;Resize=(412,232))
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 15,600 ಕೋಟಿ ರು.ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಅನೇಕ ಯೋಜನೆಗಳು ರಾಜ್ಯದ ಪಾಲಿಗೆ ಪ್ರಥಮಗಳಾಗಿವೆ.
ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ 80,000 ಮೆಟ್ರಿಕ್ ಟನ್ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾಗಾರವನ್ನು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ.
ಶುಕ್ರವಾರ ಸಂಜೆ ಮೈಸೂರಿನಲ್ಲಿ ‘ಕಾಸ್ಮೋಸ್-ಮೈಸೂರು ತಾರಾಲಯ’ವನ್ನು ಮೋದಿ ಉದ್ಘಾಟಿಸಲಿದ್ದಾರೆ. ಇದು ಭಾರತದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ. ಎಲ್‌ಇಡಿ ಡೋಮ್ 15 ಡಿಗ್ರಿ ಕೋನದಲ್ಲಿ ಓರೆಯಾಗಿದ್ದು (ಟಿಲ್ಡೆಡ್), ವೀಕ್ಷಕರಿಗೆ ಅತ್ಯಂತ ಉತ್ತಮ ಹಾಗೂ ನೈಜ ಆಕಾಶಕಾಯಗಳ ಅನುಭವ ನೀಡುತ್ತದೆ.
3. ಬೆಂಗಳೂರು ಮೆಟ್ರೋ ಮೊದಲ ಬಾರಿ 100 ಕಿ.ಮೀ. ವ್ಯಾಪ್ತಿಗೆ
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ-ತಾವರೆಕೆರೆ ಮೆಟ್ರೋ ಪಿಂಕ್ ಲೈನ್‌ಗೆ ಮೋದಿ ಹಸಿರು ನಿಶಾನೆ ತೋರಿಸಿ, ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಇದರೊಂದಿಗೆ ಬೆಂಗಳೂರು ಮೆಟ್ರೋ ವ್ಯಾಪ್ತಿ 100 ಕಿ.ಮೀ. ಆಚೆ ಮೊದಲ ಬಾರಿ ವಿಸ್ತರಣೆ ಆಗಲಿದೆ. ಈವರೆಗೆ ಮೆಟ್ರೋ 96 ಕಿ.ಮೀ. ವ್ಯಾಪ್ತಿ ಹೊಂದಿತ್ತು.
4. ಬೆಂಗಳೂರಿಂದ ಮಂಗಳೂರು, ಗೋವಾಗೆ ವಂದೇಭಾರತ್
ಬೆಂಗಳೂರಿಂದ ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸೇವೆಗೆ ಮೋದಿ ಚಾಲನೆ ನೀಡಲಿದ್ದಾರೆ. ಇದು ರಾಜಧಾನಿಯನ್ನು ಕರಾವಳಿಗೆ ಸಂಪರ್ಕಿಸುವ ಮೊದಲ ವಂದೇ ಭಾರತ್ ರೈಲಾಗಿದೆ.