ಬೆಂಗಳೂರು : ಸೈಟ್ ಮಾಲೀಕರಿಗೆ ಜಿಬಿಎ ಶಾಕ್

Published : Aug 11, 2026, 07:03 AM IST
Greater Bengaluru

ಸಾರಾಂಶ

ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸವನ್ನು ಆ.15ರ ಒಳಗೆ ಮಾಲೀಕರು ಸ್ವತಃ ತೆರವುಗೊಳಿಸದಿದ್ದರೆ ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ, ಸಾಗಣೆ ಮಾಡಲು ಕನಿಷ್ಟ 25,900 ರು.ಗಳಿಂದ ಗರಿಷ್ಠ 1.74 ಲಕ್ಷ ರು.ವರೆಗೆ ದರ ನಿಗದಿಪಡಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ.

ಬೆಂಗಳೂರು : ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸವನ್ನು ಆ.15ರ ಒಳಗೆ ಮಾಲೀಕರು ಸ್ವತಃ ತೆರವುಗೊಳಿಸದಿದ್ದರೆ ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ, ಸಾಗಣೆ ಮಾಡಲು ಕನಿಷ್ಟ 25,900 ರು.ಗಳಿಂದ ಗರಿಷ್ಠ 1.74 ಲಕ್ಷ ರು.ವರೆಗೆ ದರ ನಿಗದಿಪಡಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ.

ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿಸುವ ಉದ್ದೇಶದಿಂದ ಆರಂಭಿಸಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಅಂಗವಾಗಿ ನಗರದಾದ್ಯಂತ ಐದು ಪಾಲಿಕೆಗಳಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಬಿದ್ದಿದೆ. ಕೆಲವು ಕಡೆ ಖಾಲಿ ಜಾಗಗಳು ಡಂಪಿಂಗ್ ಯಾರ್ಡ್ ಆಗಿವೆ. ಹೀಗಾಗಿ, ಸ್ವತಃ ಸ್ವಚ್ಛಗೊಳಿಸಿಕೊಳ್ಳುವಂತೆ ಆ.15ರವರೆಗೆ ಗಡುವು ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಮಾಲೀಕರು ಸ್ವಚ್ಛಗೊಳಿಸಿ ನಗರ ಪಾಲಿಕೆಯಿಂದ ಗುರುತಿಸಿರುವ ನಿಗದಿತ ಐದು ಸ್ಥಳಗಳಲ್ಲಿ ಕಸ ವಿಲೇವಾರಿ‌ ಮಾಡಬೇಕು. ಅಗತ್ಯವಿದ್ದರೆ ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಸೂಚಿಸಿರುವ ಸೇವಾದಾರರ ಸೇವೆಯನ್ನು ಸಹ ಪಡೆಯಬಹುದು. ಇಲ್ಲದಿದ್ದರೆ ಪಾಲಿಕೆಯಿಂದಲೇ ಆ.16ರಿಂದ ತೆರವು ಕಾರ್ಯ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಖಾಲಿ‌ ನಿವೇಶನ ಸ್ವಚ್ಚತೆ ಮತ್ತು ಸಾಗಣೆ ದರಪಟ್ಟಿ

ನಿವೇಶನ ಅಳತೆ ಸ್ವಚ್ಛತೆ ವೆಚ್ಚ(ತಡೆಗೋಡೆ ಇಲ್ಲದ/ ತಡೆಗೋಡೆ ಇರುವ) ಸಾಗಣೆ ವೆಚ್ಚ

20×30 6,700 ರು./ 7,700 ರು. 19,200 ರು.

30×40 13,400 ರು./ 14,400 ರು. 38,400 ರು.

30×50 16,750 ರು./ 14,750 ರು. 48,000 ರು.

40×60 26,800 ರು./ 27,800 ರು. 76,800 ರು.

50×80 46,700 ರು./ 47,700 ರು. 1,28,000 ರು.

(ಇದಕ್ಕಿಂತಲೂ ಹೆಚ್ಚು, ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ, ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚವನ್ನು ವಿಧಿಸಲಾಗುತ್ತದೆ)

ನಿವೇಶನದಲ್ಲಿನ ಕಸ ಸ್ವಚ್ಛಗೊಳಿಸಿ ಸಾಗಿಸಿದ ನಂತರ ನಿಗದಿತ ವೆಚ್ಚವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ.

- ಮಹೇಶ್ವರ ರಾವ್, ಮುಖ್ಯ ಆಯುಕ್ತ, ಜಿಬಿಎ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ನಿಯ ಅನೈತಿಕ ಸಂಬಂಧಕ್ಕೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!
ಕೋಳಿ ವ್ಯಾಪಾರಿ ಬಳಿ ₹29 ಕೋಟಿ ಡ್ರಗ್ಸ್‌ ಪತ್ತೆ