ನಗರದ ವಿವಿಧೆಡೆ ಉತ್ತಮ ಮಳೆ -ಕೆಲ ದಿನಗಳಿಂದ ದುರ್ಬಲವಾಗಿದ್ದ ಮಳೆಗೆ ಮತ್ತೆ ಚುರುಕು

Published : Jun 23, 2025, 06:57 AM IST
Bengaluru rains

ಸಾರಾಂಶ

ಕಳೆದ ಕೆಲವು ದಿನಗಳಿಂದ ನಗರದಲ್ಲಿ ದುರ್ಬಲವಾಗಿದ್ದ ಮುಂಗಾರು, ಮತ್ತೆ ಚುರುಕು ಪಡೆದಿದ್ದು ಭಾನುವಾರ ಮಧ್ಯಾಹ್ನ ವಿವಿಧೆಡೆ ಮಳೆಯಾಗಿದೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ನಗರದಲ್ಲಿ ದುರ್ಬಲವಾಗಿದ್ದ ಮುಂಗಾರು, ಮತ್ತೆ ಚುರುಕು ಪಡೆದಿದ್ದು ಭಾನುವಾರ ಮಧ್ಯಾಹ್ನ ವಿವಿಧೆಡೆ ಮಳೆಯಾಗಿದೆ.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ನಂತರ ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಂಡಿತು. ಸಂಜೆ ವೇಳೆಗೆ ಕೆಲವು ಭಾಗಗಳಲ್ಲಿ ಜೋರು ಮಳೆ ಸುರಿಯಿತು. ಮಾಗಡಿ ರಸ್ತೆ, ಹೆಬ್ಬಾಳ, ಪುಲಕೇಶಿನಗರ, ಚೊಕ್ಕಸಂದ್ರ, ಬಾಣಸವಾಡಿ, ಬಾಗಲಗುಂಟೆ, ದಾಸರಹಳ್ಳಿ, ಮನೋರಾಯನಪಾಳ್ಯದಲ್ಲಿ ಉತ್ತಮ ಮಳೆಯಾಗಿದೆ. ಉಳಿದ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗಿದೆ. ಮುಂದಿನ ಒಂದು ವಾರ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ನಗರದಲ್ಲಿ ಕನಿಷ್ಟ ಉಷ್ಣಾಂಶ 20.3 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 28.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಎಲ್ಲಿ, ಎಷ್ಟು ಮಳೆ (ಮಿ.ಮೀ.ಗಳಲ್ಲಿ)

ಅಂಜನಾಪುರ 17.50

ವಿ. ನಾಗೇನಹಳ್ಳಿ 16.50

ಬಾಣಸವಾಡಿ 15.50

ಗೊಟ್ಟಿಗೆರೆ 14.50

ಪುಲಕೇಶಿನಗರ 13.50

ಚೊಕ್ಕಸಂದ್ರ 11

ಬಾಗಲಗುಂಟೆ 11

ಮನೋರಾಯನಪಾಳ್ಯ 10.50

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ