ಹಳಿಗೆ ಮಣ್ಣು ಕುಸಿತ: ಬೆಂಗಳೂರು - ಮಂಗಳೂರು ರೈಲು ಸಂಚಾರ ವ್ಯತ್ಯಯ

Published : May 31, 2025, 09:55 AM IST
Jaipur to Kullu Manali Shimla Srinagar and Darjeeling Flight train from

ಸಾರಾಂಶ

ಪುತ್ತೂರು ತಾಲೂಕಿನ ನರಿಮೊಗರು ಬಳಿ ಮತ್ತೆ ಮಣ್ಣು ಕುಸಿತ ಸಂಭವಿಸಿದ್ದು, ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.

  ಪುತ್ತೂರು : ಪುತ್ತೂರು ತಾಲೂಕಿನ ನರಿಮೊಗರು ಬಳಿ ಮತ್ತೆ ಮಣ್ಣು ಕುಸಿತ ಸಂಭವಿಸಿದ್ದು, ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.

ರಾತ್ರಿ 9.29 ಕ್ಕೆ ಕಬಕ ಪುತ್ತೂರಿನಿಂದ ಹೊರಟ ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಎಕ್ಸ್‌ಪ್ರೆಸ್, ಪ್ರಸ್ತುತ ನರಿಮೊಗರು ಬಳಿಯ ಗಡಿಪಿಲ ಬಳಿ ನಿಂತಿದೆ ಮತ್ತು ಇನ್ನೂ ನರಿಮೊಗರು ರೈಲು ನಿಲ್ದಾಣ ದಾಟಿಲ್ಲ. ರೈಲು ಸಂಖ್ಯೆ 16512 ಕಣ್ಣೂರು - ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಪ್ರಸ್ತುತ ಕಬಕ ಪುತ್ತೂರಿನಲ್ಲಿ ನಿಲ್ಲಿಸಲಾಗಿದೆ. ಮಣ್ಣು ತೆರವು ಕಾರ್ಯಾಚರಣೆಯ ಪ್ರಗತಿಯಲ್ಲಿದೆ.

ಸುಬ್ರಹ್ಮಣ್ಯ ಮಾರ್ಗ ಜಲಾವೃತ:  ಪುತ್ತೂರಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನರಿಮೊಗರು ಸರ್ವೆ ಹಾಗೂ ಆಸುಪಾಸಿನ ಗ್ರಾಮದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.

ಮುಕ್ವೆ ನಯಾರ ಪೆಟ್ರೋಲ್‌ ಬಂಕ್ ಬಳಿ ಪುತ್ತೂರು - ಕಾಣಿಯೂರು ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆಯುದ್ದಕ್ಕೂ ಮಳೆ ನೀರು ನಿಂತಿದ್ದು ಪುತ್ತೂರು ಸುಬ್ರಹ್ಮಣ್ಯ ನಡುವೆ ವಾಹನ ಸಂಚಾರ ವ್ಯತ್ಯಯವಾಗಿದೆ. ರಸ್ತೆಯ ಎರಡು ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ