ಬೆಂಗಳೂರಲ್ಲಿ ಏಷ್ಯಾದ 2ನೇ ದೊಡ್ಡ 5 ಎಕರೆ ಅಮೆಜಾನ್‌ ಕಚೇರಿ : 7000 ನೌಕರರಿಗೆ ಸ್ಥಳಾವಕಾಶ

Published : Feb 24, 2026, 06:05 AM IST
Amazon office Bengaluru

ಸಾರಾಂಶ

ಜಗತ್ತಿನ ಬೃಹತ್‌ ಆನ್‌ಲೈನ್‌ ಶಾಪಿಂಗ್‌ ಕಂಪನಿಯಾಗಿರುವ ಅಮೆಜಾನ್‌ನ ಏಷ್ಯಾದ ಎರಡನೇ ಅತಿದೊಡ್ಡ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. ಯಲಹಂಕದಲ್ಲಿ 11 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕಾರ್ಪೋರೆಟ್‌ ಕಚೇರಿಯನ್ನು ಸಚಿವ ಎಂ.ಬಿ. ಪಾಟೀಲ್‌ ಅವರು ಸೋಮವಾರ ಉದ್ಘಾಟಿಸಿದರು

  ಬೆಂಗಳೂರು :  ಜಗತ್ತಿನ ಬೃಹತ್‌ ಆನ್‌ಲೈನ್‌ ಶಾಪಿಂಗ್‌ ಕಂಪನಿಯಾಗಿರುವ ಅಮೆಜಾನ್‌ನ ಏಷ್ಯಾದ ಎರಡನೇ ಅತಿದೊಡ್ಡ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.

ಯಲಹಂಕದಲ್ಲಿ 11 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣ

ಯಲಹಂಕದಲ್ಲಿ 11 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕಾರ್ಪೋರೆಟ್‌ ಕಚೇರಿಯನ್ನು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಅವರು ಸೋಮವಾರ ಉದ್ಘಾಟಿಸಿದರು. ಐದು ಎಕರೆ ಜಾಗದಲ್ಲಿ ತಲೆ ಎತ್ತಿರುವ ಈ ಕಟ್ಟಡವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿದೆ. 12 ಮಹಡಿಗಳನ್ನು ಹೊಂದಿದ್ದು, ಇ-ಕಾಮರ್ಸ್‌, ಆಪರೇಷನ್ಸ್‌, ಪೇಮೆಂಟ್ಸ್‌, ಟೆಕ್ನಾಲಜಿ ಹಾಗೂ ಮಾರಾಟಗಾರರ ಸೇವೆಗೆ ಸಂಬಂಧಿಸಿದ 7000 ಉದ್ಯೋಗಿಗಳ ಕರ್ತವ್ಯಕ್ಕೆ ಅನುಕೂಲವಾಗಲಿದೆ.

ಅಮೆಜಾನ್‌ ಸಂಸ್ಥೆಯ 10ನೇ ಕಾರ್ಪೋರೇಟ್‌ ಕಚೇರಿ

ಈ ವೇಳೆ ಮಾತನಾಡಿದ ಎಂ.ಬಿ. ಪಾಟೀಲ್‌, ರಾಜ್ಯದಲ್ಲಿ ಅಮೆಜಾನ್‌ ಸಂಸ್ಥೆಯ 10ನೇ ಕಾರ್ಪೋರೇಟ್‌ ಕಚೇರಿಯನ್ನು ತೆರೆದಿದೆ. ಅಮೆಜಾನ್‌ ಸಂಸ್ಥೆ ರಾಜ್ಯದೊಂದಿಗೆ 2 ದಶಕಗಳ ಬಾಂಧವ್ಯ ಹೊಂದಿದೆ. ಅಲ್ಲದೆ, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್‌ ಡಾಲರ್‌ ಬಂಡವಾಳ ಹೂಡಿಕೆ ಮಾಡುವ ಗುರಿಯನ್ನು ಅಮೆಜಾನ್‌ ಹೊಂದಿದೆ. ಅದರಿಂದ ಸಣ್ಣ ಉದ್ಯಮಗಳಿಗೆ ನೆರವು ಮತ್ತು ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ ಎಂದರು.

ಕರ್ನಾಟಕವು 3.80 ಲಕ್ಷ ರು.ಗೂ ಹೆಚ್ಚಿನ ತಲಾದಾಯ ಹೊಂದಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜತೆಗೆ ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರು. ಜಿಎಸ್‌ಟಿ ಪಾವತಿ ಮಾಡುತ್ತಿದ್ದು, ದ್ವಿತೀಯ ಸ್ಥಾನದಲ್ಲಿದ್ದೇವೆ. ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್‌ ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳಲ್ಲಿ ಕಾಣಿಸಿಕೊಂಡ ಏಕೈಕ ನಗರ ಬೆಂಗಳೂರಾಗಿದೆ. ಅಲ್ಲದೆ, ದೇಶದಲ್ಲಿನ ಜಿಸಿಸಿ ಕೇಂದ್ರದಲ್ಲಿ ಶೇ. 35ರಷ್ಟು ಕರ್ನಾಟಕದಲ್ಲಿದೆ ಎಂದು ವಿವರಿಸಿದರು.

ಅಮೆಜಾನ್‌ ಸಂಸ್ಥೆಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್‌ ಝಪೊಲೋಸ್ಕಿ, ಉಪಾಧ್ಯಕ್ಷರಾದ ಚೇತನ್‌ ಕೃಷ್ಣಸ್ವಾಮಿ, ಸಮೀರ್‌ ಕುಮಾರ್‌, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್‌ ಲೀ ಇತರರಿದ್ದರು.

ಕೆಂಪೇಗೌಡ್‌ ಏರ್ಪೋರ್ಟ್‌ನಿಂದ 15 ಕಿ.ಮೀ ದೂರದಲ್ಲಿ ಅಮೆಜಾನ್‌ ಹೊಸ ಕಚೇರಿ

11 ಲಕ್ಷ ಚದರಡಿ ವಿಸ್ತೀರ್ಣದ ಕಟ್ಟಡ. ಇದು ಏಷ್ಯಾದಲ್ಲೇ 2ನೇ ಅತಿದೊಡ್ಡ ಆಫೀಸ್‌

ಇ-ಕಾಮರ್ಸ್‌, ಆಪರೇಷನ್ಸ್‌, ಪೇಮೆಂಟ್ಸ್‌, ಟೆಕ್ನಾಲಜಿ ಸಿಬ್ಬಂದಿ ಒಂದೇ ಕಡೆ ಕೆಲಸ

4 ವರ್ಷದಲ್ಲಿ ಭಾರತದಲ್ಲಿ 35 ಶತಕೋಟಿ ಡಾಲರ್‌ ಹೂಡಿಕೆ ಗುರಿ ಹೊಂದಿರುವ ಸಂಸ್ಥೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಧುನಿಕ ದೊಡ್ಡಬಳ್ಳಾಪುರ ನಿರ್ಮಾತೃ ಕೊಂಗಾಡಿಯಪ್ಪ
ಪಿಯು ಕಾಲೇಜಿನಲ್ಲಿ ಪಿಂಕ್‌ ಟಾಯ್ಲೆಟ್ ನಿರ್ಮಾಣ: ಮನೋಜ್