ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವಿರೋಧ ಪುನರಾಯ್ಕೆ

Published : Jun 22, 2025, 07:12 AM IST
BL Shankar

ಸಾರಾಂಶ

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಬಿ.ಎಲ್. ಶಂಕರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

 ಬೆಂಗಳೂರು :  ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಬಿ.ಎಲ್. ಶಂಕರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಹುದ್ದೆಗಳ ಚುನಾವಣೆ ಜೂ.29ಕ್ಕೆ ನಿಗದಿಯಾಗಿದೆ. ಆದರೆ, ಆಯ್ಕೆಯಾಗಬೇಕಾದ ಸ್ಥಾನಗಳಿಗೆ ಸಮಾನವಾಗಿ ಅಭ್ಯರ್ಥಿಗಳು ಉಳಿದಿರುವುದರಿಂದ ಅಧ್ಯಕ್ಷರು ಮತ್ತು ಇತರ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.

ಉಪಾಧ್ಯಕ್ಷರು- ಟಿ. ಪ್ರಭಾಕರ್ ಹಾಗೂ ಪ್ರೊ. ಕೆ.ಎಸ್. ಅಪ್ಪಾಜಯ್ಯ, ಖಜಾಂಚಿ- ಡಾ.ಎನ್.ಲಕ್ಷ್ಮೀಪತಿ ಬಾಬು, ಪ್ರಧಾನ ಕಾರ್ಯದರ್ಶಿ- ಎಸ್.ಎನ್. ಶಶಿಧರ್, ಜಂಟಿ ಕಾರ್ಯದರ್ಶಿ- ಟಿ.ವಿ. ತಾರಕೇಶ್ವರಿ, ಸುಬ್ರಹ್ಮಣ್ಯ ಕುಕ್ಕೆ ಮತ್ತು ಬಿ.ಎಲ್. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ಚಂದ್ರಶೇಖರ್, ಬಿ.ವೈ. ವಿನೋದ, ರಮಾ ಶರ್ಮಾ, ಎಸ್. ಅಮ್ರಿತ ವಿಮಲನಾಥನ್. ಡಾ.ಜಿ. ಲಕ್ಷ್ಮೀಪತಿ, ಬಾಳಾಸಾಬ ಸದಲಗೆ ಹಾಗೂ ಸಿ.ಪಿ. ಉಷಾರಾಣಿ ಆಯ್ಕೆಯಾಗಿದ್ದಾರೆ.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ