ಮೊದಲ ದಿನವೇ ಬಿಎಂಟಿಸಿ ‘ದಿವ್ಯ ದರ್ಶನ’ಹೌಸ್‌ಪುಲ್‌!

Published : Jun 01, 2025, 07:52 AM IST
Divya Darshana

ಸಾರಾಂಶ

ನಗರದ ಪ್ರಮುಖ ಎಂಟು ದೇವಸ್ಥಾನಗಳ ಪ್ರವಾಸಕ್ಕಾಗಿ ಬಿಎಂಟಿಸಿ ದಿವ್ಯ ದರ್ಶನ ಪ್ರವಾಸಿ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರದ ಎಲ್ಲ ದಿನಗಳಲ್ಲೂ ಸೇವೆ ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದೆ.

 ಬೆಂಗಳೂರು : ನಗರದ ಪ್ರಮುಖ ಎಂಟು ದೇವಸ್ಥಾನಗಳ ಪ್ರವಾಸಕ್ಕಾಗಿ ಬಿಎಂಟಿಸಿ ದಿವ್ಯ ದರ್ಶನ ಪ್ರವಾಸಿ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರದ ಎಲ್ಲ ದಿನಗಳಲ್ಲೂ ಸೇವೆ ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದೆ.

ಮೇ 31ರಿಂದ ಆರಂಭಿಸಿರುವ ದಿವ್ಯ ದರ್ಶನ ಸೇವೆಯನ್ನು ಶನಿವಾರ ಮತ್ತು ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನದಂದು ನೀಡಲು ಉದ್ದೇಶಿಸಿತ್ತು. ಮೊದಲ ದಿನವಾದ ಮೇ 31ರಂದು ಈ ಸೇವೆಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಈ ಸೇವೆಯನ್ನು ವಾರದ ದಿನಗಳಿಗೂ ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದ್ದು, ಮೇ 2ರಿಂದ ಪ್ರತಿದಿನ ದಿವ್ಯ ದರ್ಶನ ಸೇವೆ ನೀಡಲಾಗುತ್ತದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಬಿಎಂಟಿಸಿ ವೆಬ್‌ಸೈಟ್‌ www.mybmtc.com ಮತ್ತು ಕೆಎಸ್ಸಾರ್ಟಿಸಿ ವೆಬ್‌ಸೈಟ್‌ www.ksrtc.inಗೆ ಭೇಟಿ ನೀಡಬಹುದಾಗಿದೆ. ದಿವ್ಯ ದರ್ಶನ ಬಸ್‌ಗೆ ವಯಸ್ಕರಿಗೆ 450 ರು ಮತ್ತು ಮಕ್ಕಳಿಗೆ 350 ರು. ಪ್ರಯಾಣ ದರ ನಿಗದಿ ಮಾಡಲಾಗಿದೆ. ಪ್ರಯಾಣಿಕರು ಬಿಎಂಟಿಸಿ-ಕೆಎಸ್ಸಾರ್ಟಿಸಿ ವೆಬ್‌ಸೈಟ್‌ಗಳಲ್ಲಿ ಅಥವಾ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣದ ಸಹಾಯವಾಣಿ 080 22483777, 7760991170 ಸಂಪರ್ಕಿಸಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದಾಗಿದೆ.

 ಯಾವ್ಯಾವ ದೇಗುಲಗಳಿಗೆ ಪ್ರವಾಸ

* ಗಾಳಿ ಆಂಜನೇಯ ಸ್ವಾಮೀ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನ, ದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ, ಬನಶಂಕರಿ ದೇವಸ್ಥಾನ, ಓಂಕಾರ ಹಿಲ್ಸ್, ಆರ್ಟ್‌ ಆಫ್‌ ಲಿವಿಂಗ್‌.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ