ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೆಬ್‌ಸೈಟ್‌ ರಾಜ್ಯದಲ್ಲೇ ನಂ.1

Published : Sep 29, 2026, 06:29 AM IST
Asianet suvarna news no 1 Digital news comscroe report 2025

ಸಾರಾಂಶ

‘ಕನ್ನಡಪ್ರಭ’ ಬಳಗದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ವೆಬ್‌ಸೈಟ್‌ ಏಷ್ಯಾನೆಟ್‌ ನ್ಯೂಸ್‌ (kannada.asianetnews.com) ಈಗ ರಾಜ್ಯದ ನಂ.1 ನ್ಯೂಸ್‌ ವೆಬ್‌ಸೈಟ್‌ ಎಂಬ ಹಿರಿಮೆಗೆ ಭಾಜನವಾಗಿದೆ.

ಬೆಂಗಳೂರು : ‘ಕನ್ನಡಪ್ರಭ’ ಬಳಗದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ವೆಬ್‌ಸೈಟ್‌ ಏಷ್ಯಾನೆಟ್‌ ನ್ಯೂಸ್‌ (kannada.asianetnews.com) ಈಗ ರಾಜ್ಯದ ನಂ.1 ನ್ಯೂಸ್‌ ವೆಬ್‌ಸೈಟ್‌ ಎಂಬ ಹಿರಿಮೆಗೆ ಭಾಜನವಾಗಿದೆ.

ಟೀವಿ ವಾಹಿನಿಗಳಿಗೆ ಹೇಗೆ ರೇಟಿಂಗ್‌ ಇದೆಯೋ ಅದೇ ರೀತಿ ವೆಬ್‌ಸೈಟ್‌ಗಳ ವೀಕ್ಷಕರ ಸಂಖ್ಯೆ ಮಾಪನಕ್ಕೂ ರೇಟಿಂಗ್‌ ಇದೆ. ವೆಬ್‌ಸೈಟ್‌ಗಳಿಗೆ ರೇಟಿಂಗ್ ನೀಡುವ ಸಂಸ್ಥೆಯಾದ ಕಾಮ್‌ ಸ್ಕೋರ್‌ನ ಆಗಸ್ಟ್‌ ತಿಂಗಳ ವರದಿಯ ಪ್ರಕಾರ, ಕನ್ನಡದ ಇತರೆ ಎಲ್ಲ ನ್ಯೂಸ್‌ ವೆಬ್‌ಸೈಟ್‌ಗಳನ್ನು ಹಿಂದಿಕ್ಕಿ ಏಷ್ಯಾನೆಟ್‌ ನ್ಯೂಸ್‌ ವೆಬ್‌ಸೈಟ್‌ ಪ್ರಥಮ ಸ್ಥಾನಕ್ಕೇರಿದೆ.

ಆಗಸ್ಟ್‌ನಲ್ಲಿ ಏಷ್ಯಾನೆಟ್ ನ್ಯೂಸ್ 3.6 ಮಿಲಿಯನ್ ಯೂನಿಕ್ ಯೂಸರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ಕನ್ನಡದ ನಂ.1 ವೆಬ್‌ಸೈಟ್‌ ಆಗಿ ಹೊರಹೊಮ್ಮಿದೆ ಎಂದು ಕಾಮ್‌ಸ್ಕೋರ್‌ ವರದಿ ತಿಳಿಸಿದೆ.

ಜಿಲ್ಲೆ, ರಾಜ್ಯ ಸುದ್ದಿಗಳ ಜತೆಗೆ ಮನರಂಜನೆ, ಕ್ರೀಡೆ, ವ್ಯಾಪಾರ, ಆಟೋಮೊಬೈಲ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ವಿಸ್ತೃತವಾಗಿ ಏಷ್ಯಾನೆಟ್‌ ನ್ಯೂಸ್‌ ಜನರ ಮುಂದೆ ನೀಡುತ್ತದೆ. ಹಾಗೆಯೇ ರಾಜ್ಯ, ದೇಶ ಮತ್ತು ವಿಶ್ವದಲ್ಲಿ ನಡೆಯುವ ಬೆಳವಣಿಗೆಯನ್ನು ಕ್ಷಣ ಮಾತ್ರದಲ್ಲಿ ಓದುಗರಿಗೆ ನೀಡುವ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಏಷ್ಯಾನೆಟ್‌ ನ್ಯೂಸ್‌ ಪ್ರಥಮ ಸ್ಥಾನಕ್ಕೇರಿರುವುದಕ್ಕೆ ಕನ್ನಡಿಗರ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಕಾರಣ ಎಂದು ವೆಬ್‌ಸೈಟ್‌ ತಂಡ ಹರ್ಷ ವ್ಯಕ್ತಪಡಿಸಿದೆ.

 kannada.asianetnews.com ಮಹತ್ವದ ಸಾಧನೆ

- ಟೀವಿ ಚಾನಲ್‌ಗಳ ಟಿಆರ್‌ಪಿಯಂತೆ ವೆಬ್‌ಸೈಟ್‌ಗಳ ವೀಕ್ಷಕರ ಸಂಖ್ಯೆ ಮಾಪನ ಮಾಡುವ ಕಾಮ್‌ ಸ್ಕೋರ್‌

- ಸಂಸ್ಥೆಯ ಆಗಸ್ಟ್‌ ತಿಂಗಳ ರೇಟಿಂಗ್‌ ಪ್ರಕಾರ, ಕನ್ನಡ ಏಷ್ಯಾನೆಟ್‌ ನ್ಯೂಸ್‌ ವೆಬ್‌ಸೈಟ್‌ಗೆ ಅತ್ಯಧಿಕ ವೀಕ್ಷಕರು

- 3.6 ಮಿಲಿಯನ್‌ ಯೂನಿಕ್‌ ಯೂಸರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ನಂ.1 ಸ್ಥಾನಕ್ಕೇರಿದ ವೆಬ್‌ಸೈಟ್‌

- ಜಿಲ್ಲೆ, ರಾಜ್ಯ ಸುದ್ದಿ ಜತೆಗೆ ಮನರಂಜನೆ, ಕ್ರೀಡೆ, ವ್ಯಾಪಾರ, ಆಟೋಮೊಬೈಲ್‌ ಸೇರಿ ಎಲ್ಲ ಮಾಹಿತಿ ಇಲ್ಲಿ ಲಭ್ಯ

- ರಾಜ್ಯ, ದೇಶ, ವಿಶ್ವದಲ್ಲಿ ನಡೆಯುವ ಬೆಳವಣಿಗೆಗಳನ್ನು ಕ್ಷಣಮಾತ್ರದಲ್ಲಿ ಬಿತ್ತರಿಸುವ ಏಷ್ಯಾನೆಟ್‌ ನ್ಯೂಸ್‌ ವೆಬ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಕಡೆಗೂ ಎಸ್‌ಐಟಿ ಬೋನಿಗೆ
ಶ್ಯಾಮಸುಂದರ ಹೆಗಡೆಗೆ ಸಾಧಕಶ್ರೀ ಪ್ರಶಸ್ತಿ ಪ್ರದಾನ