ವೈಟ್‌ಫೀಲ್ಡ್‌ನಿಂದ ನವದೆಹಲಿಗೆ ಕಂಟೇನರ್‌ ರೈಲು ಸೇವೆಗೆ ಸಚಿವ ವಿ.ಸೋಮಣ್ಣ ಚಾಲನೆ

Published : Sep 07, 2026, 07:48 AM IST
V Somanna

ಸಾರಾಂಶ

ದೇಶೀಯ ಸರಕು ಸಾಗಣೆಯನ್ನು ಬಲಪಡಿಸುವ ಉದ್ದೇಶದಿಂದ ವೈಟ್‌ಫೀಲ್ಡ್‌ನಿಂದ ನವದೆಹಲಿಯ ತುಘಲಕ್‌ಬಾದ್‌ಗೆ ಸಂಚರಿಸುವ ಕಂಟೇನರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದರು.

ಬೆಂಗಳೂರು : ದೇಶೀಯ ಸರಕು ಸಾಗಣೆಯನ್ನು ಬಲಪಡಿಸುವ ಉದ್ದೇಶದಿಂದ ವೈಟ್‌ಫೀಲ್ಡ್‌ನಿಂದ ನವದೆಹಲಿಯ ತುಘಲಕ್‌ಬಾದ್‌ಗೆ ಸಂಚರಿಸುವ ಕಂಟೇನರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದರು.

ವೈಟ್‌ಫೀಲ್ಡ್‌ ರೈಲು ನಿಲ್ದಾಣದಲ್ಲಿ ಕಂಟೇನರ್‌ ರೈಲು ಸೇವೆಗೆ ಚಾಲನೆ

ಭಾನುವಾರ ನಗರದ ವೈಟ್‌ಫೀಲ್ಡ್‌ ರೈಲು ನಿಲ್ದಾಣದಲ್ಲಿ ಕಂಟೇನರ್‌ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಇದು ಮೊಟ್ಟ ಮೊದಲ ಉಪಕ್ರಮವಾಗಿದೆ ಎಂದು ತಿಳಿಸಿದರು. ಬೆಂಗಳೂರು, ತುಮಕೂರು, ಹೊಸೂರು, ಕೋಲಾರ, ಕೃಷ್ಣಗಿರಿ ಮತ್ತು ಸುತ್ತಮುತ್ತಲಿನ ಸ್ಥಳಗಳ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ಸರಕುಗಳನ್ನು ಸಮಯಕ್ಕೆ ಅನುಗುಣವಾಗಿ ಸುರಕ್ಷಿತ ಸಾಗಣೆ ಮತ್ತು ದೊಡ್ಡ ಮಾರುಕಟ್ಟೆಗಳ ಪ್ರವೇಶಕ್ಕೆ ಇದು ಪ್ರಯೋಜನಕಾರಿಯಾಗಿದೆ. ಇದು ಖಚಿತವಾದ ಸಾರಿಗೆ ಸಮಯವನ್ನು ನೀಡುತ್ತದೆ. ಅಲ್ಲದೇ, ಉದ್ಯಮಕ್ಕೆ ವರದಾನವಾಗಲಿದೆ ಎಂದರು.

ಇದು ಸಾರಿಗೆಯಲ್ಲಿ ರೈಲ್ವೆಯ ಮಾದರಿ ಪಾಲನ್ನು ಹೆಚ್ಚಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ರಸ್ತೆ ಅಥವಾ ವಾಯು ಸರಕು ಸಾಗಣೆಗೆ ಹೋಲಿಸಿದರೆ ಇದು ಪರಿಸರ ಸ್ನೇಹಿ ಆಯ್ಕೆಯನ್ನು ನೀಡುತ್ತದೆ ಎಂದು ಹೇಳಿದರು.

ಬಹುಕಾಲದ ಬೇಡಿಕೆ ಈಡೇರಿಕೆ: ಮಂಜುಳಾ

ಈ ವೇಳೆ ಮಾತನಾಡಿದ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಬಹುಕಾಲದ ಬೇಡಿಕೆಯಾಗಿದ್ದ ಈ ಯೋಜನೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮುತುವರ್ಜಿಯಿಂದ ಅಧಿಕೃತ ಚಾಲನೆ ದೊರೆತಿದೆ. ಈ ಒಂದು ಮಹತ್ತರವಾದ ಯೋಜನೆಯಿಂದ ನಮ್ಮ ಕ್ಷೇತ್ರದಿಂದ ದೆಹಲಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸರಕು ಸಾಗಣೆ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ 80,000 ಕ್ಕೂ ಹೆಚ್ಚು ಅಮೆರಿಕನ್ ನಾಗರಿಕರು
ಬೆಂಗಳೂರು: ಮಳೆ ಕೊರತೆ ಹಿನ್ನೆಲೆ ನಗರದಲ್ಲಿ ಬಿಸಿಲ ಧಗೆ : 31.7 ಡಿಗ್ರಿ ಸೆಲ್ಸಿಯಸ್ ದಾಖಲು