ಅನನ್ಯಾ ಭಟ್‌ ಅರವಿಂದ್‌-ವಿಮಲಾ ಪುತ್ರಿ, ಕೊ* ಆಗಿದ್ದು ನಿಜ: ಸುಜಾತಾ

Published : Aug 23, 2025, 06:14 AM IST
Sujatha Bhat

ಸಾರಾಂಶ

ಅನನ್ಯಾ ಭಟ್‌ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದ್ದು ಈವರೆಗೂ ಅನನ್ಯಾ ಭಟ್‌ ಅವರ ತಾಯಿ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್‌, ಇದೀಗ ಅನನ್ಯ ಭಟ್‌ ನನ್ನ ಮಗಳಲ್ಲ. ಆದರೆ, ನನ್ನ ಸ್ನೇಹಿತರಾದ ಅರವಿಂದ ಹಾಗೂ ವಿಮಲಾ ಅವರ ಮಗಳಾಗಿದ್ದು, ಅವಳ ಅತ್ಯಾ*ರ ಹಾಗೂ ಕೊಲೆಯಾಗಿದ್ದು ನಿಜ ಎಂದು ಹೇಳಿದ್ದಾರೆ.

ಬೆಂಗಳೂರು : ಅನನ್ಯಾ ಭಟ್‌ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದ್ದು ಈವರೆಗೂ ಅನನ್ಯಾ ಭಟ್‌ ಅವರ ತಾಯಿ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್‌, ಇದೀಗ ಅನನ್ಯ ಭಟ್‌ ನನ್ನ ಮಗಳಲ್ಲ. ಆದರೆ, ನನ್ನ ಸ್ನೇಹಿತರಾದ ಅರವಿಂದ ಹಾಗೂ ವಿಮಲಾ ಅವರ ಮಗಳಾಗಿದ್ದು, ಅವಳ ಅತ್ಯಾ*ರ ಹಾಗೂ ಕೊಲೆಯಾಗಿದ್ದು ನಿಜ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುಜಾತಾ ಭಟ್‌, ಧರ್ಮಸ್ಥಳದಲ್ಲಿ 2003ರಲ್ಲಿ ಅನನ್ಯಾ ಭಟ್‌ ಅತ್ಯಾ*ರ ಮತ್ತು ಕೊಲೆ ಆಗಿರುವುದು ನಿಜ. ಅನನ್ಯಾಭಟ್‌ ನನ್ನ ಸ್ನೇಹಿತರಾರ ಅರವಿಂದ್‌ ಮತ್ತು ವಿಮಲಾ ಅವರ ಮಗಳು. ಆಕೆ ಮೆಡಿಕಲ್‌ ಓದುತ್ತಿರಲಿಲ್ಲ. ನನಗೆ ಬೆದರಿಕೆ ಇದ್ದುದರಿಂದ ನನ್ನ ಸುರಕ್ಷತೆಗಾಗಿ ಆಕೆ ನನ್ನ ಮಗಳು ಎಂಬ ಕಟ್ಟುಕಥೆಯನ್ನು ಸೃಷ್ಟಿಸಿದ್ದೆ. ಆದರೆ, ಅನನ್ಯಾ ಭಟ್‌ ಅವಳ ಅತ್ಯಾ*ರ ಮತ್ತು ಕೊಲೆಯಾಗಿದ್ದು ನಿಜ ಎಂದು ಹೇಳಿದ್ದಾರೆ.

2004ರಲ್ಲಿ ಅರವಿಂದ್‌ ಮತ್ತು ವಿಮಲಾ ಅವರು ನನಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸುವಂತೆ ಕೋರಿದ್ದರು. ಆ ಪತ್ರ ನನ್ನ ಬಳಿಯಿದ್ದು ನನ್ನ ಪರ ವಕೀಲರಿಗೆ ಮತ್ತು ಎಸ್‌ಐಟಿ ಅವರಿಗೆ ಕೊಡುತ್ತೇನೆ. ಅಲ್ಲದೇ ಸುರತ್ಕಲ್‌ನಲ್ಲಿ ಅರವಿಂದ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು ಅರವಿಂದ್‌ ಮತ್ತು ವಿಮಲಾ ಅವರ ಮನೆಯನ್ನು ಸುಟ್ಟು ಹಾಕಿದ ಜಾಗವನ್ನು ಹಾಗೆಯೇ ರೈಲ್ವೆ ನಿಲ್ದಾಣದ ಸಮೀಪ ಪೆಟ್ರೋಲ್‌ ಸುರಿದುಕೊಂಡು ಅವರಿಬ್ಬರು ಆತ್ಮಕತ್ಯೆ ಮಾಡಿಕೊಂಡ ಸ್ಥಳವನ್ನು ತೋರಿಸುತ್ತೇನೆ. ಹಾಗೆಯೇ ಅನನ್ಯಾ ಭಟ್‌ ಅವರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಜಾಗವನ್ನು ಕೂಡ ತೋರಿಸುತ್ತೇನೆ ಎಂದಿದ್ದಾರೆ.

ಧರ್ಮಸ್ಥಳ ಹೋದಾಗ ಮಿಸ್‌ ಆಗಿದ್ದಾಳೆ:

2003ರಲ್ಲಿ ನಾವು ಧರ್ಮಸ್ಥಳ ಹೋಗಿದ್ವಿ. ಆಗ ಧರ್ಮಸ್ಥಳದಲ್ಲಿ ಅನನ್ಯಾ ಮಿಸ್‌ ಆಗಿದ್ದಳು. 3 ಜನ ನನ್ನನ್ನು ಕರೆದುಕೊಂಡು ಹೋಗಿ ಕೂಡಿ ಹಾಕಿದ್ದು, ಒಂದು ರಾತ್ರಿ ಅಲ್ಲಿ ಇಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ನನ್ನನ್ನು ವಿವಸ್ತ್ರಗಳನ್ನಾಗಿ ಮಾಡಿ ಕಳುಹಿಸಿದರು. ರಸ್ತೆಯಲ್ಲಿ ಬಿದ್ದಿದ್ದ ನನ್ನನ್ನು ಯಾರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು.

ಅಲ್ಲಿಂದ ಭಯದಿಂದ ನಾನು ರಿಪ್ಪನ್‌ಪೇಟೆಗೆ ಹೋಗಿ 4 ದಿನಗಳ ನಂತರ ಬೆಳ್ತಂಗಡಿಗೆ ಬಂದು ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಡಲು ಪ್ರಯತ್ನಿಸಿದ್ದೆ. ಆದರೆ ಪೊಲೀಸರು ದೂರು ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. 2005ರಲ್ಲಿ ಬೆಂಗಳೂರಿಗೆ ಬಂದೆ. ಆಗಲೂ ನಾಲ್ಕೈದು ಜನ ನನ್ನನ್ನು ಫಾಲೋಮಾಡಿಕೊಂಡು ಬಂದಿದ್ದರು. ಆದ್ದರಿಂದ ಕೋಲ್ಕತ್ತಾಗೆ ಹೋಗಿ ಅಲ್ಲಿ ಒಂದು ವರ್ಷ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ವಾಸಂತಿಯ ಪೋಟೋ ಎಂದು ಗೊತ್ತಿರಲಿಲ್ಲ:

ಶಿಕಾರಿಪುರದಲ್ಲಿ ಪರಿಚಯ ಆಗಿದ್ದ ರಂಗಪ್ರಸಾದ್‌ ಅವರೊಂದಿಗೆ 18 ವರ್ಷ ಲಿವ್ಹಿಂಗ್‌ ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಅವರ ಪರ್ಸಿನಿಂದಲೇ ವಾಸಂತಿಯ ಪೋಟೋ ತೆಗೆದಿದ್ದು ನಿಜ. ಅವರಿಗೂ ಅನನ್ಯಾ ಭಟ್‌ ಅವಳ ವಿಷಯ ಗೊತ್ತಿತ್ತು. ನಾನು ಅನನ್ಯಾ ಭಟ್‌ ಎಂದು ವಾಸಂತಿಯ ಫೋಟೋ ತೋರಿಸಿದ್ದು ನಿಜ. ಅನನ್ಯಾ ಭಟ್‌ ಫೋಟೋ ನನ್ನ ಹತ್ತಿರ ಇರಲಿಲ್ಲ. ಫೋಟೋ ತೋರಿಸಲು ಮೀಡಿಯಾದವರೇ ಕಾರಣ. ಅವರಿಂದ ಬಜಾವ್‌ ಆಗಲು ಫೋಟೋ ತೋರಿಸಬೇಕಾಯಿತು. ಆದರೆ, ಈ ಫೋಟೋದಲ್ಲಿ ಇದ್ದವಳ ಹೆಸರು ವಾಸಂತಿ ಎಂದು ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

PREV
Read more Articles on

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು