;Resize=(412,232))
ಬೆಂಗಳೂರು : ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಅಡ್ವೋಕೆಟ್ ಜನರಲ್ ಬಿ.ವಿ. ಆಚಾರ್ಯ, ಹಿರಿಯ ಪತ್ರಕರ್ತ ಡಿ. ಉಮಾಪತಿ, ಸಾಹಿತಿ ಇಂದಿರಾ ಹೆಗಡೆ, ಗದಗದ ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಅವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರನ್ನು 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
71ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ 71 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಳೆದೆರಡು ವರ್ಷಗಳಂತೆ ಈ ವರ್ಷವೂ ಯಾವುದೇ ಅರ್ಜಿ ಆಹ್ವಾನಿಸದೆ ಆಯ್ಕೆ ಸಮಿತಿ ಮತ್ತು ಶಾಸಕರು, ಸಚಿವರು ನೀಡಿದ ಶಿಫಾರಸುಗಳೊಂದಿಗೆ ಸರ್ಕಾರವೇ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಯಾವುದೇ ಒತ್ತಡ, ಬೇಡಿಕೆಗಳಿಗೂ ಮಣಿಯದೆ ಅರ್ಜಿಯನ್ನು ಆಹ್ವಾನಿಸದೆ ಆಯ್ಕೆ ಸಮಿತಿಯ ಶಿಫಾರಸು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಮಾಡಿದ ಮನವಿ, ರಾಜ್ಯ ಸರ್ಕಾರವೇ ಗುರುತಿಸಿರುವವರಿಗೆ ಪ್ರಶಸ್ತಿ ನೀಡಲಾಗಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳ ಸಾಧಕರಿಗೆ, ಸಣ್ಣ ಸಮುದಾಯದವರಿಗೂ ಗೌರವ ಒದಗಿಸುವ ಕೆಲಸ ಮಾಡಲಾಗಿದೆ ಎಂದು ವಿವರಿಸಿದರು.
ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಲಕ್ಷ ರು. ನಗದು, 25 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದು ಹೇಳಿದರು.
ಜಾನಪದ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಎಂ. ಶಿವಲಿಂಗಪ್ಪ (ಕೊಪ್ಪಳ), ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ)
ಸಂಗೀತ: ಡಾ. ಸಿ.ಎ.ಶ್ರೀಧರ್ (ಮೈಸೂರು), ಡಾ. ಎ.ನಾರಾಯಣಸ್ವಾಮಿ (ಹಾಸನ), ವಿ. ಮುರುಳಿ (ಬೆಂಗಳೂರು ಗ್ರಾಮಾಂತರ)
ನೃತ್ಯ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)
ಚಲನಚಿತ್ರ/ಕಿರುತೆರೆ: ಕೆ. ವೆಂಕಟರಮಣ (ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)
ಯಕ್ಷಗಾನ: ಗೋಪಾಲ ಗಾಣಿಗ (ಉಡುಪಿ)
ಬಯಲಾಟ: ಹುಲಿಗೆಮ್ಮ (ಬಳ್ಳಾರಿ)
ರಂಗಭೂಮಿ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮೀ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಎಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಹೊನ್ನ ನಾಯಕ (ಮೈಸೂರು)
ಶಿಲ್ಪಕಲೆ: ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ), ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)
ಚಿತ್ರಕಲೆ: ಸಿ.ಬಿ. ಸೋಮಶೆಟ್ಟಿ (ಬೀದರ್)
ಕರಕುಶಲ: ಶಾಂತಾಬಾಯಿ (ಬೀದರ್)
ಕೃಷಿ: ಎಚ್.ಕೆ. ಶ್ರೀಕಂಠ (ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಬೆಂಗಳೂರು)
ಪರಿಸರ: ಡಾ. ಆರ್.ಸ್ವಾಮಿ ಆನಂದ್ (ಮೈಸೂರು)
ವಿಜ್ಞಾನ/ತಂತ್ರಜ್ಞಾನ: ಪ್ರೊ. ಎ.ಎಚ್.ರಾಜಾಸಾಬ್ (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಹೊರದೇಶ/ಕೆನಡಾ)
ಮಾಧ್ಯಮ: ಡಿ. ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲಾ (ಬೆಂಗಳೂರು ನಗರ)
ಮಾಧ್ಯಮ/ಛಾಯಾಚಿತ್ರ: ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)
ಸಂಕೀರ್ಣ: ರುಕ್ಮಿಣಿ ಬಾಯಿ ನಾಗಪ್ಪ ವಾಷ್ಕರ್ (ಬಾಗಲಕೋಟೆ), ಡಾ. ಡಿ.ಎಸ್.ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರ್ ನಾರಾಯಣ ದ್ವಾರಕಾನಾಥ್ (ಬೆಂಗಳೂರು), ರವಿ ಪ್ರವೀಣ್ ನೊರ್ಹೋನಾ (ಬೆಂಗಳೂರು), ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿದ್ದಪ್ಪ (ಕೊಡಗು), ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ)
ಸಂಕೀರ್ಣ/ವಾಸ್ತುಶಾಸ್ತ್ರ: ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ)
ಸಮಾಜಸೇವೆ: ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ), ಬಸವರಾಜು (ಮಂಡ್ಯ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಡಾ. ಎಸ್.ಎಂ.ಎಲಿ (ದಾವಣಗೆರೆ), ಡಾ. ಜಿ.ಎಸ್.ಚಂದ್ರಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣೇಗೌಡ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ), ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)
ವೈದ್ಯಕೀಯ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು), ಡಾ. ಸುಜಾತಾ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)
ಆಡಳಿತ: ತೆರೆಸಾ ಭಟ್ಟಾಚಾರ್ಯ (ಬೆಂಗಳೂರು), ಡಾ. ಕೆ.ಎಸ್.ಸೋಮಶೇಖರ್ (ನವದೆಹಲಿ)
ಎಂಜಿನಿಯರಿಂಗ್: ಡಾ. ಕೆ.ಎನ್.ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)
ಸಾಹಿತ್ಯ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರ ಹನುಮಾನ್ (ರಾಯಚೂರು), ಪ್ರೊ. ನಾರಾಯಣಘಟ್ಟ (ತುಮಕೂರು), ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ದರಾಮ ಹೊನ್ಕಲ್ (ಯಾದಗಿರಿ)
ಶಿಕ್ಷಣ: ಡಾ. ಫಾದರ್ ಸಿ.ಸಿ. ಓಸೆಪ್ (ಬೆಂಗಳೂರು), ಶಾಂತಪ್ಪ ಪಂ.ದಶವಂತ (ವಿಜಯಪುರ), ಸಂಗೀತಾ ಎನ್.ಕಟ್ಟೀಮನಿ (ಕಲಬುರಗಿ), ಪ್ರೊ. ಎನ್.ಎಸ್.ರಂಗರಾಜು (ಮೈಸೂರು)
ನ್ಯಾಯಾಂಗ: ಬಿ.ವಿ. ಆಚಾರ್ಯ (ಉಡುಪಿ)
ಹೊರನಾಡು/ಹೊರದೇಶ: ರಮೇಶ್ ಆರ್.ಗೌಡ (ಮಾಜಿ ಅಧ್ಯಕ್ಷ, ಅಕ್ಕ ಅಮೆರಿಕಾ)
ಕ್ರೀಡೆ: ಎ.ವಿ. ರವಿ (ಜಿಮ್ ರವಿ) (ಕೋಲಾರ), ಡಾ. ಎ.ಬಿ.ಸುಬ್ಬಯ್ಯ (ಕೊಡಗು), ಎಂ. ಗಿರೀಶ್ (ಬೆಂಗಳೂರು)
ಪ್ರಶಸ್ತಿ ಬೇಡವೆಂದ ವಾಟಾಳ್
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕುರಿತಂತೆ ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ ಸಚಿವ ತಂಗಡಗಿ, ತಮಗೆ ಪ್ರಶಸ್ತಿ ಬೇಡ. ಕನ್ನಡಪರ ಹೋರಾಟಕ್ಕೆ ಸರ್ಕಾರ ಬೆಂಬಲ ನೀಡಲಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕನ್ನಡಕ್ಕಾಗಿ ಹೋರಾಟ ಮಾಡಿರುವ ವಾಟಾಳ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬುದು ವೈಯಕ್ತಿಕ ಆಶಯವಾಗಿತ್ತು. ಆ ಕುರಿತಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ತಿಳಿಸಿದ್ದೆ ಮತ್ತು ಅದಕ್ಕವರು ಒಪ್ಪಿದ್ದರು. ಅವರ ಹೆಸರನ್ನು ಸೇರಿಸಿ ಪಟ್ಟಿಯನ್ನೂ ಸಿದ್ಧಪಡಿಸಲಾಗಿತ್ತು. ಆ ಕುರಿತಂತೆ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದೆ. ಆದರೆ, ಅದಕ್ಕೆ ವಾಟಾಳ್ ಅವರು ತಮಗೆ ಪ್ರಶಸ್ತಿ ಬೇಡ ಎಂದರು. ಜತೆಗೆ ತಮ್ಮ ಕನ್ನಡಪರ ಹೋರಾಟಕ್ಕೆ ಸರ್ಕಾರದಿಂದ ಬೆಂಬಲ ಸಿಕ್ಕರೆ ಸಾಕು ಎಂದು ನಯವಾಗಿಯೇ ಪ್ರಶಸ್ತಿ ಬೇಡವೆಂದು ಹೇಳಿದ್ದಾಗಿ ತಂಗಡಗಿ ಮಾಹಿತಿ ಹೇಳಿದರು.