ವೆಚ್ಚ ಕಡಿತ, ಲಾಭಕ್ಕಾಗಿ 1000 ಸಿಬ್ಬಂದಿ ವಜಾಕ್ಕೆ ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಕಂಪನಿ ಓಲಾ ಕಂಪನಿ ಸಿದ್ಧತೆ

ಸಾರಾಂಶ

ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಕಂಪನಿ ಓಲಾ ನಷ್ಟದಲ್ಲಿದ್ದು, 1000 ನೌಕರರು ಮತ್ತು ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

 ನವದೆಹಲಿ:  ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಕಂಪನಿ ಓಲಾ ನಷ್ಟದಲ್ಲಿದ್ದು, 1000 ನೌಕರರು ಮತ್ತು ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಕಂಪನಿಯ ಇ-ಸ್ಕೂಟರ್‌ಗಳ ಮಾರಾಟ ಕಡಿಮೆಯಾಗಿದ್ದು, ಲಾಭ ಇಲ್ಲದಂತಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದೆ. 

ಈ ಹಿನ್ನೆಲೆ, ವೆಚ್ಚ ಸರಿದೂಗಿಸುವ ಉದ್ದೇಶದಿಂದ ವಿವಿಧ ವಿಭಾಗಗಳಲ್ಲಿರುವ ಹೆಚ್ಚುವರಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಳೆದ ನವೆಂಬರ್‌ನಲ್ಲಷ್ಟೆ 500 ನೌಕರರರನ್ನು ತೆಗೆದುಹಾಕಲಾಗಿತ್ತು.

Share this article