ತೀವ್ರ ಮಳೆ ಕೊರತೆಯ ದುರ್ಬಲ ಮುಂಗಾರು ಅಧಿಕೃತವಾಗಿ ಮುಕ್ತಾಯವಾಗಲು ಇನ್ನು ಮೂರು ವಾರ ಬಾಕಿ ಇರುವಾಗಲೇ ನಗರದಲ್ಲಿ ಬಿಸಿಲಿನ ತಾಪಮಾನ ಜೋರಾಗಿದೆ. ಭಾನುವಾರ ನಗರದಲ್ಲಿ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಂಗಳೂರು: ತೀವ್ರ ಮಳೆ ಕೊರತೆಯ ದುರ್ಬಲ ಮುಂಗಾರು ಅಧಿಕೃತವಾಗಿ ಮುಕ್ತಾಯವಾಗಲು ಇನ್ನು ಮೂರು ವಾರ ಬಾಕಿ ಇರುವಾಗಲೇ ನಗರದಲ್ಲಿ ಬಿಸಿಲಿನ ತಾಪಮಾನ ಜೋರಾಗಿದೆ. ಭಾನುವಾರ ನಗರದಲ್ಲಿ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗರಿಷ್ಠ ತಾಪಮಾನ

ಇದು ಸೆಪ್ಟಂಬರ್ ತಿಂಗಳಲ್ಲಿ ಮೂರು ವರ್ಷಗಳ ಬಳಿಕ ದಾಖಲಾದ ಗರಿಷ್ಠ ತಾಪಮಾನವಾಗಿದೆ. 2023ರಲ್ಲಿ ಸೆಪ್ಟಂಬರ್‌ನಲ್ಲಿ ಗರಿಷ್ಠ ತಾಪಮಾನ 32.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಂತರದ ಎರಡು ವರ್ಷಗಳಲ್ಲಿ ಸೆಪ್ಟಂಬರ್ ತಿಂಗಳ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಗ್ರಾಮಾಂತರ ಜಿಲ್ಲೆಯಲ್ಲಿಯು ಬಿಸಿಲಿನ ತೀವ್ರತೆ

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯು ಬಿಸಿಲಿನ ತೀವ್ರ ಹೆಚ್ಚಾಗಿದ್ದು, ಭಾನುವಾರ 33.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಳೆ, ಮೋಡಗಳು ಕಡಿಮೆಯಾಗಿ ಒಣ ಹವೆ ಬೀಸುತ್ತಿರುವುದರಿಂದ ನಗರದಲ್ಲಿ ತಾಪಮಾನ ಹೆಚ್ಚಳವಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಸೆ.10ರವರೆಗೆ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಇಲ್ಲ. ತಾಪಮಾನ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.