ಅಭಾವದ ಮಧ್ಯೆ ದುಬಾರಿಯಾದ ರಸಗೊಬ್ಬರ

Published : May 21, 2026, 11:54 AM IST
Fertilizer

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಸಗೊಬ್ಬರದ ದರದ ಮೇಲೆಯೂ ಭಾರಿ ಪರಿಣಾಮ ಬೀರಿ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ. ಯುರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರ ನಿಯಂತ್ರಣದಲ್ಲಿಟ್ಟಿದೆ.

 ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಸಗೊಬ್ಬರದ ದರದ ಮೇಲೆಯೂ ಭಾರಿ ಪರಿಣಾಮ ಬೀರಿ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ.

ಯುರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರ ನಿಯಂತ್ರಣದಲ್ಲಿಟ್ಟಿದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರ ನಿಯಂತ್ರಣ ಇರದೇ ಇರುವುದರಿಂದ ತಿಂಗಳಲ್ಲಿಯೇ ಎರಡು ಬಾರಿ ರಸಗೊಬ್ಬರ ದರ ಏರಿಕೆಯಾಗಿದೆ.

ಕಾಂಪ್ಲೆಕ್ಸ್ ರಸಗೊಬ್ಬರ ₹1400 ಇದ್ದಿದ್ದು ಈಗಾಗಲೇ ₹1700 ಆಗಿದ್ದರೇ ಇದು ಈಗ ಮೇ ತಿಂಗಳಲ್ಲಿ ₹2200ಗೆ ಹೆಚ್ಚಳವಾಗಲಿದೆ. ಇದಲ್ಲದೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಾಗಿದೆ.

ದರ ಏರಿಕೆಯಲ್ಲಿ ಆಯಾ ಕಂಪನಿಗಳು ವಿಭಿನ್ನವಾಗಿ ಏರಿಕೆ ಮಾಡುತ್ತಿದ್ದು. ಮಧ್ಯ ಪ್ರಾಚ್ಯಯುದ್ಧವೇ ಇದೆಲ್ಲಕ್ಕೂ ಕಾರಣ ಎನ್ನುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ರಸಗೊಬ್ಬರ ತಯಾರಿಕೆ ಕಂಪನಿಯ ಪ್ರತಿನಿಧಿಗಳು.

ಯುರಿಯಾ ಮತ್ತು ಡಿಎಪಿಗೆ ಕೊಡಮಾಡುವ ಸಬ್ಸಿಡಿ ಏರಿಕೆ ಮಾಡಿ ದರ ನಿಯಂತ್ರಣದಲ್ಲಿರಿಸಲಾಗಿದೆಯಾದರೂ ಇದು ಬಹಳ ದಿನಗಳ ಕಾಲ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳಿಗೂ ಸಬ್ಸಿಡಿ ನೀಡಲಾಗುತ್ತಿದೆಯಾದರೂ ಇದು ಮಿತಿ ಪ್ರಮಾಣದಲ್ಲಿದ್ದು, ದರ ಏರಿಕೆಯಾದಾಗಲೆಲ್ಲ ಸಬ್ಸಿಡಿ ಏರಿಸದೆ ಇರುವುದರಿಂದ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ ಮುಂಗಾರು ಬಿತ್ತನೆಯ ಸಿದ್ಧತೆಯಲ್ಲಿರುವ ರೈತರು ಮಾತ್ರ ರಸಗೊಬ್ಬರ ಏರಿಕೆ ಮತ್ತು ಅಭಾವದಿಂದ ತತ್ತರಿಸಿ ಹೋಗಿದ್ದಾರೆ.

ನಿಯಂತ್ರಣ:

ಯುರಿಯಾ ಮತ್ತು ರಸಗೊಬ್ಬರ ವಿತರಣೆ ಈಗ ನಿಯಂತ್ರಣದಲ್ಲಿಡಲಾಗಿದ್ದು, ಎಫ್ ಐಡಿ ಹೊಂದಿದ ರೈತರಿಗೆ ಮಾತ್ರ ಎಕರೆಗೆ ಕೇವಲ 1ಚೀಲ ಆ್ಯಪ್ ಮೂಲಕ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ಎಲ್ಲಿಯೂ ಖರೀದಿ ಮಾಡುವುದಕ್ಕೆ ಸಾಧ್ಯವೇ ಇಲ್ಲ.ಎಫ್ ಐಡಿಯಲ್ಲಿ ನೋಂದಣಿ ಮಾಡಿಯೇ ಕೊಡಬೇಕಾಗಿದ್ದರಿಂದ ಎಲ್ಲಿಯೇ ಖರೀದಿ ಮಾಡಿದರೂ ಅದು ಎಕರೆಗೆ ಒಂದು ಚೀಲ್ ಖರೀದಿಯಾಗುತ್ತಿದ್ದಂತೆ ಲಾಕ್ ಆಗುತ್ತದೆ. 20 ಎಕರೆಗಿಂತಲೂ ಹೆಚ್ಚು ಭೂಮಿ ಇದ್ದ ರೈತರು ಬೆಳೆ ದೃಢೀಕರಣ ಪ್ರಮಾಣ ಪತ್ರ ನೀಡಿ, ಹೆಚ್ಚುವರಿಯಾಗಿ ಯುರಿಯಾ ರಸಗೊಬ್ಬರ ಪಡೆಯಬಹುದಾಗಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಯುರಿಯಾ ಮತ್ತು ಡಿಎಪಿ ರಸಗೊಬ್ಬರ ಎಫ್ ಐಡಿ ಮೂಲಕವೇ ನಿಯಂತ್ರಣ ಮಾದರಿಯಲ್ಲಿಯೇ ವಿತರಣೆ ಮಾಡಲು ಪ್ರಾರಂಭಿಸಲಾಗಿದ್ದು, ರೈತರು ದಿಕ್ ತಿಳಿಯದಾಗಿದ್ದಾರೆ.

ಗೊಬ್ಬರ ಕಳೆದ ವರ್ಷ ಈ ವರ್ಷ

ಪೋಟ್ಯಾಷ್ 1800 1975

ಡಿಎಪಿ 1350 1350

ಎನ್ ಪಿಕೆ 1350 1550

10.26.26 2025 2250

14 35 14 2175 2400

ಸಬ್ಸಿಡಿ ಯಾವುದಕ್ಕೆ ಎಷ್ಟೆಷ್ಟು(ಪ್ರತಿ ಚೀಲಕ್ಕೆ)

ಡಿಎಪಿ ₹1490

ಎನ್ ಪಿಕೆ - 12 32 16 ₹1045

ಎಂಎಪಿ ₹1484

ಯುರಿಯಾ ₹1900 (45 ಕೆಜಿ)

ರೈತರಿಗೆ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲು ಬಜೆಟ್ ನಲ್ಲಿ ಕೇಂದ್ರ ಸರ್ಕಾರ ₹14000 ಕೋಟಿ ಮೀಸಲಿಟ್ಟದೆ. ಕಳೆದೆರಡು ವರ್ಷಗಳ ಹಿಂದೆ ಇದರ ಪ್ರಮಾಣ ಶೇ.40 ರಷ್ಟು ಹೆಚ್ಚಳ ಮಾಡಿದ್ದರೂ ಈ ವರ್ಷ ಮದ್ಯ ಪ್ರಾಚ್ಯದ ಯುದ್ಧದಿಂಧ ರಸಗೊಬ್ಬರ ಕಚ್ಚಾ ಸಾಮಗ್ರಿಯ ದರ ವಿಪರೀತ ಹೆಚ್ಚಳವಾಗಿದೆ. ಹೀಗಾಗಿ, ಈಗ ಮೀಸಲಿಟ್ಟರುವ ಸಬ್ಸಿಡಿ ಅನುದಾನ ಸಾಲದಂತಾಗಿದೆ.

ಆ್ಯಪ್ ಮೂಲಕ ವಿತರಣೆ

ವಿಪರೀತ ಬೇಡಿಕೆ ಇರುವ ಮತ್ತು ಸಬ್ಸಿಡಿಯೂ ಅಧಿಕ ಇರುವ ಯುರಿಯಾ ಮತ್ತು ಡಿಎಪಿ ರಸಗೊಬ್ಬರ ರೈತರಿಗೆ ವಿತರಣೆ ಮಾಡಲು ಭಾರಿ ಕಟ್ಟುನಿಟ್ಟಿನ ಕ್ರಮವಹಿಸಿದೆ. ಪ್ರತಿ ಎಕರೆಗೆ ಒಂದೊಂದು ಚೀಲ ವಿತರಣೆ ಮಾಡುವಂತೆ ಮೌಖಿಕ ಆದೇಶ ಮಾಡಲಾಗಿದ್ದು, ಕೆ ಕಿಸಾನ್ ಆ್ಯಪ್ ಮೂಲಕ ಎಫ್ ಐಡಿ ಆಧರಿಸಿ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರೈತರಿಗೆ ಜಪ್ಪಯ್ಯ ಎಂದರೂ ಎಕರೆಗೆ 1ಚೀಲಕ್ಕಿಂತ ಅಧಿಕ ಯುರಿಯಾ ರಸಗೊಬ್ಬರ ಸಿಗದಂತೆ ಆಗಿದೆ. ಹೀಗೆ ಆದರೆ ನಾವು ಬೆಳೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ರೈತರು.

ಮಧ್ಯ ಪ್ರಾಚ್ಯ ಯುದ್ಧದಿಂದ ರಸಗೊಬ್ಬರ ತಯಾರಿಕೆಯ ಕಚ್ಚಾವಸ್ತುಗಳ ಬೇಲೆ ವಿಪರೀತ ಹೆಚ್ಚವಾಗಿರುವುದರಿಂದ ದರ ಏರಿಕೆ ಮಾಡಲಾಗಿದೆ. ಯುರಿಯಾ ಮತ್ತು ಡಿಎಪಿ ಮಾತ್ರ ಅಷ್ಟೇ ಇದ್ದು, ಉಳಿದವುಗಳ ದರ ಹೆಚ್ಚಳವಾಗಿದೆ.

ಕೃಷ್ಣಮೂರ್ತಿ, ಜೆಡಿ ಕೃಷಿ ಇಲಾಖೆ

ನಮ್ಮ ಪಾಡು ಹೇಳ ತೀರದು, ರಸಗೊಬ್ಬರವೇ ಸಿಗುತ್ತಿಲ್ಲ. ಈಗ ದರ ಏರಿಕೆ ಬೇರೆ.ಹೀಗಾದರೇ ಕೃಷಿ ಮಾಡುವುದೇ ಕಷ್ಟವಾಗುತ್ತದೆ.

ಸಿದ್ದಪ್ಪ ಯಡ್ರಮನಳ್ಳಿ, ರೈತ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

2 ವರ್ಷದ ಮಗುಗೆ ಶಸ್ತ್ರ ಚಿಕಿತ್ಸೆ ಮಾಡಿ 480 ಗ್ರಾಂ ಕೂದಲು, ರಬ್ಬರ್‌ ತೆಗೆದರು
ಜಿಬಿಎಗೆ ಚುನಾವಣೆ ಆ.31ರೊಳಗೆ ನಡೆಸಲೇಬೇಕು: ಸುಪ್ರೀಂ ಆದೇಶ