ವಿಜಯಪುರ: ದೇವನಹಳ್ಳಿ ತಾಲೂಕಿನ ಒಟ್ಟು ೧೩೯ ದೇಗುಲ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯಿಂದ ೫ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ಪಟ್ಟಣದ ವಿವಿಧ ದೇವಾಲಯಗಳಿಗೆ ೧೬ ಲಕ್ಷ ರು.ಗಳನ್ನು ಮೀಸಲಿಡಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನಿರ್ದೇಶನದಂತೆ ವಿಜಯಪುರದ ನಗರೇಶ್ವರಸ್ವಾಮಿ ಆದಿನಾರಾಯಣಸ್ವಾಮಿ, ಗಂಗಾತಾಯಿ, ವೀರಭದ್ರಸ್ವಾಮಿ ರುದ್ರದೇವರ ಹಾಗೂ ಬಸವೇಶ್ವರ, ವೀರಗಂಗಾಧರೇಶ್ವರ ದೇವಾಲಯಗಳಿಗೆ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಅನುದಾನದಡಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಸ್ಥಳವನ್ನು ಇಂಜಿನಿಯರ್‌ಗಳೊಂದಿಗೆ ಪರಿಶೀಲಿಸಿದ ಅವರು ಮಾತನಾಡಿದರು.ಪಟ್ಟಣದಲ್ಲಿ ಗ್ರಾಮದೇವತೆ ಗಂಗಾತಾಯಿ ದೇವಾಲಯಕ್ಕೆ ೫ ಲಕ್ಷ, ರುದ್ರದೇವರ ದೇವಾಲಯಕ್ಕೆ ೫ ಲಕ್ಷ, ನಗರೇಶ್ವರ ಆದಿನಾರಾಯಣಸ್ವಾಮಿ ದೇವಾಲಯಕ್ಕೆ ೩ ಲಕ್ಷ, ವೀರಭದ್ರಸ್ವಾಮಿ ದೇವಾಲಯಕ್ಕೆ ೨ ಲಕ್ಷ ಬಸವೇಶ್ವರ, ವೀರಗಂಗಾಧರೇಶ್ವರ ದೇವಾಲಯಗಳಿಗೆ ತಲಾ ೨ ಲಕ್ಷದಂತೆ ಒಟ್ಟು ೧೬ ಲಕ್ಷ ರುಪಾಯಿಗಳನ್ನು ಮೀಸಲಿಟ್ಟಿದೆ ಎಂದರು.
ರಥೋತ್ಸವದ ಮುನ್ನ ಕಾಮಗಾರಿ ಪೂರ್ಣ:ಮುಂದಿನ ತಿಂಗಳುಗಳಲ್ಲಿ ವಿವಿಧ ದೇವಾಲಯಗಳಲ್ಲಿ ನಡೆಯಲಿರುವ ಜಾತ್ರೆ ಹಾಗೂ ರಥೋತ್ಸವಗಳಿಗೂ ಮುನ್ನವೇ ಎಲ್ಲಾ ಅಭಿವೃದ್ಧಿ ಕೆಲಸಗಳು ಪೂರ್ಣಗೊಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಹೇಳಿದರು.
ಈ ವೇಳೆ ಮುಜರಾಯಿ ಇಲಾಖೆಯ ಎಂಜಿನಿಯರ್ ಮಿಥುನ್, ಪುರಸಭೆ ಸದಸ್ಯ ಎಂ.ರಾಜಣ್ಣ, ಮುಖಂಡರಾದ ಸಂಪತ್ ಕುಮಾರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹರೀಶ್, ವೇಣುಗೋಪಾಲ್, ಎಂ.ಮುನಿನಾರಾಯಣಪ್ಪ, ಆರ್.ಎಂ.ಸಿಟಿ.ಮಂಜುನಾಥ್, ರಮೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಪ್ಜಲ್, ಹರೀಶ್,ವಿಶ್ವನಾಥ್, ಗಿರಿಬಾಬು, ರುದ್ರಮೂರ್ತಿ, ಸುರೇಶ್ ಬಾಬು, ಉಪೇಂದ್ರಕುಮಾರ್, ಪ್ರಭುದೇವ್, ಮುಂತಾದವರು ಹಾಜರಿದ್ದರು.
(ಫೋಟೋ ಕ್ಯಾಫ್ಷನ್)
ವಿಜಯಪುರ ಪಟ್ಟಣದ ದೇಗುಲಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ೧೬ ಲಕ್ಷ ಅನುದಾನದಡಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಎಂಜಿನಿಯರ್‌ಗಳು ಹಾಗೂ ಸ್ಥಳೀಯ ಮುಖಂಡರು ವೀಕ್ಷಿಸಿದರು.