;Resize=(412,232))
ಬೆಂಗಳೂರು: ಬನಶಂಕರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ.
ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಹನುಮಂತನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಹನುಮಂತನಗರ, ಗವಿಪುರಂ, ಬಸಪ್ಪ ಲೇಔಟ್, ಶ್ರೀನಗರ, ಬುಲ್ ಟೆಂಪಲ್ ಮತ್ತು ಮೌಂಟ್ ಜಾಯ್ ರೋಡ್, ಕೆ.ಜಿ.ನಗರ, ಚಾಮರಾಜಪೇಟೆ, ವಿದ್ಯಾಪೀಠ, ತ್ಯಾಗರಾಜ ನಗರ, ಎನ್.ಆರ್.ಕಾಲೋನಿ, ಹೊಸಕೆರೆಹಳ್ಳಿ, ಬಸವನಗುಡಿ, ಅವಲಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.