ಕೆಂಪೇಗೌಡ ಪ್ರಶಸ್ತಿ ಪ್ರಕಟ, ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ಸೇರಿ 52 ಸಾಧಕರಿಗೆ ಪ್ರಶಸ್ತಿ

Published : Jun 27, 2025, 07:47 AM IST
Kempegowda

ಸಾರಾಂಶ

ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ ಭಾವನ ನಾಗಯ್ಯ ಸೇರಿದಂತೆ 52 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಘೋಷಿಸಲಾಗಿದೆ 

ಬೆಂಗಳೂರು : ನಾಡಪ್ರಭು ಕೆಂಪೇಗೌಡ ಜಯಂತಿ ಹೆಸರಲ್ಲಿ ಬಿಬಿಎಂಪಿಯಿಂದ ನೀಡುವ ಪ್ರತಿಷ್ಠಿತ ಕೇಂಪೇಗೌಡ ಪ್ರಶಸ್ತಿ ಪ್ರಕಟಗೊಂಡಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ ಭಾವನ ನಾಗಯ್ಯ ಸೇರಿದಂತೆ 52 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಸಮಾಜಸೇವೆ, ಮಾಧ್ಯಮ, ನ್ಯಾಯವಾದಿ, ಆಡಳಿತ, ವೈದ್ಯಕೀಯ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ನಿರೂಪಕಿ ಭಾವನ ನಾಗಯ್ಯ ಸೇರಿದಂತೆ ಒಟ್ಟು 52 ಮಂದಿಗೆ ಕೇಂಪೇಗೌಡ ಪ್ರಶಸ್ತಿ ಪ್ರಕಟಗೊಂಡಿದೆ.

ಮಾಧ್ಯಮ ಕ್ಷೇತ್ರದ ಸೇವೆಗಾಗಿ ಭಾವನ ನಾಗಯ್ಯ ಅವರಿಗೆ ಕೆಂಪೇಗೌಡ ಪ್ರಶಸ್ತಿ ಘೋಷಿಸಲಾಗಿದೆ. ಇನ್ನು ನಿವೃತ್ತ ಐಎಎಸ್ ಅಧಿಕಾರಿ ಬಿಎಸ್ ಪಾಟೀಲ್, ಸಿದ್ಧಯ್ಯ ಸೇರಿದಂತೆ ಮಾಧ್ಯಮ ಕ್ಷೇತ್ರದ ಐವರಿಗೆ ಕೆಂಪೇಗೌಡ ಪ್ರಶಸ್ತಿ ಘೋಷಣೆಯಾಗಿದೆ. ನಾಳೆ (ಜೂ.27) ಸಂಜೆ ಆರು ಗಂಟೆಗೆ ಬಿಬಿಎಂಪಿ ಗಾಜಿನ ಮನೆಯಲ್ಲಿ ಈ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಪತ್ರಕರ್ತ ದೀಪಕ್ ತಿಮ್ಮಯ್ಯ, ಪತ್ರಕರ್ತ ಸತೀಶ್ (ದಿ ಹಿಂದೂ), ಪತ್ರಕರ್ತ ಅವಿರಾಜ್ ಸೇರಿದಂತೆ ಕೆಲ ಮಾಧ್ಯಮ ಸಾಧಕರಿಗೂ ಪ್ರಶಸ್ತಿ ಘೋಷಿಸಲಾಗಿದೆ. ಇನ್ನು ಹೆಲಿಕ್ಯಾಪ್ಟರ್ ಪೈಲೆಟ್ ನಂದಕುಮಾರ್, ಕೆಎಎಸ್ ಎಸ್ಐಎ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಸಮಾಜಸೇವೆ ವಿಭಾಗದಲ್ಲಿ ಅರುಣ್ ಪೈ, ಕಣ್ವ ಆಸ್ಪತ್ರೆಯ ಡಾ. ವೆಂಕಪ್ಪ, ಸರ್ವೋಚ್ಚ ನ್ಯಾಯಾಲಯ ವಕೀಲ ಶ್ಯಾಮ್‌ಸುಂದರ್, ಬ್ಲೈಂಡ್ ಸ್ಕೂಲ್ ಚಂದ್ರಶೇಖರ್ ರಾಜು ಸೇರಿದಂತೆ ಒಟ್ಟು 52 ಸಾಧಕರಿಗೆ ಪ್ರಶಸ್ತಿ ನಾಳೆ ಪ್ರಧಾನ ಮಾಡಲಾಗುತ್ತದೆ

PREV
Read more Articles on

Recommended Stories

ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌
ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ