ಬೆಂಗಳೂರಿನಲ್ಲಿ ಬಡವರಿಗೆ 1 ಲಕ್ಷ ಮನೆ ಹಂಚಿಕೆಗೆ ತೀರ್ಮಾನ : ಡಿ.ಕೆ.ಸುರೇಶ್

Published : Nov 24, 2026, 10:03 AM IST
Home

ಸಾರಾಂಶ

ಬಿಜೆಪಿ ಹಾಗೂ ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಬಡವರಿಗೆ ನಿವೇಶನ ನೀಡಲಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 15 ಲಕ್ಷ ನಿವೇಶನ ಘೋಷಣೆ ಮಾಡಿದ್ದು, ಇದರಲ್ಲಿ ಮೊದಲು ಕೊಳಗೇರಿ ಜನರಿಗೆ ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಬಡವರಿಗೆ ನಿವೇಶನ ನೀಡಲಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 15 ಲಕ್ಷ ನಿವೇಶನ ಘೋಷಣೆ ಮಾಡಿದ್ದು, ಇದರಲ್ಲಿ ಮೊದಲು ಕೊಳಗೇರಿ ಜನರಿಗೆ ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಮಾಜಿ ಸಂಸದ, ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಡವರಿಗೆ 1 ಲಕ್ಷ ಮನೆ

ಅಲ್ಲದೆ, ಬೆಂಗಳೂರಿನಲ್ಲಿ ಬಡವರಿಗೆ 1 ಲಕ್ಷ ಮನೆ ಕಾರ್ಯಕ್ರಮ ರೂಪಿಸಿ 10 ವರ್ಷವಾದರೂ ಮುಗಿದಿಲ್ಲ. ಆದರೆ ಜಮೀರ್ ಅಹ್ಮದ್‌ಖಾನ್‌ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಂದಿನ ಒಂದೇ ವರ್ಷದಲ್ಲಿ 1 ಲಕ್ಷ ಮನೆ ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ.ವೆಂಕಟೇಶ್‌ ಹಾಗೂ ಲಗ್ಗೆರೆ ಭಾಗದ ಮುಖಂಡ ಗಣೇಶ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು. ಸಚಿವ ಜಮೀರ್‌ ಅಹ್ಮದ್ ಖಾನ್, ನಗರ ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

12 ಎಕರೆ ಯಾರು ಹೊಡೆದರೋ ಗೊತ್ತಿಲ್ಲ: ಬಿಕೆ

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಲಗ್ಗೆರೆ ನನಗೆ ಹೊಸದಲ್ಲ. ನಾನು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಲಗ್ಗೆರೆ ಅಭಿವೃದ್ಧಿಗೆ 52 ಎಕರೆ ಜಮೀನು ಕೊಡಿಸಿದ್ದೆವು. ಈಗ 40 ಎಕರೆಗೆ ಬಂದು ನಿಂತಿದೆ. 12 ಎಕರೆಯನ್ನು ಯಾರು ಹೊಡೆದರೋ ಗೊತ್ತಿಲ್ಲ. ನೀವೆಲ್ಲರೂ ಕೊಳಗೇರಿ ಜನರ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಚಿನ್ನದ ಸಾಲ ಪಡೆದವರಿಗೆ ಈಗ ಸಂಕಷ್ಟ! - ಹೆಚ್ಚುವರಿ ಮೊತ್ತ ಜಮೆಗೆ ಬ್ಯಾಂಕ್‌ಗಳ ಸೂಚನೆ
ಭಾರತದ ಕಾನೂನುಗಳನ್ನು ರವಿ ಹಂಜ್‌ ಮರೆತಿದ್ದಾರೆ, ನೆನಪಿಸಿಕೊಡ್ತೀವಿ : ಪರಂ