ಮೈಸೂರು ಸಂಸ್ಥೆಯ ಪಕ್ಷಿ ಅರಿವು ಅಭಿಯಾನಕ್ಕೆ ಮೋದಿ ಶ್ಲಾಘನೆ - ಮನ್‌ ಕೀ ಬಾತ್‌ನಲ್ಲಿ ಪ್ರಶಂಸೆ

ಸಾರಾಂಶ

ಮೈಸೂರಿನ ಸಂಸ್ಥೆಯೊಂದು ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ಅಭಿಯಾನ ನಡೆಸುತ್ತಿದೆ. ಇದು ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಶಿಸಿದ್ದಾರೆ

ನವದೆಹಲಿ: ಮೈಸೂರಿನ ಸಂಸ್ಥೆಯೊಂದು ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ಅಭಿಯಾನ ನಡೆಸುತ್ತಿದೆ. ಇದು ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಶಿಸಿದ್ದಾರೆ, ತಮ್ಮ ಮಾಸಿಕ ‘ಮನ್‌ ಕೀ ಬಾತ್‌ ರೇಡಿಯೋ’ ಭಾಷಣ ಮಾಡಿದ ಅವರು, ‘ಇಂಗ್ಲಿಷ್‌ನ ಸ್ಪ್ಯಾರೋ ಪದಕ್ಕೆ ಕನ್ನಡದಲ್ಲಿ ಗುಬ್ಬಿ ಎಂದರ್ಥ. ಆದರೆ ಇಂದು ನಗರೀಕರಣದ ಕಾರಣ ನಗರಗಳಲ್ಲಿ ಈ ಗುಬ್ಬಚ್ಚಿಗಳು ಬಹಳ ವಿರಳವಾಗಿವೆ’ ಎಂದು ಬೇಸರಿಸಿದರು.

‘ಕರ್ನಾಟಕದ ಮೈಸೂರಿನಲ್ಲಿ ಒಂದು ಸಂಸ್ಥೆಯು ಮಕ್ಕಳಿಗಾಗಿ ‘ಅರ್ಲಿ ಬರ್ಡ್’ ಎಂಬ ಹೆಸರಿನ ಅಭಿಯಾನ ಆರಂಭಿಸಿದೆ. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ವಿಶೇಷ ರೀತಿಯ ಗ್ರಂಥಾಲಯ ನಡೆಸುತ್ತದೆ. 

ಅಷ್ಟೇ ಅಲ್ಲದೇ, ಮಕ್ಕಳಿಗೆ ಪ್ರಕೃತಿಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿಸುವುದಕ್ಕಾಗಿ ‘Nature Education Kit’ ಸಿದ್ಧಪಡಿಸಿದೆ. ಈ ಕಿಟ್ ನಲ್ಲಿ ಮಕ್ಕಳಿಗಾಗಿ ಕತೆ ಪುಸ್ತಕ, ಆಟಗಳು, ಆಕ್ಟಿವಿಟಿ ಹಾಳೆಗಳು ಮತ್ತು ಜಿಗ್ ಸಾ ಒಗಟುಗಳು ಇರುತ್ತವೆ. ಈ ಸಂಸ್ಥೆ ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗುತ್ತದೆ ಮತ್ತು ಆ ಮಕ್ಕಳಿಗೆ ಪಕ್ಷಿಗಳ ಕುರಿತು ತಿಳಿಸಿಹೇಳುತ್ತದೆ. ಈ ಸಂಸ್ಥೆಯ ಪ್ರಯತ್ನಗಳ ಕಾರಣದಿಂದಾಗಿ ಮಕ್ಕಳು ಪಕ್ಷಿಗಳ ಅನೇಕ ಪ್ರಭೇದಗಳನ್ನು ಗುರುತಿಸಲು ಶಕ್ತರಾಗುತ್ತಿದ್ದಾರೆ. ಇದು ಮಾದರಿ ಕಾರ್ಯ’ ಎಂದರು.

Share this article