ಕೋಣನಕುಂಟೆ ಕ್ರಾಸ್‌ ಟ್ರಾಫಿಕ್‌ ನಿವಾರಣೆಗೆ ಹೊಸ ಪ್ಲಾನ್

Published : Nov 22, 2026, 08:45 AM IST
Bengaluru Traffic

ಸಾರಾಂಶ

ನಗರದ ಕೋಣನಕುಂಟೆ ಕ್ರಾಸ್‌ನಲ್ಲಿ ಸಂಚಾರ ಸಮಸ್ಯೆ ನಿವಾರಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಾರ್ಡ್ ಒನ್ ಅಭಿಯಾನಕ್ಕೆ ಕೋಣನಕುಂಟೆ ಕ್ರಾಸ್‌ನಲ್ಲಿ ಗೋಡೆಗೆ ಬಣ್ಣ ಬಳಿಯುವ ಮೂಲಕ ಚಾಲನೆ

ಬೆಂಗಳೂರು : ನಗರದ ಕೋಣನಕುಂಟೆ ಕ್ರಾಸ್‌ನಲ್ಲಿ ಸಂಚಾರ ಸಮಸ್ಯೆ ನಿವಾರಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಾರ್ಡ್ ಒನ್ ಅಭಿಯಾನ

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ ಮೂರನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಕೋಣನಕುಂಟೆ ಕ್ರಾಸ್‌ನಲ್ಲಿ ಗೋಡೆಗೆ ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ-ಸ್ಮೈಲ್ ವತಿಯಿಂದ 600 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಅವಕಾಶವಾಗಲಿದೆ ಎಂದರು.

ಪಾದಚಾರಿಗಳ ಸುಗಮ ಸಂಚಾರಕ್ಕೆ ಮೆಟ್ಟಿಲು

ಫೋರಂ ಮಾಲ್ ಸಮೀಪ ಮೆಟ್ರೋಗೆ ಸೇರಿದ ಜಾಗವನ್ನು ಖರೀದಿಸಿ ಯಾವುದೇ ತಡೆ ಇಲ್ಲದೆ, ಎಡತಿರುವು ಪಡೆಯುವ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಮಾಲ್ ಮುಂದಿನ ತಡೆಗೋಡೆ ಕೂಡಲೇ ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಮೆಟ್ಟಿಲು ನಿರ್ಮಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ನವೆಂಬರ್ 1ರಿಂದ ಆರಂಭಿಸಲಾಗಿದ್ದ ವಾರ್ಡ್ ಒನ್ ಅಭಿಯಾನವನ್ನು ಡಿಸೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು. ಇಂದು ಮೂರನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 43 ವಾರ್ಡ್‌ಗಳು, ಎರಡನೇ ಹಂತದಲ್ಲಿ 40 ವಾರ್ಡ್‌ಗಳು ಹಾಗೂ ಮೂರನೇ ಹಂತದಲ್ಲಿ 41 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಶಾಸಕ ಕೃಷ್ಣಪ್ಪ, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಹೆಚ್ಚುವರಿ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ಲೋಕೇಶ್ ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜನರು ನನ್ನ ಮಾತು ಕೇಳಿದ್ದರಿಂದ ಚಿನ್ನದ ಬೆಲೆ ಇಳಿಕೆ: ಮೋದಿ
ಅಮೆರಿಕಕ್ಕೆ ಪರಾರಿ ಯತ್ನ ವೇಳೆ ಬಸವ ಕೃತಿ ಲೇಖಕ ರವಿ ವಶಕ್ಕೆ