ದೇವನಹಳ್ಳಿ: ಪದೇಪದೇ ವಕೀಲರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಮಾಡುವಂತಹ ಪ್ರಯತ್ನಗಳು ನಿಲ್ಲದಿರುವುದು ಖಂಡನೀಯ. ಇದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಕಾನೂನಿಗೆ ತೋರಿದ ಅಗೌರವ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ ಹೇಳಿದರು
ದೇವನಹಳ್ಳಿ: ಪದೇಪದೇ ವಕೀಲರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಮಾಡುವಂತಹ ಪ್ರಯತ್ನಗಳು ನಿಲ್ಲದಿರುವುದು ಖಂಡನೀಯ. ಇದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಕಾನೂನಿಗೆ ತೋರಿದ ಅಗೌರವ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ ಹೇಳಿದರು.
ನ್ಯಾಯಾಲಯದ ಮುಂದೆ ವಕೀಲರೊಂದಿಗೆ ಸಾಮೂಹಿಕವಾಗಿ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿ ಮಾತನಾಡಿದ ಅವರು, ವಕೀಲರ ಮೇಲೆ ಆಗಿಂದ್ದಾಗ್ಗೆ ಹಲ್ಲೆ ದೌರ್ಜನ್ಯ ನಡೆಯುತ್ತಲೇ ಇವೆ. ವಿವಿಧೆಡೆ ವಕೀಲರ ಮೇಲೆ ಹಲ್ಲೆ, ಹತ್ಯೆ, ದೌರ್ಜನ್ಯ ಮಾಡುವುದು ಸಾಮಾನ್ಯವಾಗಿದೆ. ಕಕ್ಷಿದಾರರೆಂದ ಮೇಲೆ ವಾದ ಪ್ರತಿವಾದಗಳಿರುತ್ತವೆ. ನ್ಯಾಯ ದೊರಕಿಸಿಕೊಡುವುದು ವಕೀಲ ವೃತ್ತಿಯ ಧರ್ಮ. ತಪ್ಪು ಮಾಡಿದವರಿಗೆ ಶಿಕ್ಷೆ ಅನಿವಾರ್ಯ. ಹಾಗೆಂದು ವಕೀಲರ ಮೇಲೆ ದ್ವೇಷ ಸಾಧಿಸುವುದು, ಹಲ್ಲೆ ಮಾಡುವುದು ಎಷ್ಟು ನ್ಯಾಯ? ಅದು ಸಂವಿಧಾನಕ್ಕೆ ಭಾರತದ ನ್ಯಾಯಾಂಗ ವ್ಯವಸ್ಥೆಗೆ ತೋರುವ ಅಗೌರವ. ಏನೇ ಬಿನ್ನಾಪ್ರಾಯ ಅಸಮಧಾನವಿದ್ದರೂ ಅದನ್ನೂ ಕಾನೂನು ಮೂಲಕವೇ ಪ್ರಶ್ನಿಸಬೆಕು. ಸಂವಿಧಾನದ ಚೌಕಟ್ಟು ಮೀರಬಾರದು. ಮುಖ್ಯವಾಗಿ ನ್ಯಾಯ ದೇಗುಲದಲ್ಲಿ ಹಾಗೂ ವಕೀಲರ ವಿರುದ್ಧ ಯಾರೂ ಅನುಚಿತವಾಗಿ ಇನ್ನು ಮುಂದೆ ವರ್ತಿಸಬಾರದು ಎಂದು ವಕೀಲರ ಸಂಘದ ಪದಾಧಿಕಾರಿಗಳ ಒಮ್ಮತದ ತೀರ್ಮಾನದಂತೆ ಒಂದು ದಿನ ಕಲಾಪದಿಂದ ಹೊರಗುಳಿದು ಘಟನೆ ವಿರುದ್ದ ಪ್ರತಿಭಟಿಸುತ್ತಿದ್ದೇವೆ ಎಂದರು.ಹಿರಿಯ ವಕೀಲ ಮಾಜಿ ಅಧ್ಯಕ್ಷ ವೆಂಕಟಗಿರಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಆರ್.ಮಾರೇಗೌಡ, ಉಪಾಧ್ಯಕ್ಷ ವೈ.ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಎಂ.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಉಮೇಶ್ ಎಂ, ಖಜಾಂಚಿ ಎಸ್.ಮೀನಾಕ್ಷಿ , ಪದಾಧಿಕಾರಿಗಳು ಹಾಜರಿದ್ದರು.
೦೩ ದೇವನಹಳ್ಳಿ ಚಿತ್ರಸುದ್ದಿ:೦೨ದೇವನಹಳ್ಳಿ ನ್ಯಾಯಾಲಯದ ಮುಂದೆ ವಕೀಲರ ಮೇಲಿನ ಹಲ್ಲೆ, ಹತ್ಯೆ ಪ್ರಕರಣಗಳನ್ನು ಖಂಡಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.