ದಿಲ್ಲಿ-ಬೆಂಗಳೂರು ಏರ್‌ಇಂಡಿಯಾ ವಿಮಾನ ದಿಢೀರ್‌ ಮಾರ್ಗ ಬದಲು - ಬೆಂಗಳೂರು ಬದಲು ಚೆನ್ನೈನಲ್ಲಿ ಇಳಿದ ವಿಮಾನ

ಸಾರಾಂಶ

ದೆಹಲಿಯಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನ ಇನ್ನೇನು ರನ್‌ವೇಯಲ್ಲಿ ಇಳಿಯಬೇಕು ಎನ್ನುವಾಗ ಮಾರ್ಗ ಬದಲಿಸಿ ಚೆನ್ನೈನಲ್ಲಿ ಇಳಿದಿದೆ.

ಬೆಂಗಳೂರು: ದೆಹಲಿಯಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನ ಇನ್ನೇನು ರನ್‌ವೇಯಲ್ಲಿ ಇಳಿಯಬೇಕು ಎನ್ನುವಾಗ ಮಾರ್ಗ ಬದಲಿಸಿ ಚೆನ್ನೈನಲ್ಲಿ ಇಳಿದಿದೆ. 

ಇದಕ್ಕೆ ಏರ್‌ಪೋರ್ಟ್‌ನ ನಿರ್ಬಂಧ ಕಾರಣ ಎಂದು ಏರ್‌ ಇಂಡಿಯಾ ತಿಳಿಸಿದೆ. ಬಳಿಕ ಚೆನ್ನೈನಲ್ಲಿಯೇ ಕ್ಷಣ ಹೊತ್ತು ಇದ್ದು, ಬಳಿಕ ಬೆಂಗಳೂರಿಗೆ ಹಿಂತಿರುಗಿದೆ.

ಆದರೆ ವಿಮಾನ ನಿಲ್ದಾಣದವರೊಬ್ಬರು ಮಾತನಾಡಿ, ಯಾವುದೇ ನಿರ್ಬಂಧವೂ ಇರಲಿಲ್ಲ. ದಿನಂಪ್ರತಿ 1 ತಾಸು ದಕ್ಷಿಣ (ಹೊಸ) ರನ್‌ವೇ ನಿರ್ವಹಣೆಗಾಗಿ ಬಂದ್ ಮಾಡಿರುತ್ತೇವೆ. ಈ ವೇಳೆ ಉತ್ತರ (ಹಳೆ)ದ ರನ್‌ವೇ ಬಳಸಲಾಗುತ್ತದೆ. ಇಲ್ಲಿ ವಿಮಾನ ಇಳಿಸಲು ಪೈಲಟ್‌ಗಳಿಗೆ ವಿಶೇಷ ಕೌಶಲ್ಯದ ಅಗತ್ಯವಿರುತ್ತದೆ. ಇದು ವಿಮಾನ ಕಂಪನಿಗಳಿಗೂ ಗೊತ್ತಿರುತ್ತದೆ. ಬಹುಶಃ ಪೈಲಟ್‌ಗೆ ಸರಿಯಾದ ಅಭ್ಯಾಸ ಇಲ್ಲದ ಕಾರಣ ಬೆಂಗಳೂರಿನಲ್ಲಿ ಇಳಿಸದೆ ಚೆನ್ನೈಗೆ ಮಾರ್ಗ ಬದಲಿಸಿರಬಹುದು ಎಂದು ಹೇಳಿದ್ದಾರೆ.

Share this article