ಜನರ ಸಮಸ್ಯೆ ನಿವಾರಣೆಗೆ ಆಂಧ್ರಕ್ಕೆ ಕುಮ್ಕಿ ಆನೆ : ಖಂಡ್ರೆ

Published : May 23, 2025, 11:17 AM IST
Eshwar Khandre

ಸಾರಾಂಶ

ಕುಮ್ಕಿ ಆನೆಗಳ ಹಸ್ತಾಂತರ ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು :  ನಮ್ಮ ಮತ್ತು ಆಂಧ್ರಪ್ರದೇಶ ಸರ್ಕಾರದಲ್ಲಿರುವ ಪಕ್ಷಗಳ ಸಿದ್ಧಾಂತಗಳು ಬೇರೆಬೇರೆ. ಆದರೆ, ಜನರಿಗೆ ಸಮಸ್ಯೆ ಬಂದಾಗ ನಾವೆಲ್ಲ ಭಾರತೀಯರು ಎಂಬಂತೆ ಕೆಲಸ ಮಾಡಬೇಕು. ಅದನ್ನೇ ನಾವು ಮಾಡಿದ್ದೇವೆ. 

ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ. 

ಆಂಧ್ರಕ್ಕೆ ಕುಮ್ಕಿ ಆನೆಗಳ ಹಸ್ತಾಂತರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆಂಧ್ರಪ್ರದೇಶದ ಕಾಡಾನೆ ದಾಳಿ ತಡೆಗೆ ನೆರವಾಗುವಂತೆ ಪವನ್‌ ಕಲ್ಯಾಣ್‌ ಕೋರಿದ ಕೂಡಲೇ ಕುಮ್ಕಿ ಆನೆಗಳ ಹಸ್ತಾಂತರಕ್ಕೆ ನಿರ್ಧರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವ ಇಟ್ಟಾಗ ಅವರು ಒಪ್ಪಿಗೆ ನೀಡಿದರು. ಹಾಗೆಯೇ, ನಮ್ಮಿಂದ ಪಡೆಯುವ ಕುಮ್ಕಿ ಆನೆಗಳನ್ನು ಉತ್ತಮವಾಗಿ ನೋಡಿಕೊಳ್ಳಿ ಎಂದು ಪವನ್‌ ಕಲ್ಯಾಣ್‌ ಅವರಲ್ಲಿ ಮನವಿ ಮಾಡಿದ್ದೇವೆ ಎಂದಿದ್ದಾರೆ.

 ಅಲ್ಲದೆ, ಈಶ್ವರ್‌ ಖಂಡ್ರೆ ಮಾತನ್ನಾರಂಭಿಸುವುದಕ್ಕೂ ಮುನ್ನ ಪ್ರಕೃತಿಯ ಮಹತ್ವ ಸಾರುವ ಸಂದೇಶವನ್ನು ತೆಲುಗಿನಲ್ಲಿ ವಾಚಿಸಿದರು.

PREV
Read more Articles on