ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸರ್ವೀಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಜನಪ್ರಿಯ ವಿದೂಷಕ ಕುನಾಲ್ ಕಮ್ರಾ ಮತ್ತು ಓಲಾ ಕಂಪನಿ ಮಾಲೀಕ ಭವೀಶ್ ಅಗರ್‌ವಾಲ್ ನಡುವೆ ವಾಕ್ಸಮರ ನಡೆದಿದೆ.
ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸರ್ವೀಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಜನಪ್ರಿಯ ವಿದೂಷಕ ಕುನಾಲ್ ಕಮ್ರಾ ಮತ್ತು ಓಲಾ ಕಂಪನಿ ಮಾಲೀಕ ಭವೀಶ್ ಅಗರ್‌ವಾಲ್ ನಡುವೆ ವಾಕ್ಸಮರ ನಡೆದಿದೆ.
ಓಲಾ ಸರ್ವೀಸ್ ಸೆಂಟರ್‌ನಲ್ಲಿ ದುರಸ್ತಿಗಾಗಿ ಕಾದಿರುವ ನೂರಾರು ಬೈಕ್‌ಗಳ ಫೋಟೋ ಟ್ವೀಟ್ ಮಾಡಿರುವ ಕುನಾಲ್, ‘ಭಾರತೀಯ ಗ್ರಾಹಕರ ಧ್ವನಿಗೆ ಬೆಲೆ ಇದೆಯೇ?’ ಎಂದಿದ್ದಾರೆ. ಇದಕ್ಕೆ ಭವೀಶ್ ತರುಗೇಟು ನೀಡಿ ‘ಈ ವಿಷಯದ ಬಗ್ಗೆ ನೀವು ಇಷ್ಟೊಂದು ಕಳವಳ ಹೊಂದಿರುವ ಕಾರಣ, ನೀವೇ ನಮಗೆ ಸಹಾಯ ಮಾಡಿ. ಇದಕ್ಕೆ ನಿಮ್ಮ ವಿದೂಷಕ ವೃತ್ತಿಗಿಂತ ಹೆಚ್ಚು ನೀಡುವೆ’ ಎಂದಿದ್ದಾರೆ.