ಕಲಬರುಗಿಯಲ್ಲಿ ಛಲವಾದಿಗೆ ದಿಗ್ಬಂಧನ ಹೈಡ್ರಾಮಾ!

ಚಿತ್ತಾಪುರ ಪಟ್ಟಣದಲ್ಲಿ ಬುಧವಾರ ರಾತ್ರಿ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಗೆಸ್ಟ್‌ಹೌಸ್‌ನಲ್ಲೇ ಕೂಡಿಹಾಕಿ ಕಾಂಗ್ರೆಸ್ಸಿಗರು ಪ್ರತಿಭಟನೆ

Follow Us

ಕಲಬುರಗಿ :  ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿರುವ ವಿಚಾರದಲ್ಲಿ ವಿವಾದ ಭುಗಿಲೆದ್ದ ಬೆನ್ನಲ್ಲೆ ಸಚಿವ ಪ್ರಿಯಾಂಕ್ ಬೆಂಬಲಿಗರ ಆಕ್ರೋಶದ ಹಿನ್ನೆಲೆಯಲ್ಲಿ ಕೊನೆಗೂ ತಮ್ಮ ಹೇಳಿಕೆಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯುವ ಸನ್ನಾಹದಲ್ಲಿದ್ದಾಗಲೇ, ಈ ಹಲ್ಲೆ ಪ್ರಕರಣ ಬಿಜೆಪಿ- ಕಾಂಗ್ರೆಸ್‌ ನಡುವೆ ಸಂಘರ್ಷದ ಕಿಡಿ ಹೊತ್ತಿಸಿದೆ. 

ಪರಿಣಾಮ ಬಿಜೆಪಿ ಮೇ 24ರ ಶನಿವಾರ ಕಲಬುರಗಿ ಚಲೋ ಹೋರಾಟ ರೂಪಿಸಿದೆ..ವಿವಾದದ ಬಗ್ಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಪ್ರಿಯಾಂಕ್ ಖರ್ಗೆ ಹೆಸರು ತೆಗೆದುಕೊಂಡು ಹಾಗೆ ಹೇಳಬಾರದಿತ್ತು. ಆ ಹೆಸರು ವಾಪಾಸ್ ತಗೋ ಎಂದು ನಮ್ಮ ನಾಯಕರಾದ ಯಡಿಯೂರಪ್ಪ ಹೇಳಿದ್ದಾರೆ, ಹಾಗಾಗಿ ನಾನು ಪ್ರೀಯಾಂಕ್ ಖರ್ಗೆ ಹೆಸರು ವಾಪಾಸ್ ತೆಗೆದುಕೊಳ್ಳುತ್ತೇನೆ, ಇದರಿಂದ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆಂದು ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಆದರೆ, ಚಿತ್ತಾಪುರ ಪಟ್ಟಣದಲ್ಲಿ ಬುಧವಾರ ರಾತ್ರಿ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಗೆಸ್ಟ್‌ಹೌಸ್‌ನಲ್ಲೇ ಕೂಡಿಹಾಕಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದ ಹೊತ್ತಲ್ಲೆ ನಡೆದ ನೂಕಾಟ, ತಳ್ಳಾಟದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಸೇರಿದಂತೆ ನಾಲ್ವರು ಬಿಜೆಪಿ ಮುಖಂಡರುಗಳ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪೊಲೀಸರೂ ಕೂಡ ಛಲವಾದಿಯವರಿಗೆ ಸೂಕ್ತ ರಕ್ಷಣೆ ಕೊಡದೆ ಹೋರಾಟಗಾರನ್ನೇ ಎತ್ತಿ ಕಟ್ಟಿ ಕರ್ತವ್ಯ ಲೋಪ ಎಸಗಿದ್ದಾರೆಂದು ಕಟುವಾಗಿ ಖಂಡಿಸಿರುವ ಭಾರತೀಯ ಜನತಾ ಪಕ್ಷ ಈ ಪ್ರಸಂಗಕ್ಕೆ ಉತ್ತರವಾಗಿ ಮೇ 24ರ ಶನಿವಾರ ಕಲಬುರಗಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದಿದೆ.

Read more Articles on