ಕಿರಿಯ ವಕೀಲರಿಗೆ 2 ವರ್ಷ ₹2000 ಸ್ಟೈಫಂಡ್‌ ನೀಡಿ : ಅಖಿಲ ಭಾರತ ವಕೀಲರ ಒಕ್ಕೂಟದಿಂದ ಮನವಿ

Published : Jun 21, 2025, 08:45 AM IST
Lawyer sends contempt of court notice to CM Mamata Banerjee for those  comment on ssc case

ಸಾರಾಂಶ

ಹೊಸದಾಗಿ ಕಾನೂನು ಪದವಿ ಮುಗಿಸುವ ಕಿರಿಯ ವಕೀಲರಿಗೆ 2 ವರ್ಷವರೆಗೆ ಮಾಸಿಕ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

 ಬೆಂಗಳೂರು :  ಹೊಸದಾಗಿ ಕಾನೂನು ಪದವಿ ಮುಗಿಸುವ ಕಿರಿಯ ವಕೀಲರಿಗೆ 2 ವರ್ಷವರೆಗೆ ಮಾಸಿಕ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈ ಕುರಿತು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷ ಹರೀಂದ್ರ, ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ನಮ್ಮನ್ನು ರಕ್ಷಿಸಬೇಕು. ವಕೀಲರ ರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಬೇಕು. ವಕೀಲರಿಗೆ ವೈದ್ಯಕೀಯ ಮತ್ತು ಜೀವ ವಿಮೆ ಸೌಲಭ್ಯ ಒದಗಿಸಬೇಕು. ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ವಾರ್ಷಿಕ ತಲಾ 5 ಲಕ್ಷ ರು. ಮತ್ತು 10 ಲಕ್ಷ ರು. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಹೊಸದಾಗಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟರು ಆಗಿರುವ ಜಿಲ್ಲಾಧಿಕಾರಿ ನಡೆಸುವ ಕಂದಾಯ ಪ್ರಕರಣಗಳ ವಿಚಾರಣೆಯನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹರೀಂದ್ರ ತಿಳಿಸಿದರು.

PREV
Read more Articles on

Recommended Stories

ಹೈಕೋರ್ಟ್‌ ತರಾಟೆ ಮಣಿದು ರಾಜ್ಯ ಸಾರಿಗೆ ಮುಷ್ಕರ ವಾಪಸ್‌
ಮದರಸಾ ಬೋಧಕರಿಗೆ ಕನ್ನಡ ಕಲಿಕೆ ಅಭಿಯಾನ ಶುರು