ಜನರು ನನ್ನ ಮಾತು ಕೇಳಿದ್ದರಿಂದ ಚಿನ್ನದ ಬೆಲೆ ಇಳಿಕೆ: ಮೋದಿ

Published : Nov 22, 2026, 07:20 AM IST
PM Modi

ಸಾರಾಂಶ

ಚಿನ್ನದ ಬೆಲೆ ಕುಸಿತದ ನಡುವೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಕಡಿಮೆ ಚಿನ್ನ ಖರೀದಿಸುವಂತೆ ಮನವಿ ಮಾಡಿದ ಬಳಿಕ ಜನರು ಕಡಿಮೆ ಖರೀದಿಸಿದರು ಮತ್ತು ಬೆಲೆ ಇಳಿಯಿತು ಎಂದು ಹೇಳಿದ್ದಾರೆ.

ಲಖನೌ: ಚಿನ್ನದ ಬೆಲೆ ಕುಸಿತದ ನಡುವೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಕಡಿಮೆ ಚಿನ್ನ ಖರೀದಿಸುವಂತೆ ಮನವಿ ಮಾಡಿದ ಬಳಿಕ ಜನರು ಕಡಿಮೆ ಖರೀದಿಸಿದರು ಮತ್ತು ಬೆಲೆ ಇಳಿಯಿತು ಎಂದು ಹೇಳಿದ್ದಾರೆ. ತಮ್ಮ ಸಲಹೆಯಿಂದ ಜನರ ಹಣ ಉಳಿತಾಯವಾಗಿದೆ ಎಂದಿದ್ದಾರೆ.

ಕಡಿಮೆ ಚಿನ್ನ ಖರೀದಿಸಬೇಕು ಎಂದು ಒತ್ತಾಯಿಸಿದ್ದೆ

ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದಲ್ಲಿ ಶನಿವಾರ ಸಂಜೆ ಮಾತನಾಡಿದ ಮೋದಿ, ‘1 ವರ್ಷದ ಹಿಂದೆ, ನಾನು ದೇಶವಾಸಿಗಳನ್ನು ಕಡಿಮೆ ಚಿನ್ನ ಖರೀದಿಸಬೇಕು ಎಂದು ಒತ್ತಾಯಿಸಿದ್ದೆ. ಅಗತ್ಯವಿಲ್ಲದಿದ್ದರೆ, 1 ವರ್ಷ ದಯವಿಟ್ಟು ಚಿನ್ನ ಖರೀದಿಸಬೇಡಿ ಎಂದೂ ಹೇಳಿದ್ದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ದೇಶವಾಸಿಗಳಿಗೆ 1 ಹೊತ್ತು ಊಟ ಬಿಟ್ಟುಬಿಡುವಂತೆ ಕೇಳಿಕೊಂಡಾಗ ದೇಶ ಅವರನ್ನು ಅನುಸರಿಸಿತು. ಅದೇ ರೀತಿ ನನ್ನಂತಹ ಸಾಮಾನ್ಯ ವ್ಯಕ್ತಿ ಕಡಿಮೆ ಚಿನ್ನವನ್ನು ಖರೀದಿಸಲು ಕೇಳಿದಾಗ ದೇಶವಾಸಿಗಳು ನನ್ನ ಮಾತು ಕೇಳಿದರು ಮತ್ತು ಚಿನ್ನದ ಬೆಲೆಗಳು ಕುಸಿದವು. ಇಂದು ಜನರು ನನಗೆ, ‘ಮೋದಿ ಜೀ, ನೀವು ಅಂದು ಸಲಹೆ ನೀಡಿದ್ದಿರಿ. ನಾವು ನಿಮ್ಮ ಮಾತು ಕೇಳಿದ್ದೇವೆ ಮತ್ತು ನಮ್ಮ ಹಣ ಉಳಿತಾಯವಾಗಿದೆ’ ಎಂದು ಹೇಳುತ್ತಿದ್ದಾರೆ’ ಎಂದು ಹರ್ಷಿಸಿದರು.

ಹಣ ಮತ್ತು ವಿದೇಶಿ ವಿನಿಮಯ ಉಳಿತಾಯ

‘ಜನರು ಚಿನ್ನ ಖರೀದಿ ಕಡಿಮೆ ಮಾಡಿದ್ದರಿಂದ ದೇಶದ ಹಣ ಮತ್ತು ವಿದೇಶಿ ವಿನಿಮಯ ಉಳಿತಾಯವಾಗಿದೆ’ ಎಂದು ಪ್ರಧಾನಿ ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ವಿನಿಮಯ (ಫೊರೆಕ್ಸ್‌) ಮೇಲಿನ ಒತ್ತಡ ಉಂಟಾಗಿತ್ತು. ಆಗ ಮೇ ತಿಂಗಳಲ್ಲಿ ಹೈದರಾಬಾದ್ ಸಭೆಯಲ್ಲಿ ಮೋದಿ ಅವರು 1 ವರ್ಷದವರೆಗೆ ಚಿನ್ನ ಖರೀದಿಸದಂತೆ ಜನರಿಗೆ ಮನವಿ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿಯೂ ಸ್ವದೇಶಿ ಆಂದೋಲನಕ್ಕೆ ಪೂರಕವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಮೆರಿಕಕ್ಕೆ ಪರಾರಿ ಯತ್ನ ವೇಳೆ ಬಸವ ಕೃತಿ ಲೇಖಕ ರವಿ ವಶಕ್ಕೆ
ಕೆಪಿಎಸ್ಸಿ ಮತ್ತಷ್ಟು ಅಕ್ರಮ ಪತ್ತೆ : ಕೋರ್ಟ್‌ಗೆ ಇ.ಡಿ ಮಾಹಿತಿ