ಕಡಿಮೆ ಅವಧಿಗೆ ಮೆಟ್ರೋ ನಿಲ್ದಾಣಕ್ಕೆ ಕಂಪನಿ ಹೆಸರು: ಒಪ್ಪಂದ ಪ್ರಸ್ತಾಪ

Published : Apr 30, 2024, 08:00 AM IST
Namma Metro

ಸಾರಾಂಶ

ರೈಲು ಕಾರ್ಯಾಚರಣೆ ಹೊರತುಪಡಿಸಿ ಇನ್ನಿತರ ಮೂಲಗಳಿಂದ ಆದಾಯ ಗಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ನಿಲ್ದಾಣಗಳಿಗೆ ಕಡಿಮೆ ಅವಧಿಗೆ ಕಾರ್ಪೋರೆಟ್ ಕಂಪನಿಗಳ ನಾಮಕರಣ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಬೆಂಗಳೂರು :  ರೈಲು ಕಾರ್ಯಾಚರಣೆ ಹೊರತುಪಡಿಸಿ ಇನ್ನಿತರ ಮೂಲಗಳಿಂದ ಆದಾಯ ಗಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ನಿಲ್ದಾಣಗಳಿಗೆ ಕಡಿಮೆ ಅವಧಿಗೆ ಕಾರ್ಪೋರೆಟ್ ಕಂಪನಿಗಳ ನಾಮಕರಣ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಸದ್ಯ ಬಿಎಂಆರ್‌ಸಿಎಲ್‌ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಣ ಹಳದಿ ಮಾರ್ಗದ ಮೂರು ಮೆಟ್ರೋ ನಿಲ್ದಾಣಗಳಿಗೆ ಮೂರು ಕಂಪನಿಗಳ ಜೊತೆ 30 ವರ್ಷಗಳ ಕಾಲ ನಾಮಕರಣ ಸಂಬಂಧ 75 ರಿಂದ 100 ಕೋಟಿ ರುಪಾಯಿವರೆಗೆ ಒಪ್ಪಂದ ಮಾಡಿಕೊಂಡಿದೆ.

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಇನ್ಫೋಸಿಸ್‌ ಫೌಂಡೇಶನ್‌ ನಾಮಕರಣಕ್ಕೆ ₹100 ಕೋಟಿ, ಹೆಬ್ಬಗೋಡಿ ಮೆಟ್ರೋ ಸ್ಟೇಷನ್‌ಗೆ ಬಯೋಕಾನ್‌ ಫೌಂಡೇಶನ್‌ ₹65 ಕೋಟಿ, ಬೊಮ್ಮಸಂದ್ರ ಮೆಟ್ರೋ ಸ್ಟೇಷನ್‌ಗೆ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಫೌಂಡೇಶನ್‌ ₹75 ಕೋಟಿ ಮೊತ್ತದ ನಾಮಕರಣ ಒಪ್ಪಂದ ಮಾಡಿಕೊಂಡಿದೆ.

ಆದರೆ ಇಷ್ಟೊಂದು ದೀರ್ಘ ಅವಧಿ ಮತ್ತು ಅಧಿಕ ಮೊತ್ತದ ಕಾರಣದಿಂದ ಹಲವು ಕಂಪನಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್‌ ಇದೀಗ ಕಡಿಮೆ ಅವಧಿಗೆ ಕಡಿಮೆ ಮೊತ್ತದ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆಸಿದೆ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ. ನಿಲ್ದಾಣಗಳಿಗೆ ನಾಮಕರಣ ಮಾಡುವುದರಿಂದ ಕಂಪನಿಗಳ ಬ್ರ್ಯಾಂಡ್‌ ಜನಪ್ರಿಯತೆ ಹೆಚ್ಚಲಿದೆ.

ಇದೀಗ 2-5 ವರ್ಷಗಳವರೆಗೆ ಕಂಪನಿಗಳ ಹೆಸರನ್ನು ಮೆಟ್ರೋ ನಿಲ್ದಾಣಗಳಿಗೆ ಇಡುವ ಒಪ್ಪಂದದ ಪ್ರಸ್ತಾವನೆ ಇದೆ. ಮುಂದಿನ ಮೆಟ್ರೋ ರೈಲು ನಿಗಮದ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

PREV

Recommended Stories

ರೈತರ ಆದಾಯ ವೃದ್ಧಿಗೆ ಹೈನುಗಾರಿಕೆ ಸಹಕಾರಿ
ಏಕರೂಪೀಕರಣದ ಹೇರಿಕೆಯಿಂದ ಬಹುತ್ವದ ಆಶಯಗಳಿಗೆ ಧಕ್ಕೆ