆಚ್ಚು ದೇಶಗಳಿಂದ, ಭಾರತದ ವಿವಿಧ ರಾಜ್ಯಗಳಿಂದ ಸಂಶೋಧಕರು ಭಾಗವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆ ಸಹಯೋಗದಲ್ಲಿ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಬಸವ ಸಭಾಭವನದಲ್ಲಿ ಈ ಸಮ್ಮೇಳನ ಜರುಗಿತು. ಹೈದರಾಬಾದ್ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಅಪ್ಪಾರಾವ್ ಪೋಡಿಲೆ ಸಮ್ಮೇಳನವನ್ನು ಉದ್ಘಾಟಿಸಿದರು.

ಕುವೆಂಪು ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಥಾಯ್ಲೆಂಡ್‌ನ ಚುಲಾಂಗ್‌ಕೊರ್ನ್ ವಿವಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಸುಖಾಡಾ ಸುಕ್ರೋಂಗ್ ದಿಕ್ಕೂಚಿ, ಚೀನಾದ ಎಲೆಕ್ಟ್ರಾನಿಕ್ ಸೈನ್ಸ್ ಹಾಗೂ ಟೆಕ್ನಾಲಜಿ ವಿವಿಯ ಸಜೀವ ಮಹರಾಚಿಕುಂಬುರ, ಅಮೆರಿಕದ ಅಲಬಾಮಾ ವಿವಿಯ ಡಾ.ದರ್ಶನ್, ಕೆಳದಿ ಕೃಷಿ ವಿವಿ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ಅಮೃತ್ ನೋನಿ ವ್ಯಾಲ್ಯೂ ಪ್ರಾಡಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಕೆ.ಶ್ರೀನಿವಾಸಮೂರ್ತಿ ಮುಂತಾದವರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ 644ಕ್ಕೂ ಹೆಚ್ಚು ಸಂಶೋಧಕರು, 200ಕ್ಕೂ ಹೆಚ್ಚು ಪ್ರಬಂಧ ಮಂಡನೆ ಮಾಡುವವರು ಭಾಗವಹಿಸಿದ್ದರು. ಮೂರನೇ ದಿನ ವ್ಯಾಲ್ಯೂ ಪ್ರಾಡಕ್ಟ್ ಕಂಪನಿಯು ಅಮೃತ್ ನೋನಿ ಡಿ ಪ್ಲಸ್, ಅಮೃತ್ ನೋನಿ ಅರ್ಥೋ ಪ್ಲಸ್ ಸೇರಿ ಇತರ ಪ್ರಾಡಕ್ಟ್‌ಗಳ ಬಗ್ಗೆ ನಡೆದ ಸಂಶೋಧನೆಯ ವಿವರ ಒದಗಿಸಲಾಯಿತು.

ನೋನಿ ಹಣ್ಣಿನ ಬಹುಪಯೋಗ ಸಂಶೋಧನೆ ಬಗ್ಗೆ ಚರ್ಚೆ:ನೋನಿ ಹಣ್ಣಿನಿಂದ ಬಹಳಷ್ಟು ಉತ್ಪನ್ನಗಳನ್ನು ತಯಾರಿಸಿ ಮನೆಮಾತಾಗಿರುವ ಅಮೃತ್ ನೋನಿ ವ್ಯಾಲ್ಯೂ ಪ್ರಾಡಕ್ಟ್ ಕಂಪನಿ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ಸಮ್ಮೇಳನದಲ್ಲಿ ನೋನಿ ಹಣ್ಣಿನ ಬಹುಪಯೋಗ ಸಂಶೋಧನೆ ಬಗ್ಗೆ ಚರ್ಚೆ ಮಾಡಲಾಗಿದೆ. ಮೊದಲ ದಿನ ಅಮೃತ್ ನೋನಿ ಆಂಟಿ ಏಜಿಂಗ್ ಟಾನಿಕ್ ಎಂಬ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಕುವೆಂಪು ವಿವಿ ಪ್ರೊ.ಕೃಷ್ಣ ಮುಂದಾಳತ್ವದಲ್ಲಿ ಈ ಸಂಶೋಧನೆ ನಡೆದಿದೆ. ಶಿವಮೊಗ್ಗ, ಕೃಷಿ ವಿಶ್ವವಿದ್ಯಾಲಯದ ಡಾ। ತಿಪ್ಪೇಶ್, ಕುವೆಂಪು ವಿವಿ ಬಯೋಟೆಕ್ನಾಲಜಿ ವಿಭಾಗದ ಪ್ರೊ.ಪ್ರಭಾಕರ್‌ ಬಿ.ಟಿ ಅವರು ತಾವು ನಡೆಸಿದ ಸಂಶೋಧನೆ ಬಗ್ಗೆ ಮಾಹಿತಿ ನೀಡಿದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ