;Resize=(412,232))
ಬೆಂಗಳೂರು : ನಗರದ ವಾಹನ ಸಂಚಾರದ ಒತ್ತಡ ಕಡಿಮೆ ಮಾಡಲು ಶಾಲೆ, ಹೋಟೆಲ್, ಅಂಗಡಿ ತೆರೆಯುವ ಸಮಯಗಳನ್ನು ಬದಲಾವಣೆ ಮಾಡಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನಗರ ಭೇಟಿ ಸಂದರ್ಭ ರೆಡ್ ಲೈನ್ ಮೆಟ್ರೋ ಕಡತ ಕೇಂದ್ರದಲ್ಲಿ 22 ತಿಂಗಳಿಂದ ಪೆಂಡಿಂಗ್ ಇದೆ. ಅನುಮತಿ ಕೊಡಿ, ಈ ಲೈನ್‌ನಲ್ಲಿ ತುಂಬಾ ಟ್ರಾಫಿಕ್ ಸಮಸ್ಯೆ ಇದೆ ಎಂದು ಕೇಳಿಕೊಂಡೆವು. ಆಗ ಅವರು, ಸಂಚಾರ ಸಮಸ್ಯೆ ಸುಲಭವಾಗಿ ಬಗೆಹರಿಸಲು ಸಾಧ್ಯವಿಲ್ಲ. ಶಾಲೆ, ಕಾಲೇಜುಗಳು, ಖಾಸಗಿ ಕಂಪನಿಗಳು, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರಂಟ್‌ಗಳ ವ್ಯಾಪಾರ ಸಮಯ ಬದಲಿಸಿ ಆದೇಶ ಹೊರಡಿಸಿದರೆ, ಸಂಚಾರ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು ಎಂದು ವಿವರಿಸಿದರು. ಪ್ರಧಾನಿಯವರ ಸಲಹೆಗಳನ್ನು ಪರಿಶೀಲಿಸುವುದಾಗಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಿಂದೆ ಹೋಟೆಲ್ ಹಾಗೂ ಇತರೆ ಅಂಗಡಿಗಳನ್ನು ರಾತ್ರಿ 10ಗಂಟೆ ಬಂದ್ ಮಾಡಲು ಆದೇಶಿಸಲಾಗಿತ್ತು. ಆದರೆ, ಈಗ 11 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಇದನ್ನು ರಾತ್ರಿ 1ರವರೆಗೆ ವಿಸ್ತರಿಸಲು ಮನವಿಗಳು ಬಂದರೆ ಪರಿಶೀಲಿಸುವುದಾಗಿ ಕೃಷ್ಣ ಬೈರೇಗೌಡ ಹೇಳಿದರು.