ಬೆಂಗಳೂರಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಜೋರು

Published : Jul 06, 2026, 10:36 AM IST
GBA clears footpath encroachments in banashankari bengaluru

ಸಾರಾಂಶ

ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.

  ಬೆಂಗಳೂರು :  ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.

 ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಿಗಳು ಸ್ಥಳದಲ್ಲೇ ಪ್ರತಿಭಟನೆಗೆ ಕುಳಿತರು. ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿರುವ ನಾವು ಎಲ್ಲಿಗೆ ಹೋಗಬೇಕು? ನಮಗೆ ಫುಟ್‌ಪಾತ್ ವ್ಯಾಪಾರವೇ ಉಪಜೀವನಕ್ಕೆ ದಾರಿಯಾಗಿದೆ ಎಂದು ಪಟ್ಟು ಹಿಡಿದರು.

ನಾಗರಿಕ ಪ್ರಜ್ಞೆ ಇಲ್ಲ ಎಂದು ಮಜುಂದಾರ್‌ ಕಿಡಿ

ಫುಟ್‌ಪಾತ್ ಮೇಲೆ ಕಾರು ನಿಲ್ಲಿಸಿ, ವೈರ್ ಸಹಿತ ರೋಡ್ ಕೋನ್ ಹಾಕಿಕೊಂಡಿರುವ ಫೋಟೋವೊಂದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಕಿರಣ್ ಮಜುಂದಾರ್‌ ಶಾ ‘ನಾಚಿಕೆಯಿಲ್ಲದ ನಡವಳಿಕೆ, ನಾಗರಿಕ ಪ್ರಜ್ಞೆಯೇ ಇಲ್ಲ’ ಎಂದು ಕಿಡಿ ಕಾರಿದ್ದಾರೆ. 

ಫುಟ್‌ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು

 ಇಂದಿರಾನಗರ 1ನೇ ಹಂತದ 5ನೇ ಮುಖ್ಯ ರಸ್ತೆಯಲ್ಲಿ ಮನೆ ಎದುರಿನ ವಿಶಾಲವಾದ ಫುಟ್‌ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು ನಿಲ್ಲಿಸಲಾಗಿದೆ. ಅಲ್ಲಿಗೆ ಬೇರೆ ಕಾರು ಹತ್ತಿರವೂ ಸುಳಿಯಬಾರದು ಎಂದು ವೈರ್ ಸಹಿತ ರೋಡ್ ಕೋನ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಖಾಸಗಿ ಎಂಬಂತೆ ಬಳಸಿಕೊಳ್ಳುತ್ತಿರುವುದಕ್ಕೆ ನಾಗರಿಕರು ತೀವ್ರವಾಗಿ ಟೀಕಿಸಿದ್ದಾರೆ. ಇಂತಹ ವ್ಯಕ್ತಿಗಳ ಒತ್ತುವರಿ ತೆರವುಗೊಳಿಸುವಿರಾ ಎಂದು ಅನೇಕರು ಪ್ರಶ್ನಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆ
ಬಿಎಂಟಿಸಿ ಬಸ್‌ಗೆ 3 ವರ್ಷದಲ್ಲಿ 150 ಜನ ಬಲಿ : 18 ವರ್ಷದಲ್ಲಿ ಬೆಂಗಳೂರಲ್ಲಿ 1142 ಜನ ಸಾವು