ಅನಧಿಕೃತವಾಗಿ ಪಡೆದ ರಜೆಗೆ ಮಾತೃತ್ವ ಅಸ್ತ್ರವಲ್ಲ : ಕೋರ್ಟ್‌

Published : Oct 25, 2026, 09:12 AM IST
Karnataka High court

ಸಾರಾಂಶ

ಮಾತೃತ್ವ ರಜಾ ಅವಧಿ ಪೂರ್ಣಗೊಂಡ ಬಳಿಕ ಅನಧಿಕೃತವಾಗಿ ರಜೆಯನ್ನು ವಿಸ್ತರಿಸಿಕೊಂಡು, ಗೈರು ಹಾಜರಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗದು ಎಂದಿರುವ ಹೈಕೋರ್ಟ್, ಮಹಿಳಾ ನೌಕರರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ನ್ಯಾಯಾಂಗ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದಿದೆ.

ಬೆಂಗಳೂರು : ಮಾತೃತ್ವ ರಜಾ ಅವಧಿ ಪೂರ್ಣಗೊಂಡ ಬಳಿಕ ಅನಧಿಕೃತವಾಗಿ ರಜೆಯನ್ನು ವಿಸ್ತರಿಸಿಕೊಂಡು, ಗೈರು ಹಾಜರಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗದು ಎಂದಿರುವ ಹೈಕೋರ್ಟ್, ಮಹಿಳಾ ನೌಕರರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ನ್ಯಾಯಾಂಗ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದಿದೆ.

ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಪ್ರೊಬೇಷನರಿ ಅವಧಿಯಲ್ಲಿದ್ದ ಮಹಿಳೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾನತೆ ಮೇಲಿನ ಸಾಂವಿಧಾನಿಕ ಬದ್ಧತೆಯಾಗಿದೆ. ಆದರೆ, ಅನಧಿಕೃತ ಗೈರುಹಾಜರಿಗೆ ಅಕ್ಷಯ ಪಾತ್ರೆ ಆಗುವಂತೆ ವಿಸ್ತರಿಸಲಾಗದು. ಅರ್ಜಿದಾರರು ಕಾನೂನುಬದ್ಧ ಮಾತೃತ್ವ ರಜೆಯನ್ನು ಪೂರ್ಣವಾಗಿ ಬಳಸಿಕೊಂಡಿದ್ದಾರೆ. ನಂತರ ರಜೆಗಳನ್ನು ಪಡೆದಿದ್ದಾರೆ. ಆ ಎಲ್ಲ ರಜೆಗಳ ಅವಧಿ ಮುಗಿದ ನಂತರವೂ ಅನುಮತಿಯಿಲ್ಲದೆ ದೀರ್ಘಕಾಲ ಗೈರು ಹಾಜರಾಗಿದ್ದಾರೆ ಎಂಬದು ದಾಖಲೆಗಳಿಂದ ಗೊತ್ತಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಸರ್ಕಾರಿ ಉದ್ಯೋಗವೆಂದರೆ ಅದು ಜವಾಬ್ದಾರಿಯುತ ಸ್ಥಾನ

ಸರ್ಕಾರಿ ಉದ್ಯೋಗವೆಂದರೆ ಅದು ಜವಾಬ್ದಾರಿಯುತ ಸ್ಥಾನವಾಗಿದೆ. ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಅಪೇಕ್ಷಿಸುತ್ತದೆ. ಅಸಂಖ್ಯಾತ ಅರ್ಹ ಯುವ ಸಮುದಾಯ ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿದೆ. ಇಂತಹ ಸನ್ನಿವೇಶನದಲ್ಲಿ ಸಿಕ್ಕ ಅವಕಾಶದ ಬಗ್ಗೆ ಉದಾಸೀನ ಮಾಡಬಾರದು. ಮಗು ಹುಟ್ಟಿದ ಕಾರಣ ನೀಡಿ ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ದೂರ ಉಳಿಯುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರರು 2019ರ ಜೂ.6ರಂದು ನ್ಯಾಯಾಂಗ ಇಲಾಖೆಯಲ್ಲಿ ಸಾಫ್ಟ್‌ವೇರ್ ತಂತ್ರಜ್ಞರಾಗಿ ನೇಮಕಗೊಂಡಿದ್ದರು. 2023ರ ಜು.1ರಂದು ಅವರು ಮಾತೃತ್ವ ರಜೆ ಪಡೆದಿದ್ದು, ಬಳಿಕ ವಿವಿಧ ಕಾರಣಗಳಿಂದ 2024ರ ಆ.14ರವರೆಗೆ ತಮ್ಮ ರಜೆಯನ್ನು ವಿಸ್ತರಿಸಿದ್ದರು. 2024ರ ಸೆ.25ರಂದು ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ಮಗುವನ್ನು ನೋಡಿಕೊಳ್ಳಲು ನಮ್ಮ ಜೊತೆ ಯಾರೂ ಇಲ್ಲ. ಪದೇ ಪದೇ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ. ಆದ್ದರಿಂದ, ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ. ಮತ್ತಷ್ಟು ದಿನ ರಜೆ ವಿಸ್ತರಿಸುವಂತೆ ಕೋರಿದ್ದರು. ರಜಾ ಅವಧಿ ಮುಗಿದು, ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಅವರು ಹುದ್ದೆಗೆ ಸೂಕ್ತವಲ್ಲ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಸೇವೆಯಿಂದ ಬಿಡುಗಡೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರಿನ ಪಿಜಿಯಲ್ಲಿದ್ದೀರಾ - ಹಾಗಾದ್ರೆ ಗಮನಿಸಿ ಈ ಸುದ್ದಿ ನಿಮಗೆ
ಕೆಪಿಎಸ್ಸಿ ಜ್ಞಾನೇಂದ್ರ ವಿರುದ್ಧದ ಚಾರ್ಜ್‌ಶೀಟ್‌ಗೆ ಸಿಎಂ ಸಮ್ಮತಿ