ಮಸಾಲೆ ದೋಸೆ ಹೋಟೆಲ್‌ಗೆ ಬರೋದು ಮಸಾಲೆ ದೋಸೆ ನಿರೀಕ್ಷೆಯಲ್ಲೇ: ಗಣೇಶ್‌

Published : Nov 20, 2026, 12:08 PM IST
Golden Star Ganesh

ಸಾರಾಂಶ

ಗಣೇಶ್‌ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಸಮೃದ್ಧಿ ಮಂಜುನಾಥ್‌ ನಿರ್ಮಿಸಿ, ಶ್ರೀನಿವಾಸ್‌ ರಾಜು ನಿರ್ದೇಶಿಸಿರುವ ಈ ಚಿತ್ರವಿದು. ಈ ಚಿತ್ರದ ನಾಯಕನ ಮಾತುಗಳನ್ನು ಅಲಿಸಿ.

ಆರ್‌.ಕೇಶವಮೂರ್ತಿ

ನಿಮ್ಮ ಮತ್ತು ನಿರ್ದೇಶಕ ಶ್ರೀನಿವಾಸು ರಾಜು ಅವರ ಕಾಂಬಿನೇಷನ್‌ ಹೆಚ್ಚು ಅಚ್ಚರಿ ಮೂಡಿಸುತ್ತಿದೆಯಲ್ಲವೇ?

ಹೌದು. ಮೊದಲ ಚಿತ್ರ ಮಾಡಿದಾಗ ಈ ಅಚ್ಚರಿ ಇತ್ತು. ಆದರೆ, ನನ್ನ ಮತ್ತು ಶ್ರೀನಿವಾಸ್‌ ರಾಜು ಅವರ ಕಾಂಬಿನೇಶನ್‌ ಎರಡನೇ ಚಿತ್ರದ ಹೊತ್ತಿಗೆ ಪರ್‌ಫೆಕ್ಟ್‌ ಬ್ಲೆಂಡ್‌ ಅನಿಸಿದೆ. ಒಳ್ಳೆಯ ಕಾಂಬಿನೇಶನ್‌. ಈ ಹಿಂದಿನ ಚಿತ್ರಕ್ಕಿಂತಲೂ ಎರಡು ಪಟ್ಟು ಖುಷಿ ಕೊಡುವ ಸಿನಿಮಾ ‘ಬೃಂದಾವಿಹಾರಿ’.

ಸಕ್ಸಸ್‌ಫುಲ್ ಕಾಂಬಿನೇಷನ್‌ ಪ್ಲಸ್ ಪಾಯಿಂಟ್ ಆಗುತ್ತಾ ಅಥವಾ ನಿರೀಕ್ಷೆಗಳ ಒತ್ತಡ ಹೆಚ್ಚಿಸುತ್ತಾ?

ಪ್ರೇಕ್ಷಕರು ಕೊಡುವ ರಿಸಲ್ಟ್‌ ಮೇಲೆ ಇದರ ಉತ್ತರ ನಿಂತಿರುತ್ತದೆ. ಎಲ್ಲವೂ ಕೂಡಿ ಬಂದಾಗ ಪ್ಲಸ್‌ ಆಗುತ್ತದೆ. ಕೂಡಿ ಬರದೆ ಇದ್ದಾಗ ಮತ್ತೊಂದು ಪ್ರಯತ್ನ ಮಾಡುತ್ತೇವೆ. ಕೂಡಿ ಬರುವ ತನಕ ಅಂದರೆ ರಿಸಲ್ಟ್‌ ಕೊಡುವ ತನಕ ನಿರೀಕ್ಷೆಗಳ ಒತ್ತಡ ಇದ್ದೇ ಇರುತ್ತದೆ.

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಗುಂಗಿನಲ್ಲೇ ‘ಬೃಂದಾವಿಹಾರಿ’ ನೋಡಲು ಬರುವ ಪ್ರೇಕ್ಷಕರಿಗೆ ನಿಮ್ಮ ಉತ್ತರವೇನು?ಬಂದರೆ ತಪ್ಪೇನಿಲ್ಲ. ಈಗ ಮಸಾಲೆ ದೋಸೆ ಹೋಟೆಲ್‌ಗೆ ಯಾಕೆ ಹೋಗುತ್ತೇವೆ ಹೇಳಿ ಅಲ್ಲಿ ಮಸಾಲೆ ದೋಸೆ ಚೆನ್ನಾಗಿರುತ್ತದೆ ಎಂದು ತಾನೆ? ಮಸಾಲೆ ದೋಸೆ ಹೋಟೆಲ್‌ನಲ್ಲಿ ಬಿರಿಯಾನಿ ಹೇಗಿರುತ್ತದೆ ಅಂತ ನಿರೀಕ್ಷೆ ಮಾಡಿಕೊಂಡು ಹೋಗುತ್ತಾರೆಯೇ? ಇಲ್ಲ. ಹಾಗೆಯೇ ಬಿರಿಯಾನಿ ಹೋಟೆಲ್‌ಗೆ ಹೋಗುವವರು ಅನ್ನ, ಸಾರು ಹೇಗಿರುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಗುಂಗಿನಲ್ಲೇ ಬಂದು ‘ಬೃಂದಾವಿಹಾರಿ’ ಚಿತ್ರವನ್ನು ನೋಡಿ.

‘ಬೃಂದಾವಿಹಾರಿ’ ಎಂಬ ಶೀರ್ಷಿಕೆಯ ಹಿಂದಿನ ವಿಶೇಷತೆಯೇನು? ಹೆಸರಿಗೂ ಕಥೆಗೂ ಸಂಬಂಧವಿದೆಯೇ?

ಇದು ಬೃಂದಾವನ ಎನ್ನುವ ಊರಿನಲ್ಲಿ ವಿಹರಿಸುವವನ ಕತೆ. ಹಾಗೆ ವಿಹರಿಸುವವನು ಚಿತ್ರದ ನಾಯಕ ಮಾಧವ. ಈ ಮಾಧವನ ಕತೆ. ಹೀಗಾಗಿ ಮಾದವ, ಬೃಂದಾವನ ಮತ್ತು ಅಲ್ಲಿನ ವಿಹಾರವೇ ಚಿತ್ರದ ಕತೆ. ಈ ಕಾರಣಕ್ಕೆ ಚಿತ್ರಕ್ಕೆ ‘ಬೃಂದಾವಿಹಾರಿ’ ಎನ್ನುವ ಹೆಸರು ಇಟ್ಟಿದ್ದೇವೆ.

ಈ ಚಿತ್ರಕ್ಕೆ ನಿಮ್ಮನ್ನು ಮೊದಲು ಆಕರ್ಷಿಸಿದ್ದು ಕಥೆಯೋ, ಪಾತ್ರವೋ ಅಥವಾ ನಿರೂಪಣೆಯೋ?

ನನ್ನ ಪಾತ್ರ ಮತ್ತು ನಿರೂಪಣೆ. ಚಿತ್ರಕಥೆಯಲ್ಲಿ ನಿರ್ದೇಶಕ ಶ್ರೀನಿವಾಸ್‌ ರಾಜು ಅವರು ಅದ್ಭುತ ಕೆಲಸಗಾರ. ಅವರ ನಿರೂಪಣೆಗೆ ನಾನು ಅಭಿಮಾನಿ. ಸಾಕಷ್ಟು ಸರ್ಪೈಸ್ ಎಲಿಮೆಂಟ್ಸ್‌, ಮಜಾ ಕೊಡುವ ಅಂಶಗಳನ್ನು ಭಿನ್ನವಾಗಿ ನಿರೂಪಿಸುತ್ತಾ ಹೋಗಿದ್ದಾರೆ.

ನಿಮ್ಮ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿ ನಿಮ್ಮನ್ನು ಹೊಸ ರೀತಿಯಲ್ಲಿ ಪರಿಚಯಿಸುವ ಪಾತ್ರ ಇದಾಗಿದೆಯೇ?

ಹೌದು. ಕಾಸ್ಟೂಮ್‌ನಲ್ಲೇ ಬೇರೆ ರೀತಿ ತೋರಿಸಿದ್ದಾರೆ. ಇಲ್ಲಿ ಮಾಧವ ಎನ್ನುವ ನನ್ನ ಪಾತ್ರಕ್ಕೆ ಇರುವುದು ಒಂದೇ ಶೇಡ್‌. ಆದರೆ, ಉಳಿದ ಎಲ್ಲಾ ಪಾತ್ರಗಳಿಗೂ ಎರಡು ಶೇಡ್‌ ಇದೆ. ಅದು ಯಾಕೆ ಎಂಬುದು ಭಿನ್ನತೆ ಮತ್ತು ಹೊಸತನ.

ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾದಾಗ ಯಾವೆಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ?

ಒಂದು ಚಿತ್ರದ ದಿನಾಂಕ ಮುಂದೂಡುವುದು ಎಂದರೆ ಅದು ಜಸ್ಟ್‌ ಡೇಟ್‌ ಮಾತ್ರ ಆಗಿರಲ್ಲ. ಎಲ್ಲರ ಶ್ರಮವನ್ನು ಮುಂದೂಡಿದಂತೆ. ಇನ್ನೊಂದು ಚಿತ್ರಕ್ಕೆ ಹಾಕುವಷ್ಟು ಶ್ರಮವನ್ನು ಹೂಡಿಕೆ ಮಾಡಿದಂತೆ. ಹಣ, ಪ್ರಚಾರ, ನಾಯಕ- ಕಲಾವಿದರ ಡೇಟ್ಸ್‌ ಎಲ್ಲವೂ ಅದಲುಬದಲು ಆಗುತ್ತದೆ. ಆದರೆ, ನಾವು ಒಂದೇ ಮರದ ಹಕ್ಕಿಗಳು. ಇಲ್ಲಿ ಮರ ಅಂದರೆ ಸಿನಿಮಾ, ಹಕ್ಕಿಗಳೆಂದರೆ ನಾವುಗಳು. ಪರಸ್ಪರ ಹೊಂದಿಕೊಂಡು ಹೋಗಬೇಕು.

ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಆತಂಕ ಹೆಚ್ಚಿರುತ್ತದೆಯೋ ಅಥವಾ ಕುತೂಹಲ ಹೆಚ್ಚಿರುತ್ತದೆಯೋ?

ಆತಂಕ ಮತ್ತು ಕುತೂಹಲ ಎರಡೂ ಇರುತ್ತದೆ. ಪ್ರೇಕ್ಷಕರು ಯಾವ ರೀತಿ ರಿಯಾಕ್ಟ್‌ ಮಾಡುತ್ತಾರೋ ಎನ್ನುವ ಯೋಚನೆ ಖಂಡಿತ ಕಾಡುತ್ತದೆ. ಇದು ಸಿನಿಮಾ ಫಸ್ಟ್‌ ಡೇ ಫಸ್ಟ್‌ ಶೋ ತೆರೆ ಮೇಲೆ ಮೂಡುವ ತನಕ. ಆ ನಂತರ ಚಿಂತೆ ಇರಲ್ಲ.

‘ಬೃಂದಾವಿಹಾರಿ’ ಚಿತ್ರದ ಅತಿದೊಡ್ಡ ಶಕ್ತಿಯೇನು?

ಪ್ರೇಕ್ಷಕರನ್ನು ಮನಮುಟ್ಟುವ ಸಿನಿಮಾ. ನಿರೂಪಣೆ ಸಾದಾ- ಸೀದಾ ಅಲ್ಲ. ಸಖತ್‌ ಕುತೂಹಕಾರಿ ನಿರೂಪಣೆ ಇದೆ. ಹೀಗಾಗಿ ಸಿನಿಮಾ ಕೊನೆವರೆಗೂ ನೋಡೋಣ ಎನ್ನುವ ಭಾವನೆ ಪ್ರೇಕ್ಷಕರಲ್ಲಿ ಮೂಡಿಸುತ್ತದೆ.

ನಿಮ್ಮ ನಿರೀಕ್ಷೆಯಲ್ಲಿ ಈ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಉಳಿಸಲಿದೆ?

ನಾವು ನಿರೀಕ್ಷೆ ಮಾಡಿದ್ದನ್ನು ಈ ಚಿತ್ರದಲ್ಲಿ ಕೊಟ್ಟಿದ್ದಾರೆ. ನಮ್ಮ ನಿರೀಕ್ಷಗಳು ಹುಸಿಯಾಗಿಲ್ಲ. ಒಂದು ಒಳ್ಳೆಯ ಸಿನಿಮಾ ಎನ್ನುವ ಭಾವನೆಯನ್ನು ಪ್ರೇಕ್ಷಕರಲ್ಲಿ ನಮ್ಮ ಸಿನಿಮಾ ಮೂಡಿಸುತ್ತದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸಚಿವರು, ಶಾಸಕರಿಗೆ ಸಿಎಂ ‘ಗೃಹಪ್ರವೇಶ’ ಔತಣ
ಬಸವಮಂಟಪ’ ವಿರುದ್ಧ ಭುಗಿಲೆದ್ದ ಆಕ್ರೋಶ