ಬೆಂಗಳೂರು : 27 ಉದ್ಯಾನಗಳಲ್ಲಿ 250 ಇಂಗುಗುಂಡಿ

Published : Jun 24, 2024, 06:31 AM IST
rain water

ಸಾರಾಂಶ

ನಗರದ ಉದ್ಯಾನವನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಷ್ಠಾನದ ಮೂಲಕ ಅಂತರ್ಜಲಮಟ್ಟ ವೃದ್ಧಿಗೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ₹2.50 ಕೋಟಿ ವೆಚ್ಚದಲ್ಲಿ 27 ಉದ್ಯಾನವನದಲ್ಲಿ 250 ಇಂಗು ಗುಂಡಿ ನಿರ್ಮಿಸಲು ಮುಂದಾಗಿದೆ.

ಬೆಂಗಳೂರು : ನಗರದ ಉದ್ಯಾನವನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಷ್ಠಾನದ ಮೂಲಕ ಅಂತರ್ಜಲಮಟ್ಟ ವೃದ್ಧಿಗೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ₹2.50 ಕೋಟಿ ವೆಚ್ಚದಲ್ಲಿ 27 ಉದ್ಯಾನವನದಲ್ಲಿ 250 ಇಂಗು ಗುಂಡಿ ನಿರ್ಮಿಸಲು ಮುಂದಾಗಿದೆ.

ಕಳೆದ ಬೇಸಿಗೆ ಅವಧಿಯಲ್ಲಿ ಉದ್ಯಾನವನಗಳಿಗೆ ನೀರು ಪೂರೈಕೆ ಮಾಡುವ ನೂರಾರು ಸಂಖ್ಯೆಯ ಕೊಳವೆ ಬಾವಿಗಳು ನೀರಿಲ್ಲದೇ ಒಣಗಿ ಹೋಗಿದ್ದವು. ಕೆಲವು ಕಡೆ ನೀರಿನ ಸಮಸ್ಯೆ ಇರುವ ಕಡೆ ಉದ್ಯಾನವನದ ಕೊಳವೆ ಬಾವಿಗಳ ಮೂಲಕ ಜನರಿಗೆ ನೀರು ಪೂರೈಸಲು ಬಳಸಿಕೊಳ್ಳಲಾಗಿತ್ತು. ಈ ರೀತಿ ಸಮಸ್ಯೆ ಮುಂದಿನ ದಿನಗಳಲ್ಲಿ ಉಂಟಾಗಬಾರದು ಎಂಬ ಕಾರಣಕ್ಕೆ 27 ಉದ್ಯಾನವನದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ.

ಕೇವಲ ₹1 ಲಕ್ಷ ವೆಚ್ಚ:

ಉದ್ಯಾನವನದಲ್ಲಿ ಪ್ರತಿ ಇಂಗು ಗುಂಡಿಗೆ ತಲಾ ಒಂದು ಲಕ್ಷ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಎರಡು ಮಾದರಿಯಲ್ಲಿ ಇಂಗು ಗುಂಡಿ ನಿರ್ಮಿಸಲಾಗುವುದು. ಇದರಿಂದ ಕೊಳವೆ ಬಾವಿಗಳ ಮರು ಪೂರಣಗೊಳಿಸುವುದು ಹಾಗೂ ನೇರವಾಗಿ ಅಂತರ್ಜಲ ವೃದ್ಧಿ ಗೊಳಿಸುವುದಾಗಿದೆ. 20 ಅಡಿ ಆಳ ಮತ್ತು 4 ಅಡಿ ಅಗಲ ಮಾದರಿಯಲ್ಲಿ ಒಂದು ಇಂಗು ಗುಂಡಿ, 12 ಅಡಿ ಆಳ ಮತ್ತು 5 ಅಡಿ ಅಗಲದ ಮಾದರಿಯಲ್ಲಿ ಮತ್ತೊಂದು ಇಂಗು ಗುಂಡಿ ಮಾಡಲಾಗುತ್ತಿದೆ. ಒಂದು ಬಾರಿ ಮಳೆಗೆ 4 ಸಾವಿರ ಲೀಟರ್‌ ನೀರು ಶೇಖರಣೆಯಾಗಿ ಭೂಮಿಯ ಆಳಕ್ಕೆ ಇಳಿಯುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಬಿಬಿಎಂಪಿಯ ಉದ್ಯಾನವನದಲ್ಲಿ 500 ಇಂಗು ಗುಂಡಿಗಳನ್ನು ನಿರ್ಮಿಸಿದ್ದು, ಈಗ ಹೊಸದಾಗಿ 250 ಇಂಗು ಗುಂಡಿ ನಿರ್ಮಾಣ ಮಾಡಲಾಗುತ್ತಿದೆ.

ವಲಯ ಉದ್ಯಾನವನ ಇಂಗು ಗುಂಡಿ ಸಂಖ್ಯೆ

ಪಶ್ಚಿಮ 6 36

ದಕ್ಷಿಣ 6 36

ಆರ್‌.ಆರ್‌.ನಗರ 2 50

ಮಹದೇವಪುರ 2 30

ಪೂರ್ವ 6 36

ಬೊಮ್ಮನಹಳ್ಳಿ 2 40

ಯಲಹಂಕ 2 14

ದಾಸರಹಳ್ಳಿ 1 8

ಒಟ್ಟು 27 250

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ