ರಾಜ್ಯದ ಪೇದೆಗಳಿಗೆ ಹೊಸ ಟೋಪಿ - ತೆಲಂಗಾಣ ಮಾದರಿ ತೆಳು ಕ್ಯಾಪ್‌ ಬಳಕೆಗೆ ಸಿಎಂ ಅನುಮತಿ

Published : Jun 28, 2025, 08:56 AM IST
Police constable

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದೆ.

 ಬೆಂಗಳೂರು :  ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಬಳಸುವ ಟೋಪಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಟೋಪಿಗಳನ್ನು ವೀಕ್ಷಿಸಿದರು. ಈ ಟೋಪಿಗಳ ಬಗ್ಗೆ ಎಡಿಜಿಪಿ (ಕೆಎಸ್‌ಆರ್‌ಪಿ) ಉಮೇಶ್ ಕುಮಾರ್ ಮಾಹಿತಿ ನೀಡಿದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಳು ಹಾಗೂ ಹಗುರವಾಗಿರುವ ತೆಲಂಗಾಣ ಪೊಲೀಸರ ಮಾದರಿಯ ಟೋಪಿಯನ್ನು ರಾಜ್ಯ ಕಾನ್ಸ್‌ಟೇಬಲ್‌ ಮತ್ತು ಹೆಡ್‌ಕಾನ್ಸ್‌ಟೇಬಲ್‌ಗಳಿಗೆ ಆಯ್ಕೆ ಮಾಡಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಹೆಡ್‌ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳು ಧರಿಸುವ ಸ್ಲೋಚ್‌ ಹ್ಯಾಟ್‌ (ಟೋಪಿ) ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ಎಲ್ಲ ಪೊಲೀಸರಿಗೂ ಏಕರೂಪ ಟೋಪಿ ಬಳಕೆ ಜಾರಿಗೊಂಡರೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಗುರುತಿಸುವುದು ಕಷ್ಟವಾಗಲಿದೆ. ಇದು ಕೆಲ ಪೊಲೀಸರ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಬಹುದು ಎಂದಿದ್ದ ಸಮಿತಿ, ಸ್ಲೋಚ್‌ ಹ್ಯಾಟ್‌ಗೆ ಪರ್ಯಾಯವಾಗಿ ತೆಳುವಾದ ಟೋಪಿ ಬಳಕೆಗೆ ಶಿಫಾರಸು ಮಾಡಿತ್ತು. ಈ ನಡುವೆ ಎಲ್ಲ ಪೊಲೀಸರು ಏಕರೂಪವಾಗಿ ಸ್ಮಾರ್ಟ್ ಪೀಕ್ ಟೋಪಿ ಬಳಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಂಗಾಣ ಪೊಲೀಸರ ಮಾದರಿಯ ಟೋಪಿಯನ್ನು ಆಯ್ಕೆ ಮಾಡಿದ್ದಾರೆ.

PREV
Read more Articles on

Recommended Stories

ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ
ತುಂಗಭದ್ರಾ ಡ್ಯಾಂ ಮಂಡಳಿ ರಾಜ್ಯಕ್ಕೆ ಬಿಳಿ ಆನೆ : ತಂಗಡಗಿ