ಬೆಂಗಳೂರು : ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

Published : Nov 26, 2026, 10:02 AM IST
electricity cut

ಸಾರಾಂಶ

ಕೆಪಿಟಿಸಿಎಲ್‌ ಹಾಗೂ ಬೆಸ್ಕಾಂ ವತಿಯಿಂದ ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.26 ರಂದು ಗುರುವಾರ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು : ಕೆಪಿಟಿಸಿಎಲ್‌ ಹಾಗೂ ಬೆಸ್ಕಾಂ ವತಿಯಿಂದ ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.26 ರಂದು ಗುರುವಾರ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ರಾಜಾಜಿನಗರ–ವಿಜಯನಗರ–ಮಲ್ಲೇಶ್ವರಂ:

ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರಾಜಾಜಿನಗರದ 1ರಿಂದ 6ನೇ ಬ್ಲಾಕ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ಎಲ್‌.ಎನ್‌.ಪುರ, ರಾಜ್‌ಕುಮಾರ್ ರಸ್ತೆ, ಪ್ಯಾಲೇಸ್‌ ಗುಟ್ಟಹಳ್ಳಿ, ಮಲ್ಲೇಶ್ವರಂ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ವಿಜಯನಗರ, ಹಂಪಿನಗರ, ಹೊಸಹಳ್ಳಿ, ಬಿನ್ನಿಪೇಟೆ, ಗೋಪಾಲಪುರ, ಗೋರಿಪಾಳ್ಯ, ಭುವನೇಶ್ವರಿನಗರ, ಆರ್‌. ಬ್ಲಾಕ್‌, ನಿರ್ಮಾಣ್‌ ಭವನ್‌, ಕೆಆರ್‌ಡಿಸಿಎಲ್‌, ಜೆಟ್‌ಲಾಗ್‌, ನಾರಾಯಣ ನೇತ್ರಾಲಯ, ಇಸ್ಕಾನ್‌ ದೇವಸ್ಥಾನ, ದೇವಯ್ಯ ಪಾರ್ಕ್‌, ಕೆಎಚ್‌ಬಿ ಕಾಲೋನಿ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಮತ್ತಿಕೆರೆ–ಯಶವಂತಪುರ:

ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮತ್ತಿಕೆರೆ, ಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಎಚ್‌ಎಂಟಿ ಲೇಔಟ್, ಗೋಕುಲ 1ನೇ ಹಂತ, ಜೆಪಿ ಪಾರ್ಕ್, ಬೃಂದಾವನ ನಗರ, ಎಸ್‌ಬಿಎಂ ಕಾಲೋನಿ, ಟ್ಯಾಂಕ್‌ಬಂಡ್ ರಸ್ತೆ, ಯಶವಂತಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಹಕಾರನಗರ–ಜಕ್ಕೂರು:

ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಸಹಕಾರನಗರ, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಳ್ಳಾರಿ ಮುಖ್ಯರಸ್ತೆ, ಜಕ್ಕೂರು, ಜಕ್ಕೂರು ಲೇಔಟ್, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ, ಕೋಗಿಲು ಲೇಔಟ್, ಅರ್ಕಾವತಿ ಲೇಔಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಜಯನಗರ–ಬನ್ನೇರುಘಟ್ಟ ರಸ್ತೆ: (ಕಿದ್ವಾಯಿ-ನಿಮ್ಹಾನ್ಸ್)

ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿಮ್ಹಾನ್ಸ್, ಕಿದ್ವಾಯಿ, ಜಯದೇವ ಆಸ್ಪತ್ರೆ, ಜಯನಗರದ ವಿವಿಧ ಬ್ಲಾಕ್‌ಗಳು, ವಿಲ್ಸನ್ ಗಾರ್ಡನ್, ಆರ್‌.ವಿ. ರಸ್ತೆ, ಬಿಳೇಕಹಳ್ಳಿ, ಬನ್ನೇರುಘಟ್ಟ ಮುಖ್ಯರಸ್ತೆ, ಬಿಟಿಎಂ, ಗುರಪ್ಪನಪಾಳ್ಯ, ತಿಲಕ್‌ನಗರ, ಬಿಸ್ಮಿಲ್ಲಾ ನಗರ, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿಜಯನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಪ್ರಕಟಣೆ ಮೂಲಕ ಮನವಿ ಮಾಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಾಲೆ, ಹೋಟೆಲ್, ಅಂಗಡಿ ತೆರೆಯುವ ಸಮಯ ಬದಲಿಸುವಂತೆ ಪ್ರಧಾನಿ ಮೋದಿ ಸಲಹೆ : ಬೈರೇಗೌಡ
ಬಸವಣ್ಣ ಅವಹೇಳನಕ್ಕೆ ಆಕ್ರೋಶ - ಶರಣರ ಮೇಲೆ ಮತ್ತೆ ದಾಳಿ ನಡೆದರೆ ಉಗ್ರ ಹೋರಾಟ: ಶ್ರೀಗಳು