ಇಂದಿನಿಂದ ‘ವಿಧಾನಸೌಧ ಮಾರ್ಗದರ್ಶಿ’ ಪ್ರವಾಸ

Published : Jun 01, 2025, 07:41 AM IST
Vidhan soudha

ಸಾರಾಂಶ

ವಿಧಾನಸೌಧ ಕುರಿತ ಜನರಲ್ಲಿನ ಕುತೂಹಲ ತಣಿಸಲು ಆರಂಭಿಸಲಾಗಿರುವ ‘ವಿಧಾನಸೌಧ ಮಾರ್ಗದರ್ಶಿ’ ಪ್ರವಾಸ ಭಾನುವಾರದಿಂದ ಪ್ರಾರಂಭವಾಗುತ್ತಿದೆ.

 ಬೆಂಗಳೂರು : ವಿಧಾನಸೌಧ ಕುರಿತ ಜನರಲ್ಲಿನ ಕುತೂಹಲ ತಣಿಸಲು ಆರಂಭಿಸಲಾಗಿರುವ ‘ವಿಧಾನಸೌಧ ಮಾರ್ಗದರ್ಶಿ’ ಪ್ರವಾಸ ಭಾನುವಾರದಿಂದ ಪ್ರಾರಂಭವಾಗುತ್ತಿದೆ.

ಪ್ರತಿ ತಿಂಗಳು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಜನರು ಶಕ್ತಿಸೌಧವನ್ನು ವೀಕ್ಷಿಸಬಹುದಾಗಿದೆ. ಮೊದಲ ವಿಧಾನಸೌಧದ ಪ್ರವಾಸಕ್ಕಾಗಿ ಶುಕ್ರವಾರದವರೆಗೆ 50ಕ್ಕೂ ಹೆಚ್ಚಿನ ಮಂದಿ ನೋಂದಣಿ ಮಾಡಿಕೊಂಡಿದ್ದರು.

ಪ್ರವಾಸೋದ್ಯಮ ಇಲಾಖೆ, ವಿಧಾನಸಭಾ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ವಿಧಾನಸೌಧ ಭದ್ರತಾ ವಿಭಾಗಗಳ ಸಹಯೋಗದಲ್ಲಿ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ನಡೆಸಲಾಗುತ್ತಿದೆ. ಈ ವಿಧಾನಸೌಧ ಪ್ರವಾಸಕ್ಕಾಗಿ ಸಾರ್ವಜನಿಕರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು,

ವಿಧಾನಸೌಧ ಪ್ರವಾಸದಲ್ಲಿ ವಿಧಾನಸೌಧದ ಇತಿಹಾಸ ತಿಳಿಯಬಹುದಾಗಿದೆ. ಅದರೊಂದಿಗೆ, ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣಗಳು, ಮುಖ್ಯಮಂತ್ರಿಗಳ ಕೊಠಡಿ ಸೇರಿದಂತೆ ಇನ್ನಿತರೆ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಈ ಐತಿಹಾಸಿಕ ಕಟ್ಟಡದ ಮಾಹಿತಿ ಒದಗಿಸಲು ಗೈಡ್‌ಗಳು ಕೂಡ ಇರಲಿದ್ದಾರೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ