ವಾಯು ಮಾಲಿನ್ಯದಲ್ಲಿ ಭಾರತಕ್ಕೆ 5 ನೇ ಸ್ಥಾನ : ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮ ಕಠಿಣ

Published : Jun 22, 2025, 07:19 AM IST
Air pollution

ಸಾರಾಂಶ

ವಿಶ್ವದಲ್ಲಿ ವಾಯು ಮಾಲಿನ್ಯದಲ್ಲಿ ಐದನೇ ಸ್ಥಾನದಲ್ಲಿ ಭಾರತವು, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಪರಿಣಾಮ ಎದುರಿಸಬೇಕಾಗಲಿದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ ಹೇಳಿದರು.

ಬೆಂಗಳೂರು : ವಿಶ್ವದಲ್ಲಿ ವಾಯು ಮಾಲಿನ್ಯದಲ್ಲಿ ಐದನೇ ಸ್ಥಾನದಲ್ಲಿ ಭಾರತವು, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಪರಿಣಾಮ ಎದುರಿಸಬೇಕಾಗಲಿದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಸಂತ ನಗರದಲ್ಲಿ ಇನ್ಸ್ಟಿಟ್ಯೂಟ್‌ ಆಫ್‌ ಟೌನ್‌ ಪ್ಲ್ಯಾನರ್ಸ್‌ ಇಂಡಿಯಾದ (ಐಟಿಪಿಐ) ಕರ್ನಾಟಕ ಪ್ರಾದೇಶಿಕ ವಿಭಾಗ ಹಾಗೂ ಸಿಎಸ್‌ಇ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತೀಯ ನಗರದಲ್ಲಿ ಶುದ್ಧ ಗಾಳಿ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವರದಿಯ ಪ್ರಕಾರ ಭಾರತ ದೇಶವು ವಾಯು ಮಾಲಿನ್ಯದಲ್ಲಿ ಐದನೇ ಸ್ಥಾನದಲ್ಲಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಚಾರ್ಕ್‌, ಕಾಂಗೋ ದೇಶಗಳು ಮೊದಲ ನಾಲ್ಕು ಸ್ಥಾನದಲ್ಲಿವೆ. ಆದರೆ, ಅಭಿವೃದ್ಧಿ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದ ತಲಾ ಇಂಗಾಲ ಉತ್ಪಾದನೆ ಪ್ರಮಾಣ ಕಡಿಮೆ ಇದೆ. ಮುಂದಿನ ದಿನ7, ಗಳಲ್ಲಿ ಎಚ್ಚರಿಕೆಯಿಂದ ಕೈಗೊಳ್ಳುವ ನಗರ ಯೋಜನೆಗಳನ್ನು ಕೈಗೊಳ್ಳದಿದ್ದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗಲಿದೆ ಎಂದು ಹೇಳಿದರು.

ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು, 2070ರ ವೇಳೆಗೆ ವಾಯು ಮಾಲಿನ್ಯವನ್ನು ಶೂನ್ಯಗೊಳಿಸುವ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ನಗರದಲ್ಲಿ ಸಾಕಷ್ಟು ನೂತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇತರೆ ನಗರಗಳಿಗೂ ವಿಸ್ತರಣೆ ಮಾಡಬೇಕಾಗಿದೆ. ಸರ್ಕಾರಗಳು ಸಹ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಅದನ್ನು ಸ್ಥಳೀಯ ಮಟ್ಟದಿಂದ ಅನುಷ್ಠಾನಗೊಳಿಸಬೇಕಾಗಿದೆ. ಒಂದು ಬಾರಿ ಕೈಗೊಳ್ಳುವ ಕ್ರಮವಲ್ಲ. ನಿರಂತರವಾಗಿ ಮಾಡಬೇಕಾದ ಕೆಲಸವಾಗಿದೆ. ಪ್ರಮುಖವಾಗಿ ವೈಜ್ಞಾನಿಕವಾಗಿ ಕಸ ವಿಲೇವಾರಿ, ನೀರಿನ ನಿರ್ವಹಣೆ, ನಗರ ಹಸಿರೀಕರಣ ಯೋಜನೆಗಳು, ಸಾರಿಗೆ ಹಾಗೂ ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.

ರೇರಾ ಅಧ್ಯಕ್ಷ ರಾಕೇಶ್‌ ಸಿಂಗ್‌, ಐಟಿಪಿಐನ ಕರ್ನಾಟಕ ಪ್ರಾದೇಶಿಕ ವಿಭಾಗದ ಅಧ್ಯಕ್ಷ ಕೆ.ಎ. ನಾರಾಯಣಗೌಡ ಸೇರಿದಂತೆ ಮೊದಲಾದವರಿದ್ದರು.

ವಿಶ್ವದಲ್ಲಿ ವಾಯು ಮಾಲಿನ್ಯದಲ್ಲಿ ಐದನೇ ಸ್ಥಾನದಲ್ಲಿ ಭಾರತ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಪರಿಣಾಮ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ ‘ಭಾರತೀಯ ನಗರದಲ್ಲಿ ಶುದ್ಧ ಗಾಳಿ’ ಕುರಿತು ವಿಚಾರ ಸಂಕಿರಣ

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ