ಏರ್‌ರ್ಪೋರ್ಟಲ್ಲಿ ಮತ್ತೆ ಶೇ.10 ಷೇರು ಖರೀದಿಸಲಿದೆ ಫೇರ್‌ಫ್ಯಾಕ್ಸ್‌ ಕಂಪನಿ - ಶೇ.74ಕ್ಕೇರಿದ ಫೇರ್‌ಫ್ಯಾಕ್ಸ್‌ ಷೇರು ಪ್ರಮಾಣ

Published : Dec 06, 2024, 07:15 AM IST
Airport Jobs aiasl recruitment 1652 vacancies mumbai ahmedabad dabolim

ಸಾರಾಂಶ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಬಿಐಎಎಲ್‌ (ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್ಪೋರ್ಟ್‌ ಲಿ.) ನಿಂದ ಫೇರ್‌ಫ್ಯಾಕ್ಸ್‌ ಇಂಡಿಯಾ ಹೋಲ್ಡಿಂಗ್ಸ್‌ ಸಂಸ್ಥೆ ಮತ್ತೆ ಹೆಚ್ಚುವರಿ ಶೇ.10ರಷ್ಟು ಷೇರು ಖರೀದಿಗೆ ಮುಂದಾಗಿದೆ.

ನವದೆಹಲಿ : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಬಿಐಎಎಲ್‌ (ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್ಪೋರ್ಟ್‌ ಲಿ.) ನಿಂದ ಫೇರ್‌ಫ್ಯಾಕ್ಸ್‌ ಇಂಡಿಯಾ ಹೋಲ್ಡಿಂಗ್ಸ್‌ ಸಂಸ್ಥೆ ಮತ್ತೆ ಹೆಚ್ಚುವರಿ ಶೇ.10ರಷ್ಟು ಷೇರು ಖರೀದಿಗೆ ಮುಂದಾಗಿದೆ. ಈ ಮೂಲಕ ಬಿಐಎಎಲ್‌ನಲ್ಲಿ ಸಂಸ್ಥೆಯ ಹೂಡಿಕೆ ಪ್ರಮಾಣ ಶೇ.74ಕ್ಕೇರಿದಂತಾಗಲಿದೆ.

ಬಿಐಎಎಲ್‌ ಸಂಸ್ಥೆ ಫೇರ್‌ಫ್ಯಾಕ್ಸ್‌ ಇಂಡಿಯಾ, ಏರ್ಪೋರ್ಟ್‌ ಅಥಾರಿಟಿ ಆಫ್‌ ಇಂಂಡಿಯಾ(ಎಎಐ) ಮತ್ತು ಕರ್ನಾಟಕ ಇಂಡಸ್ಟ್ರಿ ಆ್ಯಂಡ್‌ ಇನ್ಫ್ರಾ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿ. ನಡುವಿನ ಪಾಲುದಾರಿಕಾ ಸಂಸ್ಥೆಯಾಗಿದೆ. ಇದೀಗ ಫೇರ್‌ಫ್ಯಾಕ್ಸ್‌ ಸಂಸ್ಥೆಯು ಸಿಮನ್ಸ್‌ ಪ್ರೊಜೆಕ್ಟ್ಸ್‌ವೆಂಚರ್ಸ್‌ನಿಂದ ಶೇ.10 ಷೇರು ಖರೀದಿಸುವ ಮೂಲಕ ಒಟ್ಟಾರೆ ಬಿಐಎಎಲ್‌ನಲ್ಲಿ ಫೇರ್‌ಫ್ಯಾಕ್ಸ್‌ನ ಷೇರು ಪ್ರಮಾಣ ಶೇ.74ಕ್ಕೇರಿದರೆ, ಇನ್ನುಳಿದ ಸಂಸ್ಥೆಗಳು ತಲಾ ಶೇ.13 ಷೇರು ಹೊಂದಿದಂತಾಗಲಿದೆ.

ಈ ಪಾಲು ಖರೀದಿ ವ್ಯವಹಾರವು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಇದರ ಒಟ್ಟಾರೆ ಖರೀದಿ ಮೌಲ್ಯ ಅಂದಾಜು 2159 ಕೋಟಿ ರು. ಆಗಿದೆ. ಮೂರು ಕಂತುಗಳಲ್ಲಿ ಈ ಖರೀದಿ ದರವನ್ನು ಪಾವತಿಸಲು ನಿರ್ಧರಿಸಲಾಗಿದ್ದು, ಮೊದಲ ಕಂತು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ಪಾವತಿಸಬೇಕಿದೆ ಎಂದು ಫೇರ್‌ಫ್ಯಾಕ್ಸ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...