ಬೆಂಗ್ಳೂರು-ಮುಂಬೈ ಸ್ಲೀಪರ್‌ ವಂದೇ ಭಾರತ್‌ ಅತಿ ದುಬಾರಿ

Published : Nov 03, 2026, 11:14 AM IST
Bengaluru-Mumbai Vande Bharat Sleeper

ಸಾರಾಂಶ

ನ.1ರಂದು ಭಾನುವಾರ ಚಾಲನೆ ಪಡೆದುಕೊಂಡಿರುವ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಈ ಮಾರ್ಗದ ಅತ್ಯಂತ ವೇಗದ ಹಾಗೂ ನವೀನ ಸೌಲಭ್ಯಗಳನ್ನು ಹೊಂದಿರುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವದೆಹಲಿ : ನ.1ರಂದು ಭಾನುವಾರ ಚಾಲನೆ ಪಡೆದುಕೊಂಡಿರುವ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಈ ಮಾರ್ಗದ ಅತ್ಯಂತ ವೇಗದ ಹಾಗೂ ನವೀನ ಸೌಲಭ್ಯಗಳನ್ನು ಹೊಂದಿರುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದು ಪ್ರಯಾಣಿಕರ ಜೇಬಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ.

ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಶೇ.60ರಿಂದ 96ರಷ್ಟು ದುಬಾರಿ

ವಂದೇ ಭಾರತ್ ಸ್ಲೀಪರ್ ರೈಲಿನ ಎಸಿ 3-ಟೈರ್ ದರವು ಈ ಮಾರ್ಗದಲ್ಲಿ ಸಂಚರಿಸುವ ಇತರ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಶೇ.60ರಿಂದ 96ರಷ್ಟು ದುಬಾರಿಯಾಗಿದೆ. ಅದೇ ರೀತಿ, ಎಸಿ 2-ಟೈರ್ ದರವು ಶೇ.65ರಿಂದ 78ರಷ್ಟು ಹಾಗೂ ಎಸಿ 1-ಟಯರ್ ದರವು ಶೇ.20ರಿಂದ 30ರಷ್ಟು ಹೆಚ್ಚಾಗಿದೆ. ನೂತನ ರೈಲಿನ ಟಿಕೆಟ್‌ ದರವನ್ನು, ಎಸಿ 3-ಟೈರ್‌ಗೆ 2,810 ರು, ಎಸಿ 2-ಟಯರ್‌ಗೆ 3,630 ರು. ಹಾಗೂ ಎಸಿ 1-ಟೈರ್‌ಗೆ 4,450 ರು. ನಿಗದಿಪಡಿಸಲಾಗಿದೆ.

ವಂದೇ ಭಾರತ್ ಸ್ಲೀಪರ್‌ನ ಎಸಿ 3 ದರವು ಶೇ.63ರಷ್ಟು ಹೆಚ್ಚಾಗಿದೆ

ಇದಕ್ಕೆ ಹೋಲಿಸಿದರೆ ಈ ಮಾರ್ಗದಲ್ಲಿ ಚಲಿಸುವ ಕೊಯಮತ್ತೂರು-ಮುಂಬೈ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ ಎಸಿ 3, ಎಸಿ 2 ಮತ್ತು ಎಸಿ 1 ಟಯರ್ ದರಗಳು ಕ್ರಮವಾಗಿ 1,435 ರು., 2,045 ರು. ಮತ್ತು 3,425 ರು. ಇವೆ. ಇನ್ನು ಅಜ್ಮೇರ್ ಎಕ್ಸ್‌ಪ್ರೆಸ್‌ನ ದರಗಳು 1,510 ರು., 2,155 ರು. ಮತ್ತು 3,610 ರು. ಇವೆ. ಪ್ರೀಮಿಯಂ ಎಂದು ಪರಿಗಣಿಸಲಾದ ಹಮ್‌ಸಫರ್ ಎಕ್ಸ್‌ಪ್ರೆಸ್‌ನ ಎಸಿ 3 ದರಕ್ಕಿಂತಲೂ (1,725 ರು.) ವಂದೇ ಭಾರತ್ ಸ್ಲೀಪರ್‌ನ ಎಸಿ 3 ದರವು ಶೇ.63ರಷ್ಟು ಹೆಚ್ಚಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಮೆರಿಕ ಮಧ್ಯಂತರ ಚುನಾವಣೆ- ಭಾರತದ ಮೇಲೇನು ಎಫೆಕ್ಟ್‌?
ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಕಾಫಿ, ಟೀ ಬೆಲೆ ಏರಿಕೆ